ದಯವಿಟ್ಟು ದಯೆ ತೋರಿ' ಎಂದು ನ್ಯೂಜಿಲೆಂಡ್ ಆಟಗಾರ ಭಾರತೀಯರಲ್ಲಿ ವಿನಂತಿಸಿಕೊಂಡಿದ್ದೇಕೆ?

ನ್ಯೂಜಿಲೆಂಡ್‌ನ ಆಲ್‌ರೌಂಡರ್ ಜೇಮ್ಸ್ ನೀಶಮ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ವಿಶ್ವಕಪ್ 2019 ರ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಅಧಿಕೃತ ವೇದಿಕೆಗಳಲ್ಲಿ ಮರು ಮಾರಾಟ ಮಾಡುವಂತೆ ಕೋರಿದರು, ಆ ಮೂಲಕ ನಿಜವಾದ ಅಭಿಮಾನಿಗಳಿಗೆ ತಮ್ಮ ತಂಡಗಳ ಆಟವನ್ನು ವೀಕ್ಷಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.

Last Updated : Jul 13, 2019, 01:27 PM IST
ದಯವಿಟ್ಟು ದಯೆ ತೋರಿ' ಎಂದು ನ್ಯೂಜಿಲೆಂಡ್ ಆಟಗಾರ ಭಾರತೀಯರಲ್ಲಿ ವಿನಂತಿಸಿಕೊಂಡಿದ್ದೇಕೆ? title=
file photo

ನವದೆಹಲಿ: ನ್ಯೂಜಿಲೆಂಡ್‌ನ ಆಲ್‌ರೌಂಡರ್ ಜೇಮ್ಸ್ ನೀಶಮ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ವಿಶ್ವಕಪ್ 2019 ರ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಅಧಿಕೃತ ವೇದಿಕೆಗಳಲ್ಲಿ ಮರು ಮಾರಾಟ ಮಾಡುವಂತೆ ಕೋರಿದರು, ಆ ಮೂಲಕ ನಿಜವಾದ ಅಭಿಮಾನಿಗಳಿಗೆ ತಮ್ಮ ತಂಡಗಳ ಆಟವನ್ನು ವೀಕ್ಷಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.

ಭಾರತದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡ ಫೈನಲ್ ಗೆ ಬರುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಹೇರಳವಾಗಿ ಟಿಕೆಟ್ ಗಳನ್ನು ಖರೀದಿಸಿದ್ದರು. ಈಗ ಭಾರತ ತಂಡವು ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿತ್ತು ,ಈ ಹಿನ್ನಲೆಯಲ್ಲಿ ಈಗ ನ್ಯೂಜಿಲೆಂಡ್ ನ ಆಲ್ ರೌಂಡರ್ ಟಿಕೆಟ್ ಗಳನ್ನು ಮರು ಮಾರಾಟ ಮಾಡುವುದರ ಮೂಲಕ ನಿಜವಾದ ಅಭಿಮಾನಿಗಳಿಗೆ ಕ್ರಿಕೆಟ್ ನೋಡಲು ಅವಕಾಶ ಮಾಡಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ. 

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಆತ್ಮೀಯ ಭಾರತೀಯ ಕ್ರಿಕೆಟ್ ಅಭಿಮಾನಿಗಳೆ. ನೀವು ಇನ್ನು ಮುಂದೆ ಫೈನಲ್‌ಗೆ ಬರಲು ಬಯಸದಿದ್ದರೆ ದಯವಿಟ್ಟು ದಯೆ ತೋರಿ ಅಧಿಕೃತ ವೇದಿಕೆಯ ಮೂಲಕ ನಿಮ್ಮ ಟಿಕೆಟ್‌ಗಳನ್ನು ಮರು ಮಾರಾಟ ಮಾಡಿ. ದೊಡ್ಡ ಲಾಭ ಗಳಿಸಲು ಪ್ರಯತ್ನಿಸುವುದು ಪ್ರಲೋಭನಕಾರಿ ಎಂದು ನನಗೆ ತಿಳಿದಿದೆ. ಆದರೆ ದಯವಿಟ್ಟು ನಿಜವಾದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ನೋಡಲು ಅವಕಾಶ ನೀಡಿ, ಬರಿ ಶ್ರಿಮಂತರಿಗಲ್ಲ "ಎಂದು ಬರೆದುಕೊಂಡಿದ್ದಾರೆ.

2015 ರ ವಿಶ್ವಕಪ್ ನಲ್ಲಿ ರನ್ನರ್ಸ್ ಅಪ್ ಆಗಿದ್ದ ನ್ಯೂಜಿಲೆಂಡ್ ಇದುವರೆಗೆ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ಅದೇ ರೀತಿಯಾಗಿ ಇಂಗ್ಲೆಂಡ್ ತಂಡವು ವಿಶ್ವಕಪ್ ಗೆದ್ದಿಲ್ಲ. ಈಗ ಭಾನುವಾರದಂದು ಲಾರ್ಡ್ಸ ನಲ್ಲಿ ತಮ್ಮ ಮೊದಲ ಪ್ರಶಸ್ತಿಗಾಗಿ ತಂಡಗಳು ಸೆಣಸಲಿವೆ.

Trending News