ಜೋಹಾನ್ಸ್ಬರ್ಗ್: ಬುಧವಾರ ದಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 187 ರನ್ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾದ ಬೌಲರ್ಗಳು ಪ್ರಾರಂಭದಲ್ಲಿಯೇ ಭಾರತೀಯ ಬ್ಯಾಟ್ಸ್ಮನ್ಗಳಾದ ಲೋಕೇಶ್ ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನು ಔಟ್ ಮಾಡುವುದರ ಮೂಲಕ ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಭಾರತದ ಪರ ವಿರಾಟ್ ಕೊಹ್ಲಿ (54) ಮತ್ತು ಚೇತೇಶ್ವರ ಪೂಜಾರ ಮಾತ್ರ ರಕ್ಷಣಾತ್ಮಕ ಅರ್ಧಶತಕ ಸಿಡಿಸಿದ್ದನ್ನು ಬಿಟ್ಟರೆ, ಉಳಿದವರು ಯಾರು ಕೂಡಾ ದಕ್ಷಿಣ ಆಫ್ರಿಕಾದ ಬೌಲರಗಳಿಗೆ ಪ್ರತಿರೋಧ ತೋರಲಿಲ್ಲ. ಭಾರತ ತಂಡವು ತನ್ನ ಕೊನೆಯ 6 ವಿಕೆಟ್ಗಳು ಕೇವಲ 43 ರನ್ ಅಂತರದಲ್ಲಿ ಉರುಳಿದ್ದರಿಂದಾಗಿ ಭಾರತ ಮತ್ತೊಮ್ಮೆ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾದ ಬೌಲರ್ಗಳ ಪೈಕಿ ಕ್ಯಾಗಿಸೊ ರಬಾಡಾ 39 ರನ್ಗಳಿಗೆ 3 ವಿಕೆಟ್ ಪಡೆದರೆ. ಮೊರ್ನೆ ಮೊರ್ಕೆಲ್, ವೆರ್ನಾನ್ ಫಿಲಾಂಡರ್ ಮತ್ತು ಅಂಡೈಲ್ ಫೆಹಲ್ಕ್ವೇವೊ ತಲಾ ಎರಡು ವಿಕೆಟ್ ಪಡೆದರು. ಸದ್ಯ ದಕ್ಷಿಣ ಆಫ್ರಿಕಾ ತಂಡವು 6 ರನ್ ಗಳಿಗೆ ಐಡೆನ್ ಮಾರ್ಕ್ರಾಮ್ನ ವಿಕೆಟ್ ಕಳೆದುಕೊಂಡಿದೆ.