MI vs CSK, Ravindra Jadeja Catch Video: ಫೀಲ್ಡರ್ ರವೀಂದ್ರ ಜಡೇಜಾ ಅವರ ಸಾಮಾರ್ಥ್ಯದ ಬಗ್ಗೆ ಹೇಳುವುದು, ಸೂರ್ಯನಿಗೆ ಟಾರ್ಚ್ ಹಿಡಿಯೋದು ಎರಡೂ ಸಮ ಎನ್ನಬಹುದು. ಜಡೇಜಾ ಏಕಾಂಗಿಯಾಗಿ ಪಂದ್ಯದ ದಾಳವನ್ನು ತಿರುಗಿಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಬ್ಯಾಟಿಂಗ್’ನಲ್ಲಿ ಅಬ್ಬರಿಸಿದರೆ, ಬೌಲಿಂಗ್’ನಲ್ಲಿ ಎದುರಾಳಿಯನ್ನು ನಡುಗಿಸಿ ಬಿಡುತ್ತಾರೆ.
ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!
ಐಪಿಎಲ್’ನ “ಎಲ್-ಕ್ಲಾಸಿಕೊ” ಎಂದೂ ಕರೆಯಲ್ಪಡುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಜಡೇಜಾ ಇದೇ ರೀತಿಯ ಸಾಧನೆ ಮಾಡಿದ್ದಾರೆ. ವಿಚಿತ್ರವಾದ ಕ್ಯಾಚ್ ಹಿಡಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್-2023 ರ 12 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ನಾಯಕ ರೋಹಿತ್ ಶರ್ಮಾ ಮುಂಬೈಗೆ ವೇಗದ ಆರಂಭ ನೀಡಲು ಯತ್ನಿಸಿ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದರು. ಅವರು ಇಶಾನ್ ಕಿಶನ್ (32) ಅವರೊಂದಿಗೆ 38 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಸಹ ಮಾಡಿದರು. ರೋಹಿತ್ ಅವರನ್ನು ತುಷಾರ್ ದೇಶಪಾಂಡೆ ಬೌಲ್ಡ್ ಮಾಡಿದರು, ನಂತರ ಜಡೇಜಾ ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್ ಮತ್ತು ತಿಲಕ್ ವರ್ಮಾಗೆ ಪೆವಿಲಿಯನ್ ಹಾದಿ ತೋರಿಸಿದರು.
ಇದು ಕೈ ಅಥವಾ ಜೇಡರ ಬಲೆಯೇ?
ಇನಿಂಗ್ಸ್’ನ 9ನೇ ಓವರ್‌ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಚೆಂಡನ್ನು ನೀಡಿದರು. ಈ ಓವರ್’ನ ಎರಡನೇ ಎಸೆತದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕ್ಯಾಮೆರಾನ್ ಗ್ರೀನ್ ಈ ಚೆಂಡನ್ನು ನೇರವಾಗಿ ವಿಕೆಟ್’ಗಳ ಕಡೆಗೆ ಬೀಸಿದರು. ಆದರೆ ಅಲ್ಲಿಯೇ ಇದ್ದ ಜಡೇಜಾ, ಸಡನ್ ಆಗಿ ಕ್ಯಾಚ್ ಹಿಡಿದರು. ಆ ದೃಶ್ಯವನ್ನು ನೀವೊಮ್ಮೆ ನೋಡಿ.
Sensational catch 🔥🔥@imjadeja grabs a RIPPER off his own bowling!
Follow the match ▶️ https://t.co/rSxD0lf5zJ#TATAIPL | #MIvCSK pic.twitter.com/HjnXep6tXF
— IndianPremierLeague (@IPL) April 8, 2023
ಇದನ್ನೂ ಓದಿ: Astrology: ಸೂರ್ಯಪ್ರಿಯ ಈ ದಿನದಂದು ಇಂತಹ ಕೆಲಸ ಮಾಡಿ… ವರ್ಷಪೂರ್ತಿ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವುದು
ಈ ಕ್ಯಾಚ್‌ನ ವೀಡಿಯೊವನ್ನು ಐಪಿಎಲ್’ನ ಅಧಿಕೃತ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಟ್ವಿಟರ್’ನಲ್ಲಿ ಕೇವಲ 20 ನಿಮಿಷಗಳಲ್ಲಿ 45 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಜೊತೆಗೆ ರಾಶಿ ರಾಶಿ ಕಮೆಂಟ್’ಗಳು ಬರುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.