CSK vs GT: ಮಳೆಯಿಂದಾಗಿ ಇಂದೂ ನಡೆಯಲ್ವಾ IPL 2023 ಫೈನಲ್? ಮುಂದೇನು…! ಹೊರಬಿತ್ತು ಬಿಗ್ ಅಪ್ಡೇಟ್

CSK vs GT IPL 2023 Final: ಮೀಸಲು ದಿನದಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಆದರೆ, ಮೀಸಲು ದಿನದಂದು ಹೆಚ್ಚು ಮಳೆಯಾಗುವ ಸಾಧ್ಯತೆ ಕಂಡುಬಂದಿಲ್ಲ. ಸೋಮವಾರ, ಅಹಮದಾಬಾದ್‌ ನಲ್ಲಿ ಹಗಲಿನಲ್ಲಿ ಬಿಸಿಲು ಇರಲಿದ್ದು, ಸಂಜೆ ಹವಾಮಾನದಲ್ಲಿ ಬದಲಾವಣೆಯನ್ನು ಕಾಣಬಹುದು.

Written by - Bhavishya Shetty | Last Updated : May 29, 2023, 07:33 AM IST
    • ಪ್ರಶಸ್ತಿ ಪಂದ್ಯವು ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ 'ಮೀಸಲು ದಿನ'ದಂದು ನಡೆಯಲಿದೆ
    • ಈ ಪಂದ್ಯ ಮಳೆಯಿಂದಾಗಿ ರದ್ದಾದರೆ, ಫೈನಲ್‌ ನಲ್ಲಿ ಯಾವ ತಂಡ ಗೆಲ್ಲುತ್ತದೆ?
    • ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ
CSK vs GT: ಮಳೆಯಿಂದಾಗಿ ಇಂದೂ ನಡೆಯಲ್ವಾ IPL 2023 ಫೈನಲ್? ಮುಂದೇನು…! ಹೊರಬಿತ್ತು ಬಿಗ್ ಅಪ್ಡೇಟ್ title=
IPL final

CSK vs GT IPL 2023 Final: ಮೇ 28 ರಂದು ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ನಡುವಿನ IPL (IPL-2023) ಸೀಸನ್ 16 ರ ಅಂತಿಮ ಪಂದ್ಯವು ಮಳೆಯ ಕಾರಣದಿಂದ ನಡೆಸಲು ಸಾಧ್ಯವಾಗಲಿಲ್ಲ. ಇದೀಗ ಈ ಪ್ರಶಸ್ತಿ ಪಂದ್ಯವು ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ 'ಮೀಸಲು ದಿನ' ಅಂದರೆ ಸೋಮವಾರದಂದು ನಡೆಯಲಿದೆ. ಆದರೆ, ಮೀಸಲು ದಿನದಂದೂ ಸಹ ಮಳೆಯ ಛಾಯೆ ಆವರಿಸಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ, ಫೈನಲ್‌ ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ: ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯಡು

ಮಳೆಯಿಂದಾಗಿ ಇಂದು ಕೂಡ ಪಂದ್ಯ ನಡೆಯುವುದಿಲ್ಲವೇ?

ಮೀಸಲು ದಿನದಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಆದರೆ, ಮೀಸಲು ದಿನದಂದು ಹೆಚ್ಚು ಮಳೆಯಾಗುವ ಸಾಧ್ಯತೆ ಕಂಡುಬಂದಿಲ್ಲ. ಸೋಮವಾರ, ಅಹಮದಾಬಾದ್‌ ನಲ್ಲಿ ಹಗಲಿನಲ್ಲಿ ಬಿಸಿಲು ಇರಲಿದ್ದು, ಸಂಜೆ ಹವಾಮಾನದಲ್ಲಿ ಬದಲಾವಣೆಯನ್ನು ಕಾಣಬಹುದು. ಪಂದ್ಯದ ವೇಳೆ ಶೇ.10ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆರ್ದ್ರತೆಯು 45-50 ರ ನಡುವೆ ಉಳಿಯಲಿದ್ದು, ಗಾಳಿಯು ಗಂಟೆಗೆ ಸುಮಾರು 11 ಕಿಲೋಮೀಟರ್ ವೇಗದಲ್ಲಿ ಬೀಸಬಹುದು ಎಂದು ಇಲಾಖೆ ಹೇಳಿದೆ.

ಇಂದು ಪಂದ್ಯ ನಡೆಯದಿದ್ದರೆ ಹೇಗೆ?

ಇಂದು ಕೂಡ ಈ ಪಂದ್ಯ ನಡೆಯದಿದ್ದರೆ, ಗ್ರೂಪ್ ಹಂತದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್-1 ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. IPL 2023 ರ ಲೀಗ್ ಸುತ್ತಿನಲ್ಲಿ 10 ಪಂದ್ಯಗಳನ್ನು ಗೆದ್ದ ನಂತರ, ಗುಜರಾತ್ ತಂಡವು 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 17 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಫೈನಲ್ ರದ್ದಾದರೆ ಗುಜರಾತ್ ಟೈಟಾನ್ಸ್ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಲಿದೆ.

ಎರಡೂ ತಂಡಗಳ ಪಟ್ಟಿ:

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ಕ್ಯಾ & ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಶಿವಂ ದುಬೆ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಮೊಯೀನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹಿಷ್ ತಿಕ್ಷಣ, ಮತಿಶ ಪತಿರಾನ, ಮಿಷೆಲ್ ಸಾಂತ್ನೆರ್, ಸುಭ್ರಂಶುಪತಿ, ಶೇಖ್ ರಶೀದ್, ಆಕಾಶ್ ಸಿಂಗ್, ಬೆನ್ ಸ್ಟೋಕ್ಸ್, ಡ್ವೇನ್ ಪ್ರಿಟೋರಿಯಸ್, ಸಿಸಂದಾ ಮಗಲಾ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮಾರ್ಜಿತ್ ಸಿಂಗ್, ಆರ್ ಎಸ್ ಹ್ಯಾಂಗರ್ಗೆಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.

ಇದನ್ನೂ ಓದಿ: MS Dhoni: ಧೋನಿ ಬತ್ತಳಿಕೆಗೆ ಮತ್ತೊಂದು ಗರಿಮೆ: IPL ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಏಕೈಕ ಆಟಗಾರ ಮಾಹಿ

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿ.ಕೀ), ಹಾರ್ದಿಕ್ ಪಾಂಡ್ಯ (ಕ್ಯಾ), ಶುಭ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಶ್ರೀಕರ್ ಭರತ್, ಶಿವಂ ಮಾವಿ, ಓಡಿಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಜಯಂತ್ ಯಾದವ್, ದಾಸುನ್ ಶನಕ, ಅಭಿನವ್ ಮನೋಹರ್, ಅಲ್ಜಾರಿ ಜೋಸೆಫ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಯಶ್ ದಯಾಳ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News