IND vs ENG : ಟಿ20 ಎರಡನೇ ಮ್ಯಾಚ್ ಗೆ ಬುಮ್ರಾ ರಿಟರ್ನ್ : ಸರಣಿಯಿಂದ ಈ ಬೌಲರ್ ಹೊರಗೆ!

ಮುಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಕೆಲ ಹಿರಿಯ ಆಟಗಾರರು ಮರಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 

Written by - Channabasava A Kashinakunti | Last Updated : Jul 8, 2022, 07:12 PM IST
  • ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ
  • ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 50 ರನ್‌ಗಳಿಂದ ಸೋಲಿಸಿತು
  • ಮುಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಕೆಲ ಹಿರಿಯ ಆಟಗಾರರು ಮರಳಲಿದ್ದಾರೆ
IND vs ENG : ಟಿ20 ಎರಡನೇ ಮ್ಯಾಚ್ ಗೆ ಬುಮ್ರಾ ರಿಟರ್ನ್ : ಸರಣಿಯಿಂದ ಈ ಬೌಲರ್ ಹೊರಗೆ! title=

IND vs ENG T20 : ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 50 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ ತಂಡವೂ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ20ಯಲ್ಲಿ ಭಾರತ ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ, ಇದರಿಂದಾಗಿ ಪಂದ್ಯದುದ್ದಕ್ಕೂ ಭಾರತ ತಂಡ ಇಂಗ್ಲೆಂಡ್ ಮೇಲೆ ಪ್ರಾಬಲ್ಯ ಸಾಧಿಸಿತು. ಆದರೆ ಇನ್ನೂ ಎರಡನೇ ಟಿ20ಯಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11ರಲ್ಲಿ ಭಾರಿ ಬದಲಾವಣೆಗಳು ನಡೆಯಲಿದ್ದು, ಮುಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಕೆಲ ಹಿರಿಯ ಆಟಗಾರರು ಮರಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 

2ನೇ ಟಿ20 ಮ್ಯಾಚ್ ಗೆ ಬುಮ್ರಾ ಎಂಟ್ರಿ

ಟೀಂ ಇಂಡಿಯಾ ಶನಿವಾರ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ. ಅಷ್ಟೇ ಅಲ್ಲ ಮುಂದಿನ ಪಂದ್ಯದಲ್ಲಿ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಮರಳಲಿದ್ದಾರೆ. ಬುಮ್ರಾ ಪ್ರಸ್ತುತ ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ, ಬುಮ್ರಾ ಮರಳಿರುವುದು ಟೀಂ ಇಂಡಿಯಾದ ಬೌಲಿಂಗ್ ಗೆ ಹೆಚ್ಚಿನ ಬಲ ನೀಡಲಿದೆ.

ಇದನ್ನೂ ಓದಿ : IND vs ENG : ಟಿ20 ಎರಡನೇ ಮ್ಯಾಚ್ ಗೆ ಟೀಂ ಇಂಡಿಯಾ Playing 11 ಲಿಸ್ಟ್

ಈ ಬೌಲರ್ ಸರಣಿಯಿಂದ ಔಟ್ 

ಮೊದಲ ಟಿ20ಯಲ್ಲಿ ಟೀಂ ಇಂಡಿಯಾದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಬುಮ್ರಾಗೆ ತಂಡದಲ್ಲಿ ಸ್ಥಾನ ನೀಡಲು ಒಬ್ಬ ಬೌಲರ್‌ ಹೊರಗುಳಿಯಲೆಬೇಕು. ಬೌಲರ್ ಹರ್ಷಲ್ ಪಟೇಲ್ ಉತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಹರ್ಷಲ್ ಬೌಲಿಂಗ್ ಬುಮ್ರಾಗಿಂತ ಕಡಿಮೆ ಶಕ್ತಿಯುತವಾಗಿದೆ. ಹೀಗಾಗಿ, ಬೌಲರ್ ಹರ್ಷಲ್ ಪಟೇಲ್ ಸರಣಿಯಿಂದ  ಹೊರಗುಳಿಯಲಿದ್ದಾರೆ. ಎಡಗೈ ವೇಗದ ಬೌಲರ್ ಆಗಿ ಅರ್ಷದೀಪ್ ಸಿಂಗ್ ಮತ್ತೊಮ್ಮೆ ತಂಡಕ್ಕೆ ಎಂಟ್ರಿ ನೀಡುವುದು ಖಚಿತವಾಗಿದೆ. ಚೊಚ್ಚಲ ಪಂದ್ಯದ ಮೊದಲ ಓವರ್ ಮೇಡನ್ ಎಸೆದ ಜೊತೆಗೆ ಎರಡು ಪ್ರಮುಖ ವಿಕೆಟ್ ಗಳನ್ನೂ ಕಬಳಿಸಿದರು. ಅದಕ್ಕೆ, ಬುಮ್ರಾ ಜೊತೆ ಈ ಬೌಲರ್‌ನ ಜೊತೆಯಾಟವು ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಮಣಿಸಲಿವೆ.

ಟೀಂ ಇಂಡಿಯಾಗೆ ಮರಳುತ್ತಿದ್ದಾರೆ ಲೆಜೆಂಡರಿ ಆಟಗಾರರು

ಎರಡನೇ ಟಿ20ಯಲ್ಲಿ ಬುಮ್ರಾ ಜೊತೆಗೆ ಅನೇಕ ಆಟಗಾರರು ಮರಳಲಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಮಾರಕ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ತಂಡಕ್ಕೆ ಮರಳಬಹುದು. ಈ ಎಲ್ಲಾ ಆಟಗಾರರು ಇಂಗ್ಲೆಂಡ್ ಸರಣಿಯಲ್ಲಿಯೇ ಟಿ 20 ವಿಶ್ವಕಪ್‌ಗೆ ಭಾರತದ ತಯಾರಿಗಾಗಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ.

ಇದನ್ನೂ ಓದಿ : Sourav Ganguly Birthday : ಭರ್ಜರಿ ಸ್ಟೆಪ್ ಹಾಕಿ ಹುಟ್ಟುಹಬ್ಬ ಆಚರಿಸಿಕೊಂಡ ಸೌರವ್ ಗಂಗೂಲಿ 

ಎರಡನೇ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್ ಮತ್ತು ರವೀಂದ್ರ ಜಡೇಜಾ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News