IPL 2023: ಧೋನಿಗೆ ಬಂತು ಆನೆಬಲ: ವಿಶ್ವದ ಈ ಮೂರು ಶೇಷ್ಠ ಮ್ಯಾಚ್ ವಿನ್ನರ್’ಗಳು CSK ಪ್ಲೇಯಿಂಗ್ XIಗೆ ಸೇರ್ಪಡೆ

Chennai Super Kings IPL 2023: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತ್ರಿಮೂರ್ತಿಗಳಿದ್ದಾರೆ. ಅವರೆಂದರೆ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ. ವಿಶ್ವ ಕ್ರಿಕೆಟ್‌’ನ ಈ ಮೂವರು ಅತ್ಯುತ್ತಮ ಆಲ್‌ರೌಂಡರ್‌ಗಳು ಐಪಿಎಲ್ 2023 ರಲ್ಲಿ ಒಟ್ಟಿಗೆ ಆಡಲಿದ್ದಾರೆ.

Written by - Bhavishya Shetty | Last Updated : Mar 28, 2023, 10:49 PM IST
    • ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತ್ರಿಮೂರ್ತಿಗಳಿದ್ದಾರೆ.
    • ಅವರೆಂದರೆ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ.
    • ವಿಶ್ವ ಕ್ರಿಕೆಟ್‌’ನ ಈ ಮೂವರು ಅತ್ಯುತ್ತಮ ಆಲ್‌ರೌಂಡರ್‌ಗಳು ಐಪಿಎಲ್ 2023 ರಲ್ಲಿ ಒಟ್ಟಿಗೆ ಆಡಲಿದ್ದಾರೆ
IPL 2023: ಧೋನಿಗೆ ಬಂತು ಆನೆಬಲ: ವಿಶ್ವದ ಈ ಮೂರು ಶೇಷ್ಠ ಮ್ಯಾಚ್ ವಿನ್ನರ್’ಗಳು CSK ಪ್ಲೇಯಿಂಗ್ XIಗೆ ಸೇರ್ಪಡೆ title=
Chennai Super Kings

Chennai Super Kings IPL 2023: ಐಪಿಎಲ್ 2023 ಸೀಸನ್‌’ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಹರಾಜಿನಲ್ಲಿ ಉತ್ತಮ ಪ್ಲಾನ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್, ತಮ್ಮ ತಂಡದಲ್ಲಿ 7 ಆಟಗಾರರನ್ನು ಸೇರಿಸಿಕೊಂಡಿದೆ. ಇವರ ಜೊತೆಗೆ ಎಂಎಸ್ ಧೋನಿಗೆ ಮಹಾ ತ್ರಿಮೂರ್ತಿಗಳು ಸಿಕ್ಕಿದ್ದಾರೆ.

ಇದನ್ನೂ ಓದಿ: Brother duos in Team India: ಟೀಂ ಇಂಡಿಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ 5 ಪ್ರಸಿದ್ಧ ಸಹೋದರ ಜೋಡಿಗಳು

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತ್ರಿಮೂರ್ತಿಗಳಿದ್ದಾರೆ. ಅವರೆಂದರೆ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ. ವಿಶ್ವ ಕ್ರಿಕೆಟ್‌’ನ ಈ ಮೂವರು ಅತ್ಯುತ್ತಮ ಆಲ್‌ರೌಂಡರ್‌ಗಳು ಐಪಿಎಲ್ 2023 ರಲ್ಲಿ ಒಟ್ಟಿಗೆ ಆಡಲಿದ್ದಾರೆ.

ಐಪಿಎಲ್ ನಿಯಮಗಳ ಪ್ರಕಾರ, ಒಂದು ತಂಡವು ಪ್ಲೇಯಿಂಗ್ 11 ರಲ್ಲಿ 4 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದು, ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ನಾಯಕ ಧೋನಿ ಮೊದಲ ಆಯ್ಕೆಯಾಗಲಿದ್ದಾರೆ. ಈ ಬಾರಿ ಈ ಮೂರು ಪಂದ್ಯ ವಿಜೇತ ಆಟಗಾರರು ಪ್ಲೇಯಿಂಗ್ 11 ರಲ್ಲಿ ಒಟ್ಟಿಗೆ ಆಡುವುದನ್ನು ಅಭಿಮಾನಿಗಳು ನೋಡಬಹುದು.

IPL 2023ರ CSK ತಂಡ:

ಎಂಎಸ್ ಧೋನಿ (ನಾಯಕ), ರಿತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಡೆವೊನ್ ಕಾನ್ವೇ, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗೇಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ದೀಪಾರ್ ಚೌಧರಿ, ಮತಿಶಪನ್ ಚೌಧರಿ , ಪ್ರಶಾಂತ್ ಸೋಲಂಕಿ, ಮಹೇಶ್ ತಿಕಷ್ಣ.

ಇದನ್ನೂ ಓದಿ: Team India: ಟೀಂ ಇಂಡಿಯಾದ ಸ್ಟಾರ್ ಆಟಗಾರನ ತಂದೆ ನಾಪತ್ತೆ: ತೀವ್ರ ಹುಡುಕಾಟ!!

ಹರಾಜಿನಲ್ಲಿ ಮಾರಾಟವಾದ ಆಟಗಾರರು -

  • ಬೆನ್ ಸ್ಟೋಕ್ಸ್ - 16.25 ಕೋಟಿ
  • ಅಜಿಂಕ್ಯ ರಹಾನೆ - 50 ಲಕ್ಷ
  • ಶೇಖ್ ರಶೀದ್ - 20 ಲಕ್ಷ
  • ನಿಶಾಂತ್ ಸಿಂಧು - 60 ಲಕ್ಷ
  • ಕೈಲ್ ಜೇಮಿಸನ್ - 1 ಕೋಟಿ
  • ಅಜಯ್ ಮಂಡಲ್ - 20 ಲಕ್ಷ
  • ಭಗತ್ ವರ್ಮಾ - 20 ಲಕ್ಷ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News