IPL ಇತಿಹಾಸದಲ್ಲಿ ಸೂಪರ್ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಈ ವಿದೇಶಿ ದಿಗ್ಗಜನ ಸರಿಸಮಾನಕ್ಕೆ ನಿಂತ ಲೆಗ್ ಸ್ಪಿನ್ನರ್!

Yuzvendra Chahal IPL Record: ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ಶ್ರೇಷ್ಠ ಆಲ್‌ ರೌಂಡರ್ ಡ್ವೇನ್ ಬ್ರಾವೋ ಅವರ ಸರಿಸಮಾನಕ್ಕೆ ಬಂದಿದ್ದಾರೆ. ಯುಜುವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

Written by - Bhavishya Shetty | Last Updated : May 8, 2023, 01:19 PM IST
    • ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ಶ್ರೇಷ್ಠ ಆಲ್‌ ರೌಂಡರ್ ಡ್ವೇನ್ ಬ್ರಾವೋ ಅವರ ಸರಿಸಮಾನಕ್ಕೆ ಬಂದಿದ್ದಾರೆ.
    • ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ
    • 4 ವಿಕೆಟ್ ಪಡೆಯುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ
IPL ಇತಿಹಾಸದಲ್ಲಿ ಸೂಪರ್ ದಾಖಲೆ ಬರೆದ ಯುಜ್ವೇಂದ್ರ ಚಹಾಲ್: ಈ ವಿದೇಶಿ ದಿಗ್ಗಜನ ಸರಿಸಮಾನಕ್ಕೆ ನಿಂತ ಲೆಗ್ ಸ್ಪಿನ್ನರ್!  title=
Yuzvendra Chahal

Yuzvendra Chahal IPL Record: ಟೀಂ ಇಂಡಿಯಾದ ಮತ್ತು ರಾಜಸ್ಥಾನ್ ರಾಯಲ್ಸ್‌ ನ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ತಮ್ಮ ಸೂಪರ್ ದಾಖಲೆಯ ಮೂಲಕ ವಿಶ್ವ ಕ್ರಿಕೆಟ್‌ ನಲ್ಲಿ ತಲ್ಲಣ ಮೂಡಿಸಿದ್ದಾರೆ.

ಇದನ್ನೂ ಓದಿ: World Cupನಲ್ಲಿ ರಿಷಬ್ ಪಂತ್ ಬದಲಿಗೆ ಆಡೋದು ಈ ವಿಕೆಟ್ ಕೀಪರ್! ಬ್ಯಾಟಿಂಗ್’ನಲ್ಲಿ ಧೋನಿಯನ್ನೇ ಮೀರಿಸುವ ಕಿಲಾಡಿ

ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ಶ್ರೇಷ್ಠ ಆಲ್‌ ರೌಂಡರ್ ಡ್ವೇನ್ ಬ್ರಾವೋ ಅವರ ಸರಿಸಮಾನಕ್ಕೆ ಬಂದಿದ್ದಾರೆ. ಯುಜುವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ 4 ವಿಕೆಟ್ ಪಡೆಯುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಭಾನುವಾರ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ 4 ವಿಕೆಟ್ ಪಡೆದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ 183 ವಿಕೆಟ್‌ ಗಳನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವ ಮೂಲಕ ಶ್ರೇಷ್ಠ ಆಲ್‌ ರೌಂಡರ್ ಡ್ವೇನ್ ಬ್ರಾವೋ ಅವರ ನೇರಕ್ಕೆ ಬಂದು ನಿಂತಿದ್ದಾರೆ.

ಕಡಿಮೆ ಪಂದ್ಯಗಳಲ್ಲಿ 183 ಐಪಿಎಲ್ ವಿಕೆಟ್‌ ಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ ಚಾಹಲ್. ಇವರು 142 ಐಪಿಎಲ್ ಪಂದ್ಯಗಳಲ್ಲಿ 183 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ 161 ಪಂದ್ಯಗಳಲ್ಲಿ 183 ವಿಕೆಟ್ ಪಡೆದಿದ್ದಾರೆ. ಇದೀಗ ಯುಜುವೇಂದ್ರ ಚಹಾಲ್ ಐಪಿಎಲ್‌ ನಲ್ಲಿ 183 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 183 ವಿಕೆಟ್‌ ಗಳೊಂದಿಗೆ ಯುಜ್ವೇಂದ್ರ ಚಹಾಲ್ ನಂತರ ಡ್ವೇನ್ ಬ್ರಾವೋ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 174 ವಿಕೆಟ್‌ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್:

1. ಯುಜ್ವೇಂದ್ರ ಚಹಾಲ್ (ಭಾರತ) - 183 ವಿಕೆಟ್

2. ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್) - 183 ವಿಕೆಟ್

3. ಪಿಯೂಷ್ ಚಾವ್ಲಾ (ಭಾರತ) - 174 ವಿಕೆಟ್

4. ಅಮಿತ್ ಮಿಶ್ರಾ (ಭಾರತ) - 172 ವಿಕೆಟ್

5. ರವಿಚಂದ್ರನ್ ಅಶ್ವಿನ್ (ಭಾರತ) - 171 ವಿಕೆಟ್

ಇದನ್ನೂ ಓದಿ: IPL 2023: ಅದೊಂದು ನೋ ಬಾಲ್’ನಿಂದ ಗೆದ್ದ ಹೈದರಾಬಾದ್! ಪಂದ್ಯಕ್ಕೇ ತಿರುವುಕೊಟ್ಟ ‘ಫ್ರೀ ಹಿಟ್’ ಹೇಗಿತ್ತು ಗೊತ್ತಾ?

ಟಾಪ್-5 ಬೌಲರ್‌ ಗಳಲ್ಲಿ ನಾಲ್ವರು ಭಾರತೀಯರು!

ಯುಜ್ವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ಆಡಿದ 142 ಪಂದ್ಯಗಳಲ್ಲಿ 7.65 ಎಕಾನಮಿ ರೇಟ್ ಮತ್ತು 16.94 ಸ್ಟ್ರೈಕ್ ರೇಟ್‌ನೊಂದಿಗೆ 183 ವಿಕೆಟ್‌ ಗಳನ್ನು ಪಡೆದಿದ್ದಾರೆ. ಐಪಿಎಲ್‌ ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳನ್ನು ಕಬಳಿಸುವ ವಿಚಾರದಲ್ಲಿ ಟಾಪ್-5 ಬೌಲರ್‌ ಗಳಲ್ಲಿ 4 ಭಾರತೀಯ ಸ್ಪಿನ್ ಬೌಲರ್‌ ಗಳು ಸೇರಿದ್ದಾರೆ. ಭಾನುವಾರದಂದು ಯುಜ್ವೇಂದ್ರ ಚಹಾಲ್ 4 ಓವರ್‌ ಗಳಲ್ಲಿ 29 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿ ರಾಜಸ್ಥಾನದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಇದರೊಂದಿಗೆ ಡ್ವೇನ್ ಬ್ರಾವೋ ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಈ ಲೀಗ್‌ ನಲ್ಲಿ ಇಬ್ಬರೂ 183 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News