RR vs CSK: ಅಗ್ರ ಬ್ಯಾಟರ್ಸ್ vs ವಿಶ್ವದರ್ಜೆಯ ಸ್ಪಿನ್ನರ್ಸ್: ಚೆನ್ನೈ-ರಾಜಸ್ಥಾನ ಹಣಾಹಣಿಯಲ್ಲಿ ಗೆಲ್ಲೋದು ಯಾರು ಗೊತ್ತಾ?

RR vs CSK Playing 11: ಸತತ 3 ಗೆಲುವುಗಳು ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ವರವಾಗಿ ಕಾಣಿಸಿಕೊಂಡಿದೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್’ನಲ್ಲಿ ಹಿಡಿತ ಸಾಧಿಸಿರುವ ಚೆನ್ನೈ ಇಂದಿನ ಪಂದ್ಯದಲ್ಲಿ ಸತತ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಸತತ ಎರಡು ಪಂದ್ಯಗಳಲ್ಲಿನ ಸೋಲಿನೊಂದಿಗೆ, ರಾಜಸ್ಥಾನವು ತಮ್ಮ ತಂಡದ ಅಭಿಯಾನವನ್ನು ಮರಳಿ ಟ್ರ್ಯಾಕ್‌ ಗೆ ತರಲು ಕಾಯುತ್ತಿದೆ.

Written by - Bhavishya Shetty | Last Updated : Apr 27, 2023, 01:52 PM IST
    • ಮಹೇಂದ್ರ ಸಿಂಗ್ ಧೋನಿ ತಂಡವು ಎಂದಿನಂತೆ ಉತ್ಸಾಹದಿಂದ ತುಂಬಿದೆ.
    • ಸತತ 3 ಗೆಲುವುಗಳು ಈ ತಂಡಕ್ಕೆ ವರವಾಗಿ ಕಾಣಿಸಿಕೊಂಡಿದೆ.
    • ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್’ನಲ್ಲಿ ಹಿಡಿತ ಸಾಧಿಸಿರುವ ಚೆನ್ನೈ ಇಂದಿನ ಪಂದ್ಯದಲ್ಲಿ ಸತತ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ.
RR vs CSK: ಅಗ್ರ ಬ್ಯಾಟರ್ಸ್ vs ವಿಶ್ವದರ್ಜೆಯ ಸ್ಪಿನ್ನರ್ಸ್: ಚೆನ್ನೈ-ರಾಜಸ್ಥಾನ ಹಣಾಹಣಿಯಲ್ಲಿ ಗೆಲ್ಲೋದು ಯಾರು ಗೊತ್ತಾ? title=
RR vs CSK

IPL 2023, RR vs CSK Playing 11: ಕಳೆದ ಎರಡು ಪಂದ್ಯಗಳಲ್ಲಿ ಸೋಲಿನಿಂದ ಜರ್ಜರಿತವಾಗಿರುವ ರಾಜಸ್ಥಾನ್ ರಾಯಲ್ಸ್ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದು ಪುನರಾಗಮನದ ನಿರೀಕ್ಷೆಯಲ್ಲಿದೆ ರಾಜಸ್ಥಾನ ತಂಡ.

ಮಹೇಂದ್ರ ಸಿಂಗ್ ಧೋನಿ ತಂಡವು ಎಂದಿನಂತೆ ಉತ್ಸಾಹದಿಂದ ತುಂಬಿದೆ. ಸತತ 3 ಗೆಲುವುಗಳು ಈ ತಂಡಕ್ಕೆ ವರವಾಗಿ ಕಾಣಿಸಿಕೊಂಡಿದೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್’ನಲ್ಲಿ ಹಿಡಿತ ಸಾಧಿಸಿರುವ ಚೆನ್ನೈ ಇಂದಿನ ಪಂದ್ಯದಲ್ಲಿ ಸತತ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ.

ಇದನ್ನೂ ಓದಿ: RCB vs KKR: ಕೊನೆಯ 5 ಓವರ್’ನಲ್ಲಿ 70 ರನ್ ಸಿಡಿಸಿದ KKR: ರೋಚಕ ಪಂದ್ಯದಲ್ಲಿ ಮಿಂಚಿದ್ದು ಈ ವಿದೇಶಿ ಕ್ರಿಕೆಟಿಗ!

ಇನ್ನು ರಿತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಅವರ ಅದ್ಭುತ ಬ್ಯಾಟಿಂಗ್‌’ನಿಂದ ಚೆನ್ನೈ ಕಳೆದ ಮೂರು ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಿಸಿದೆ. ಹೀಗಿರುವಾಗ ಈ ಪಂದ್ಯದಲ್ಲಿ ಚೆನ್ನೈನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತು ರಾಜಸ್ಥಾನದ ವಿಶ್ವ ದರ್ಜೆಯ ಸ್ಪಿನ್ನರ್‌’ಗಳ ನಡುವೆ ರೋಚಕ ಪಂದ್ಯ ನಡೆಯುವ ಸಾಧ್ಯತೆ ಇದೆ.

ಡೆವೊನ್ ಕಾನ್ವೆ ಈ ಋತುವಿನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ಏಳು ಪಂದ್ಯಗಳಲ್ಲಿ 314 ರನ್ ಗಳಿಸಿದ್ದಾರೆ, ಇನ್ನೊಂದೆಡೆ ಅಜಿಂಕ್ಯ ರಹಾನೆ ಅವರ ಆಕ್ರಮಣಕಾರಿ ವರ್ತನೆ ಎಲ್ಲಾ ತಂಡಗಳ ಎದುರು ಹೈಲೈಟ್ ಆಗುತ್ತಿದೆ. ಕಳೆದಚ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಜಿಂಕ್ಯ ರಹಾನೆ ಕೇವಲ 29 ಎಸೆತಗಳಲ್ಲಿ 71 ರನ್ ಗಳಿಸಿ ಬಿರುಸಿನ ಆಟವಾಡಿದ್ದರು. ರಹಾನೆ ಐದು ಪಂದ್ಯಗಳಲ್ಲಿ 209 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ 199.04 ಆಗಿದೆ.

ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶ ಬಲಗೊಳ್ಳಲಿದೆ!

 ಈ ಋತುವಿನಲ್ಲಿ ಚೆನ್ನೈ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದಿರುವುದು ರಾಯಲ್ಸ್‌’ಗೆ ಸಮಾಧಾನದ ಸಂಗತಿಯಾಗಿದೆ. ಆ ಪಂದ್ಯದಲ್ಲೂ ಧೋನಿ ಒಮ್ಮೆ ಚೆನ್ನೈ ತಂಡವನ್ನು ಗೆಲುವಿನ ಸಮೀಪಕ್ಕೆ ತಂದಿದ್ದರು, ಆದರೆ ಕೊನೆಯಲ್ಲಿ ಅವರ ತಂಡವು ತವರಿನ ಪ್ರೇಕ್ಷಕರ ಮುಂದೆ ಮೂರು ರನ್‌’ಗಳಿಂದ ಸೋಲನ್ನು ಎದುರಿಸಬೇಕಾಯಿತು. ಆದರೆ ಅಲ್ಲಿಂದೀಚೆಗೆ ವಿಷಯಗಳು ಬಹಳಷ್ಟು ಬದಲಾಗಿವೆ. ಚೆನ್ನೈ ಐದು ಗೆಲುವುಗಳಿಂದ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶ ಬಲಗೊಳ್ಳಲಿದೆ.

ಪಿಚ್ ಸ್ಪಿನ್ನರ್‌’ಗಳಿಗೆ ಸಹಾಯದ ನಿರೀಕ್ಷೆ:

ಸತತ ಎರಡು ಪಂದ್ಯಗಳಲ್ಲಿನ ಸೋಲಿನೊಂದಿಗೆ, ರಾಜಸ್ಥಾನವು ತಮ್ಮ ತಂಡದ ಅಭಿಯಾನವನ್ನು ಮರಳಿ ಟ್ರ್ಯಾಕ್‌ ಗೆ ತರಲು ಕಾಯುತ್ತಿದೆ. ಬಲಿಷ್ಠ ಚೆನ್ನೈ ತಂಡದ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ರಾಜಸ್ಥಾನವು ಭಾರೀ ಅಭ್ಯಾಸವನ್ನೂ ಮಾಡುತ್ತಿದೆ. ಒಂದು ವೇಳೆ ರಾಜಸ್ಥಾನ ತಂಡ ಚೆನ್ನೈ ತಂಡವನ್ನು ಸೋಲಿಸಬೇಕಾದರೆ ಅದರ ಅಗ್ರ ಬ್ಯಾಟ್ಸ್‌ಮನ್‌ ಗಳಾದ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಬೇಕಿದೆ. ಸ್ಪಿನ್ನರ್‌ಗಳಿಗೆ ಈ ಪಿಚ್‌ನಿಂದ ಸಹಾಯ ಸಿಗುವ ನಿರೀಕ್ಷೆಯಿದೆ.

ಇನ್ನೊಂದೆಡೆ ರಾಜಸ್ಥಾನದ ಸ್ಟಾರ್ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಪಾತ್ರ ಬಹುಮುಖ್ಯವಾಗಿರುತ್ತದೆ. ರಾಜಸ್ಥಾನ್ ರಾಯಲ್ಸ್ ತಮ್ಮ ತವರು ಮೈದಾನದಲ್ಲಿ ಆಡುತ್ತಿರಬಹುದು, ಆದರೆ ಕೆಲವು ದಿನಗಳ ಹಿಂದೆ ಕೋಲ್ಕತ್ತಾದಲ್ಲಿ ನಡೆದಂತೆ ಧೋನಿಗೆ ಪ್ರೇಕ್ಷಕರಿಂದ ಅಪಾರ ಬೆಂಬಲ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಧೋನಿ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ,

ಇದನ್ನೂ ಓದಿ: Mangal Gochar 2023: ಈ ರಾಶಿಯವರ ಭಾಗ್ಯದ ಬಾಗಿಲು ತೆರೆದ ಮಂಗಳ: ಮುಂದಿನ 45 ದಿನ ಹೆಜ್ಜೆ ಹೆಜ್ಜೆಗೂ ಜಯ; ದಿಢೀರ್ ಧನಲಾಭ

ಚೆನ್ನೈ ಸೂಪರ್ ಕಿಂಗ್ಸ್‌ನ ಸಂಭಾವ್ಯ ಪ್ಲೇಯಿಂಗ್ 11:

ರಿತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ತುಷಾರ್ ದೇಶಪಾಂಡೆ, ಮಹೇಶ್ ತಿಕಷ್ಣ, ಮತಿಶ್ ಪತಿರಾನ, ಆಕಾಶ್ ಸಿಂಗ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News