IPL Playoff: ಚೆನ್ನೈ-ಮುಂಬೈ ತಂಡ ಪ್ಲೇ ಆಫ್’ಗೆ ಎಂಟ್ರಿಯಾಗದಂತೆ ಮಾಡುತ್ತೆ ಈ ಎರಡು ಖತರ್ನಾಕ್ IPL ಟೀಂ!

IPL Play Off: IPL 2023 ರಲ್ಲಿ 2 ತಂಡಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಅನ್ನು ಪ್ಲೇಆಫ್‌ನಿಂದ ತೆಗೆದುಹಾಕಬಹುದು ಅಥವಾ ಆ ತಂಡಗಳಿಗೆ ಎಂಟ್ರಿಯೇ ಸಿಗದಂತೆ ಮಾಡಬಹುದು. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್‌ ಗೆ ಅರ್ಹತೆ ಪಡೆಯಬೇಕಾದರೆ, ಕೊನೆಯ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು. ಐಪಿಎಲ್ 2023 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ 13 ಪಂದ್ಯಗಳಿಂದ 15 ಅಂಕಗಳನ್ನು ಪಡೆದಿದೆ. ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 14 ಅಂಕಗಳನ್ನು ಪಡೆದಿದೆ.

Written by - Bhavishya Shetty | Last Updated : May 16, 2023, 01:03 PM IST
    • ಗುಜರಾತ್ ಟೈಟಾನ್ಸ್ ಸತತ ಎರಡನೇ ಬಾರಿಗೆ ಐಪಿಎಲ್ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ
    • ಐಪಿಎಲ್ ಪ್ಲೇಆಫ್‌ ಗೆ ಅರ್ಹತೆ ಪಡೆಯುವ ಇತರ ಮೂರು ತಂಡಗಳಿಗೆ ಕಠಿಣ ಹೋರಾಟ ನಡೆಯಲಿದೆ
    • ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 20 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಬೇಕಾಗಿದೆ
IPL Playoff: ಚೆನ್ನೈ-ಮುಂಬೈ ತಂಡ ಪ್ಲೇ ಆಫ್’ಗೆ ಎಂಟ್ರಿಯಾಗದಂತೆ ಮಾಡುತ್ತೆ ಈ ಎರಡು ಖತರ್ನಾಕ್ IPL ಟೀಂ!   title=
IPL Play Off

IPL Play Off: ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು 34 ರನ್‌ ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಸತತ ಎರಡನೇ ಬಾರಿಗೆ ಐಪಿಎಲ್ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಗುಜರಾತ್ ಟೈಟಾನ್ಸ್ ಹೊರತುಪಡಿಸಿ, ಐಪಿಎಲ್ ಪ್ಲೇಆಫ್‌ ಗೆ ಅರ್ಹತೆ ಪಡೆಯುವ ಇತರ ಮೂರು ತಂಡಗಳಿಗೆ ಕಠಿಣ ಹೋರಾಟ ನಡೆಯಲಿದೆ.

ಇದನ್ನೂ ಓದಿ: ಜಡೇಜಾ ರೀತಿಯೇ Team Indiaದ ಸರ್ವಶ್ರೇಷ್ಠ ಆಟಗಾರನೀತ! ಆದ್ರೆ ವೃತ್ತಿಜೀವನ ಅಂತ್ಯಗೊಳಿಸಿದ್ದು ಅಕ್ಷರ್ ಪಟೇಲ್!

IPL 2023 ರಲ್ಲಿ 2 ತಂಡಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಅನ್ನು ಪ್ಲೇಆಫ್‌ನಿಂದ ತೆಗೆದುಹಾಕಬಹುದು ಅಥವಾ ಆ ತಂಡಗಳಿಗೆ ಎಂಟ್ರಿಯೇ ಸಿಗದಂತೆ ಮಾಡಬಹುದು. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್‌ ಗೆ ಅರ್ಹತೆ ಪಡೆಯಬೇಕಾದರೆ, ಕೊನೆಯ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು. ಐಪಿಎಲ್ 2023 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ 13 ಪಂದ್ಯಗಳಿಂದ 15 ಅಂಕಗಳನ್ನು ಪಡೆದಿದೆ. ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 14 ಅಂಕಗಳನ್ನು ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 20 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಬೇಕಾಗಿದೆ. ಮುಂಬೈ ಇಂಡಿಯನ್ಸ್ ತನ್ನ ಕೊನೆಯ 2 ಲೀಗ್ ಪಂದ್ಯಗಳನ್ನು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಬೇಕಾಗಿದೆ.

ಐಪಿಎಲ್ 2023 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ 12 ಪಂದ್ಯಗಳಲ್ಲಿ 12 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಮೇ 20 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋತರೆ, ಅವರು ಪ್ಲೇಆಫ್ ರೇಸ್‌ ನಿಂದ ಹೊರಗುಳಿಯಲಿದ್ದಾರೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೆ, ಆ ತಂಡ ಕೂಡ ಪ್ಲೇ ಆಫ್ ಗೆ ಎಂಟ್ರಿ ಕೊಡಲು ಸಾಧ್ಯವಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ, 14 ಪಂದ್ಯಗಳಲ್ಲಿ 16 ಅಂಕಗಳನ್ನು ಪಡೆದುಕೊಳ್ಳುತ್ತದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ, ಈ ತಂಡ ಕೂಡ 14 ಪಂದ್ಯಗಳಲ್ಲಿ 16 ಅಂಕಗಳನ್ನು ಪಡೆಯುತ್ತದೆ. ಹೀಗಿರುವಾಗ 16-16 ಅಂಕಗಳೊಂದಿಗೆ ಪಂಜಾಬ್ ಮತ್ತು ಬೆಂಗಳೂರು ತಂಡಗಳು ಪ್ಲೇ ಆಫ್‌ ಗೆ ಲಗ್ಗೆ ಇಡಲಿವೆ.

ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಗೆದ್ದರೆ, 14 ಪಂದ್ಯಗಳಲ್ಲಿ 17 ಅಂಕಗಳನ್ನು ಪಡೆದು ಪ್ಲೇ ಆಫ್‌ ಗೆ ಪ್ರವೇಶಿಸುತ್ತಾರೆ.

ಇದನ್ನೂ ಓದಿ: ಅರ್ಜುನ್ ತೆಂಡೂಲ್ಕರ್ ಮೇಲೆ ನಾಯಿ ದಾಳಿ: ಸ್ವಲ್ಪದರಲ್ಲೇ ಪಾರಾದ ಸಚಿನ್ ಪುತ್ರನ ಭವಿಷ್ಯ!

ಈ ಸಂದರ್ಭದಲ್ಲಿ ಗುಜರಾತ್ ಟೈಟಾನ್ಸ್ (18 ಅಂಕ): ನಂ. 1, ಲಕ್ನೋ ಸೂಪರ್ ಜೈಂಟ್ಸ್ (17 ಅಂಕ): ನಂ. 2, ರಾಯಲ್ ಚಾಲೆಂಜರ್ಸ್ ಬೆಂಗಳೂರು (16 ಅಂಕ): ನಂ. 3 ಮತ್ತು ಪಂಜಾಬ್ ಕಿಂಗ್ಸ್ (16 ಅಂಕ): ನಂ. 4 ಅಂಕ ಪಡೆದುಕೊಂಡು ಪ್ಲೇ ಆಫ್ ನಲ್ಲಿ ಆಡಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News