Jasprit Bumrah Viral Video: ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ತಂಡವನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಅಪಾಯಕಾರಿ ಸ್ಪೆಲ್‌ನಿಂದ ಬಂಗಾಳದ ಬ್ಯಾಟ್ಸ್‌ಮನ್‌ಗಳ ಬೆವರಿಳಿಸುವ ಮೂಲಕ, ಚೆನ್ನೈನ ಮೈದಾನದಲ್ಲಿ ವೇಗಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್‌ನ ಎರಡನೇ ದಿನದಂದು, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಿಲ್ಲರ್ ಬೌಲಿಂಗ್‌ನಿಂದ ಬಂಗಾಳದ ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್ ಮಾಡಿದರು. ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಶಾದ್ಮನ್ ಇಸ್ಲಾಂ ಅವರನ್ನು 'ಮ್ಯಾಜಿಕಲ್ ಬಾಲ್' ಮೂಲಕ ಕ್ಲೀನ್ ಬೌಲ್ಡ್ ಮಾಡಿ ಸಂಚಲನ ಸೃಷ್ಟಿಸಿದರು. ಸದ್ಯ ಈ ವಿಇಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
2 ರನ್‌ಗಳನ್ನು ನೀಡದ್ದ ಬೂಮ್ರಾ ತಾವು ಬೀಸಿದ ಬಾಲ್‌ನಿಂದ ಬಾಂಗ್ಲಾದೇಶ ತಂಡದ ಆಟಗಾರ ಶದ್ಮನ್ ಇಸ್ಲಾಂ ಅನ್ನು ಪೆವಿಲಿಯನ್‌ಗೆ ಸೇರಿಸಿದರು. ಬೂಮ್ರಾ ಬೀಸಿದ ಬಾಲ್‌ಗೆ ಕನ್‌ಫ್ಯೂಸ್ ಆಗಿದ್ದ ಬ್ಯಾಟರ್ ಸ್ಟಂಪ್ಸ್‌ಗೆ ವಿಕೆಟ್ ಒಪ್ಪಿಸಿ ಫೀಲ್ಡ್‌ನಿಂದ ಹೊರ ನಡೆದರು. ಜಸ್ಪ್ರೀತ್ ಬುಮ್ರಾ ಈ ಚೆಂಡನ್ನು ಆಫ್ ಸ್ಟಂಪ್‌ಗೆ ಹೊಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಇದು ಶತಮಾನದ ಅತ್ಯುತ್ತಮ ಬಾಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಬೌಲ್ ಮಾಡಲು ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ಮೊದಲ 5 ಎಸೆತಗಳಲ್ಲಿ ಶಾದ್ಮನ್ ಇಸ್ಲಾಂ ಕೇವಲ 2 ರನ್ ಗಳಿಸಿದರು. ಅದರ ನಂತರ, ಜಸ್ಪ್ರೀತ್ ಬುಮ್ರಾ ಅವರ ಆರನೇ ಎಸೆತದ ಪ್ರದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಪ್ರಸ್ತುತ, ಜಸ್ಪ್ರೀತ್ ಬುಮ್ರಾ ನಾಯಕ ರೋಹಿತ್ ಶರ್ಮಾ ಅವರ ಅತ್ಯಂತ ಮಾರಕ ಅಸ್ತ್ರವಾಗಿದ್ದಾರೆ. ಈ ಪ್ರಬಲ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 399 ವಿಕೆಟ್ ಪಡೆದಿದ್ದಾರೆ. ಈ ಮ್ಯಾಚ್ ವಿನ್ನಿಂಗ್ ಬೌಲರ್ ನೊಂದಿಗೆ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ. ಜಸ್ಪ್ರೀತ್ ಬುಮ್ರಾಗೆ ಪೈಪೋಟಿ ನೀಡುವ ಯಾವುದೇ ಬೌಲರ್ ಜಗತ್ತಿನಲ್ಲಿ ಇಲ್ಲ. ವೇಗದ ಚೆಂಡು, ಅಪಾಯಕಾರಿ ಬೌನ್ಸರ್‌ಗಳು, ಪಿನ್ ಬ್ರೇಕಿಂಗ್ ಯಾರ್ಕರ್‌ಗಳು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನ ದೊಡ್ಡ ಅಸ್ತ್ರಗಳಾಗಿವೆ. ವಿಶ್ವದಾದ್ಯಂತ ಬ್ಯಾಟ್ಸ್‌ಮನ್‌ಗಳು ಖಂಡಿತವಾಗಿಯೂ ಜಸ್ಪ್ರೀತ್ ಬುಮ್ರಾ ಬಗ್ಗೆ ಭಯಪಡುತ್ತಾರೆ.
Boom Boom Bumrah 🎇
Cleans up Shadman Islam with a peach of a delivery.
Live - https://t.co/jV4wK7BgV2… #INDvBAN@IDFCFIRSTBank | @Jaspritbumrah93 pic.twitter.com/RYi9AX30eA
— BCCI (@BCCI) September 20, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ