0, 0, 0, 0, 0, 0, 0… ಕೇವಲ 2 ಎಸೆತ...ಮುಗಿದ ಟಿ-20 ಪಂದ್ಯ! ಕ್ರಿಕೆಟ್ ಇತಿಹಾಸದಲ್ಲೇ ನಡೆದಿಲ್ಲ ಇಂಥಾ ಕಳಪೆ ಆಟ!

Won T20 International in just 2 balls: ಪುರುಷರ ಟಿ 20 ರ ದಾಖಲೆಯನ್ನು ನೋಡಿದರೆ, ಅದಕ್ಕೂ ಮೊದಲು ಸಿಡ್ನಿ ಥಂಡರ್ ಅತೀ ಕಡಿಮೆ ಸ್ಕೋರ್ ಮಾಡಿದ ತಂಡದು ಹೇಳಲಾಗುತ್ತಿತ್ತು. ಕಳೆದ ವರ್ಷ ಡಿಸೆಂಬರ್ 16 ರಂದು ಸಿಡ್ನಿ ಥಂಡರ್ ತಂಡವು ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಕೇವಲ 15 ರನ್ ಗಳಿಸಿತ್ತು.

Written by - Bhavishya Shetty | Last Updated : Feb 27, 2023, 03:13 PM IST
    • ಐಲ್ ಆಫ್ ಮ್ಯಾನ್ ತಂಡದ ವಿರುದ್ಧ ಸ್ಪೇನ್ ಈ ದಾಖಲೆ ಬರೆದಿದೆ.
    • ಪಂದ್ಯದಲ್ಲಿ, ಐಲ್ ಆಫ್ ಮ್ಯಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿದ್ದು, ಈ ವೇಳೆ ಕೇವಲ 10 ರನ್ ಗಳಿಸಿದೆ.
    • ಇದು ಟಿ 20 ಇತಿಹಾಸದಲ್ಲಿ ಅತೀ ಕಡಿಮೆ ಸ್ಕೋರ್ ಆಗಿದೆ.
0, 0, 0, 0, 0, 0, 0… ಕೇವಲ 2 ಎಸೆತ...ಮುಗಿದ ಟಿ-20 ಪಂದ್ಯ! ಕ್ರಿಕೆಟ್ ಇತಿಹಾಸದಲ್ಲೇ ನಡೆದಿಲ್ಲ ಇಂಥಾ ಕಳಪೆ ಆಟ! title=
cricket

Won T20 International in just 2 balls: ಟಿ 20 ಕ್ರಿಕೆಟ್ ಎಂದರೆ ಅಲ್ಲಿ ಬೌಂಡರಿಗಳು ಮತ್ತು ಸಿಕ್ಸರ್’ಗಳದ್ದೇ ಅಬ್ಬರ ಇರುತ್ತದೆ. ಅಷ್ಟೇ ಅಲ್ಲದೆ 20 ಓವರ್’ನಲ್ಲಿ ಊಹೆಗೂ ಮೀರಿದ ಸ್ಕೋರ್ ಕಲೆ ಹಾಕಲಾಗುತ್ತದೆ. ಆದರೆ ಇಲ್ಲೊಂದು ತಂಡವು ಕೇವಲ 2 ಎಸೆತಗಳಲ್ಲಿ ಪಂದ್ಯವನ್ನು ಗೆದ್ದಿದೆ. ಇದು ಹೇಗೆ ಸಾಧ್ಯ? ಅದರಲ್ಲೂ ಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ… ಎಂದು ಯೋಚಿಸುತ್ತಿದ್ದೀರಾ? ಈ ವರದಿ ಓದಿ:

ಐಲ್ ಆಫ್ ಮ್ಯಾನ್ ತಂಡದ ವಿರುದ್ಧ ಸ್ಪೇನ್ ಈ ದಾಖಲೆ ಬರೆದಿದೆ. ಪಂದ್ಯದಲ್ಲಿ, ಐಲ್ ಆಫ್ ಮ್ಯಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿದ್ದು, ಈ ವೇಳೆ ಕೇವಲ 10 ರನ್ ಗಳಿಸಿದೆ. ಇದು ಟಿ 20 ಇತಿಹಾಸದಲ್ಲಿ ಅತೀ ಕಡಿಮೆ ಸ್ಕೋರ್ ಆಗಿದೆ. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಸ್ಪೇನ್ ಕೇವಲ 2 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ. ಈ ದಾಖಲೆಯನ್ನು ಉಭಯ ದೇಶಗಳ ನಡುವಿನ ಟಿ 20 ನ ದ್ವಿಪಕ್ಷೀಯ ಸರಣಿಯಲ್ಲಿ ರಚಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಟ್ರೈನ್ಸ್ ಇಂಡಿಯನ್ ರೈಲುಗಳಿಗಿಂತ ವಿಭಿನ್ನ ಹೇಗೆ?

ಪುರುಷರ ಟಿ 20 ರ ದಾಖಲೆಯನ್ನು ನೋಡಿದರೆ, ಅದಕ್ಕೂ ಮೊದಲು ಸಿಡ್ನಿ ಥಂಡರ್ ಅತೀ ಕಡಿಮೆ ಸ್ಕೋರ್ ಮಾಡಿದ ತಂಡದು ಹೇಳಲಾಗುತ್ತಿತ್ತು. ಕಳೆದ ವರ್ಷ ಡಿಸೆಂಬರ್ 16 ರಂದು ಸಿಡ್ನಿ ಥಂಡರ್ ತಂಡವು ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಕೇವಲ 15 ರನ್ ಗಳಿಸಿತ್ತು.

ಇನ್ನು ಈ ಪಂದ್ಯದಲ್ಲಿ ಸ್ಪೇನ್ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿತು. 8.4 ಓವರ್‌ಗಳಲ್ಲಿ 10 ರನ್ ಗಳಿಸಿದ ಐಲ್ ಆಫ್ ಮ್ಯಾನ್ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು. 7 ಬ್ಯಾಟರ್’ಗಳು ಖಾತೆಯನ್ನು ಸಹ ತೆರೆಯಲು ಸಾಧ್ಯವಾಗಲಿಲ್ಲ. ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ರನ್ ಗಳಿಸಿದರು.

ಐಲ್ ಆಫ್ ಮ್ಯಾನ್‌ನಿಂದ 7 ನೇ ಸ್ಥಾನಕ್ಕೆ ಇಳಿದ ಜೋಸೆಫ್ ಬೆರೋಸ್ ಹೆಚ್ಚು ಅಂದರೆ 4 ರನ್ ಗಳಿಸಿದರು. ಇದಲ್ಲದೆ 3 ಬ್ಯಾಟರ್ 2-2 ರನ್ ಗಳಿಸಿದರು. ಲೆಫ್ಟ್ -ಆರ್ಮ್ ಫಾಸ್ಟ್ ಬೌಲರ್ ಮೊಹಮ್ಮದ್ ಕಮ್ರಾನ್ 4 ಓವರ್‌ಗಳಲ್ಲಿ 4 ರನ್‌ಗಳಿಗೆ 4 ವಿಕೆಟ್ ಪಡೆದರು. ಮತ್ತೊಂದು ವೇಗದ ಬೌಲರ್, ಎಟಿಐ ಫೆಸ್ 4 ಓವರ್‌ಗಳಲ್ಲಿ 6 ರನ್‌ಗಳಿಗೆ 4 ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಲೆಗ್ -ಸ್ಪಿನ್ನರ್ ಲಾರ್ನೆ ಬರ್ನ್ಸ್ 4 ಎಸೆತಗಳಲ್ಲಿ 2 ವಿಕೆಟ್ಗಳನ್ನು ತೆಗೆದುಕೊಂಡರು.

ಇದಕ್ಕೆ ಪ್ರತಿಯಾಗಿ, ಸ್ಪೇನ್ 2 ಎಸೆತಗಳಲ್ಲಿ ಗುರಿಯನ್ನು ಸಾಧಿಸಿತು. ತಂಡವು 118 ಎಸೆತಗಳು ಬಾಕಿ ಇರುವಾಗ ಪಂದ್ಯವನ್ನು ಗೆದ್ದುಕೊಂಡಿತು. ಇದು ಒಂದು ದಾಖಲೆಯಾಗಿದೆ. ಇದಕ್ಕೂ ಮೊದಲು ಕೀನ್ಯಾ ಮಾಲಿ ವಿರುದ್ಧ 105 ಎಸೆತಗಳಲ್ಲಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: NPS ನಿಯಮಗಳಲ್ಲಿ ಭಾರಿ ಬದಲಾವಣೆ, ಈಗ ಹಣ ಹಿಂಪಡೆಯಲು ಈ ಕೆಲಸ ಮಾಡಿ!

ಐಲ್ ಆಫ್ ಮ್ಯಾನ್ 2004 ರಲ್ಲಿ ಐಸಿಸಿಯ ಸದಸ್ಯತ್ವವನ್ನು ಪಡೆದಿದೆ. 2017 ರಲ್ಲಿ ಸಹಾಯಕ ಸದಸ್ಯರ ಸದಸ್ಯತ್ವವನ್ನು ಪಡೆಯಿತು. ತಂಡವು ಯುರೋಪಿಯನ್ ಟಿ 20 ವಿಶ್ವಕಪ್‌ನ ಅರ್ಹತಾ ಪಂದ್ಯವನ್ನು ಆಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News