IPLನಲ್ಲಿ 6ನೇ ಶತಕ ಬಾರಿಸಿ ವಿಶ್ವದಾಖಲೆ ಬರೆದ ವಿರಾಟ್! ಒಂದು-ಶಾಟ್; 4ಕ್ಕೂ ಹೆಚ್ಚು ರೆಕಾರ್ಡ್.. ಏನಪ್ಪಾ ಕೊಹ್ಲಿ ಲೀಲೆ!

Virat Kohli Century: ವಿರಾಟ್ ಅವರ ಐಪಿಎಲ್ ವೃತ್ತಿ ಜೀವನದಲ್ಲಿ ಆರನೇ ಶತಕವಾಗಿದೆ. ಈ ಮೂಲಕ ಐಪಿಎಲ್‌ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕ್ರಿಸ್ ಗೇಲ್ ಅವರನ್ನು ಸರಿಗಟ್ಟಿದ್ದಾರೆ. ಗೇಲ್ ಐಪಿಎಲ್‌ ನಲ್ಲಿ ಗರಿಷ್ಠ 6 ಶತಕಗಳನ್ನು ಗಳಿಸಿದ್ದಾರೆ. ಇದೀಗ ಕೊಹ್ಲಿ ಜಂಟಿಯಾಗಿ ನಂಬರ್-1 ಆಗಿದ್ದಾರೆ.

Written by - Bhavishya Shetty | Last Updated : May 19, 2023, 07:25 AM IST
    • ವಿರಾಟ್ ಕೊಹ್ಲಿ ಐಪಿಎಲ್ ವೃತ್ತಿಜೀವನದ ಆರನೇ ಶತಕವನ್ನು ಬಾರಿಸಿದ್ದಾರೆ
    • ಕೊಹ್ಲಿ ತಮ್ಮ ಹೆಸರಿನಲ್ಲಿ ವಿಶ್ವದಾಖಲೆಯನ್ನೂ ಮಾಡಿದ್ದಾರೆ
    • ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 62 ಎಸೆತಗಳಲ್ಲಿ ಶತಕ ಪೂರೈಸಿದ್ದರು
IPLನಲ್ಲಿ 6ನೇ ಶತಕ ಬಾರಿಸಿ ವಿಶ್ವದಾಖಲೆ ಬರೆದ ವಿರಾಟ್! ಒಂದು-ಶಾಟ್; 4ಕ್ಕೂ ಹೆಚ್ಚು ರೆಕಾರ್ಡ್.. ಏನಪ್ಪಾ ಕೊಹ್ಲಿ ಲೀಲೆ!  title=
Virat Kohli

Virat Kohli Century: ಇಂಡಿಯನ್ ಪ್ರೀಮಿಯರ್ ಲೀಗ್ 2023 ರ 65 ನೇ ಪಂದ್ಯದಲ್ಲಿ, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಕಳೆದ ದಿನ ಸಖತ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರಸಕ್ತ ಋತುವಿನ ಮೊದಲ ಶತಕ ಮತ್ತು ಐಪಿಎಲ್ ವೃತ್ತಿಜೀವನದ ಆರನೇ ಶತಕವನ್ನು ಬಾರಿಸಿದ್ದಾರೆ. ಈ ಶತಕದ ಜೊತೆಗೆ ಕೊಹ್ಲಿ ತಮ್ಮ ಹೆಸರಿನಲ್ಲಿ ವಿಶ್ವದಾಖಲೆಯನ್ನೂ ಮಾಡಿದ್ದು, ಬೇರೆ ಬೇರೆ ಸಾಧನೆಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: ಅಂದು ಪಾನಿಪೂರಿ ಮಾರುತ್ತಿದ್ದ; ಇಂದು ಕ್ರಿಕೆಟ್ ದಿಗ್ಗಜರೇ ಕೊಂಡಾಡುತ್ತಿರುವ ಬ್ಯಾಟ್ಸ್’ಮನ್! ಈಗ ಗಿಲ್ ಆಟಕ್ಕೆ ಕುತ್ತು ತಂದನಲ್ಲಾ?

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 62 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಆದರೆ ಶತಕ ಪೂರೈಸಿದ ಕೂಡಲೇ ಮುಂದಿನ ಎಸೆತದಲ್ಲಿ ಔಟಾದರು. 63 ಎಸೆತಗಳಲ್ಲಿ12 ಬೌಂಡರಿ ಮತ್ತು 4 ಸಿಕ್ಸರ್‌ ಗಳ ಸಹಾಯದಿಂದ 100 ರನ್ ಬಾರಿಸಿದ್ದಾರೆ.

ಇದು ವಿರಾಟ್ ಅವರ ಐಪಿಎಲ್ ವೃತ್ತಿ ಜೀವನದಲ್ಲಿ ಆರನೇ ಶತಕವಾಗಿದೆ. ಈ ಮೂಲಕ ಐಪಿಎಲ್‌ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕ್ರಿಸ್ ಗೇಲ್ ಅವರನ್ನು ಸರಿಗಟ್ಟಿದ್ದಾರೆ. ಗೇಲ್ ಐಪಿಎಲ್‌ ನಲ್ಲಿ ಗರಿಷ್ಠ 6 ಶತಕಗಳನ್ನು ಗಳಿಸಿದ್ದಾರೆ. ಇದೀಗ ಕೊಹ್ಲಿ ಜಂಟಿಯಾಗಿ ನಂಬರ್-1 ಆಗಿದ್ದಾರೆ.

ವಿಶ್ವದಾಖಲೆ ಬರೆದ ವಿರಾಟ್!

ಈ ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆಯನ್ನೂ ಮಾಡಿದ್ದಾರೆ. ಟಿ20 ಕ್ರಿಕೆಟ್‌ ನಲ್ಲಿ ತಂಡದೊಂದಿಗೆ ಆಡುವಾಗ 7500 ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ. ಇಷ್ಟೇ ಅಲ್ಲ, ವಿರಾಟ್ ಐಪಿಎಲ್‌ ನಲ್ಲಿ ಆರನೇ ಬಾರಿಗೆ 500 ಕ್ಕೂ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ್ದಾರೆ ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಈ ಋತುವಿನಲ್ಲಿ ಅವರು ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 538 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ರೇಸ್‌ ನಲ್ಲಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Ind Vs Pak Test Series: 15 ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಟೆಸ್ಟ್ ಸರಣಿ?

ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಐಪಿಎಲ್‌ ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ ನ ಆರಂಭಿಕ ಹಂತದಲ್ಲಿ ವಿರಾಟ್-ಫಾಫ್ ಜೋಡಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ 13 ಪಂದ್ಯಗಳಲ್ಲಿ ಇಬ್ಬರೂ 854 ರನ್ ಸೇರಿಸಿದ್ದಾರೆ. ಈ ಮೊದಲು ಈ ದಾಖಲೆ ಜಾನಿ ಬೈರ್‌ಸ್ಟೋ ಮತ್ತು ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. 2019 ರಲ್ಲಿ ಹೈದರಾಬಾದ್ ಪರ ಆಡುವಾಗ ಇಬ್ಬರೂ 791 ರನ್ ಸೇರಿಸಿದ್ದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News