ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ… ಕ್ರೀಡಾಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಇವರೇ!

highest paid athlete in Asia: ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್ 100 ಅಥ್ಲೀಟ್‌’ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೊಹ್ಲಿ ಏಕೈಕ ಭಾರತೀಯ ಪ್ರತಿನಿಧಿಯಾಗಿದ್ದಾರೆ.  

Written by - Bhavishya Shetty | Last Updated : Dec 17, 2023, 09:55 PM IST
    • ಕ್ರಿಕೆಟ್ ಲೋಕ ಕಂಡ ಅಪ್ರತಿಮ ಆಟಗಾರ ವಿರಾಟ್ ಕೊಹ್ಲಿ
    • ವಿರಾಟ್ ಕೊಹ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್
    • ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್ 100 ಅಥ್ಲೀಟ್‌’ಗಳ ಪಟ್ಟಿ
ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ… ಕ್ರೀಡಾಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಇವರೇ! title=
Highest Paid Cricketer in the World

highest paid athlete in Asia: ಕ್ರಿಕೆಟ್ ಲೋಕ ಕಂಡ ಅಪ್ರತಿಮ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇತ್ತೀಚೆಗೆಯಷ್ಟೇ ವಿಶ್ವಕಪ್ ಟೂರ್ನಿಯಲ್ಲಿ 50ನೇ ಶತಕ ಬಾರಿಸಿ ವಿಶ್ವಕ್ರಿಕೆಟ್’ಗೆ ನೂತನ ಗಾಡ್ ಆಫ್ ಕ್ರಿಕೆಟ್ ಆಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಕೂಡ ಆಗಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್’ನ ಫಸ್ಟ್ ಕ್ಯಾಪ್ಟನ್ ಯಾರು? ಮೊದಲ ಟ್ರೋಫಿ ಗೆದ್ದುಕೊಟ್ಟ ನಾಯಕ ಇವರೇ!

ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್ 100 ಅಥ್ಲೀಟ್‌’ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೊಹ್ಲಿ ಏಕೈಕ ಭಾರತೀಯ ಪ್ರತಿನಿಧಿಯಾಗಿದ್ದಾರೆ.  

ಸ್ಪೋರ್ಟಿಕೊ ಹೊರತಂದ ಈ ಪಟ್ಟಿಯಲ್ಲಿ ಕೊಹ್ಲಿ 61 ನೇ ಸ್ಥಾನದಲ್ಲಿದ್ದಾರೆ. ಈ ವರದಿಯಲ್ಲಿ ಉಲ್ಲೇಖಿಸಲಾದ ಸಂಭಾವನೆ ವಿವರ 2022ರದ್ದು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಜಪಾನ್‌ ಟೆನಿಸ್ ಸೂಪರ್‌ ಸ್ಟಾರ್ ನವೋಮಿ ಒಸಾಕಾ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌’ಗಳ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಗಳಿಸಿದ್ದಾರೆ. ಏಷ್ಯಾದಲ್ಲಿ ಈಕೆಯೇ ನಂಬರ್ 1. ವರ್ಷಕ್ಕೆ ಈಕೆ $1.2M ಸಂಭಾವನೆ ಪಡೆಯುತ್ತಾಳೆ. ಆದರೆ ಕೊಹ್ಲಿಯ $2.9M ಸಂಭಾವನೆ ಪಡೆಯುತ್ತಾರೆ. ಹೀಗೆ ನೋಡಿದರೆ ಕೊಹ್ಲಿಯ ಸಂಭಾವನೆ ಹೆಚ್ಚೇ ಇದೆ. ಆದರೆ ಒಸಾಕಾ ಟೆನ್ನಿಸ್ ಹೊರತಾಗಿ ಜಾಹೀರಾತು, ಬ್ರಾಂಡ್ ಅಂಬಾಸಿಡರ್ ಆಗಿ ಭರ್ಜರಿ ಗಳಿಕೆ ಮಾಡುತ್ತಾರೆ.

ಒಸಾಕಾ ಹೀಗೆ 2022 ರಲ್ಲಿ $52M ಪಡೆದಿದ್ದರು. ಆದರೆ ಕೊಹ್ಲಿ ಸೈನ್ ಅಪ್ ಮಾಡಿದ ವಿವಿಧ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ $ 31 ಮಿಲಿಯನ್ ಪಡೆದಿದ್ದರು. ಹೀಗಾಗಿ ಏಷ್ಯಾದಲ್ಲೇ ಒಸಾಕಾ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ: ವಾರದಲ್ಲಿ 3 ಸೀತಾಫಲ ಹಣ್ಣ ತಿಂದರೆ ಸಾಕು… ಈ ಕಾಯಿಲೆಗಳಿಂದ ಸಿಗುತ್ತೆ ಶಾಶ್ವತ ಮುಕ್ತಿ

ಈ ಪಟ್ಟಿಯಲ್ಲಿ ಉಲ್ಲೇಖಿಸಿದಂತೆ 2022ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು, NBA ಸ್ಟಾರ್ ಲೆಬ್ರಾನ್ ಜೇಮ್ಸ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News