IPL 2022: ಸಿಎಸ್‌ಕೆಯನ್ನು ಚಾಂಪಿಯನ್ ಮಾಡಿದ ಈ ಸ್ಟಾರ್ ಆಟಗಾರ ಮೆಗಾ ಹರಾಜಿನಿಂದ ಔಟ್!

ಐಪಿಎಲ್ 2022ರ ಮೊದಲು ಮೆಗಾ ಹರಾಜು ನಡೆಯಲಿದೆ. ಈ ದೊಡ್ಡ ಹರಾಜು ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ. ಆದರೆ ಎಲ್ಲಾ 10 ತಂಡಗಳು ಹರಾಜಿನಲ್ಲಿ ಸ್ಟಾರ್ ಆಲ್‌ರೌಂಡರ್ ಕೊರತೆಯನ್ನು ಖಂಡಿತ ಅನುಭವಿಸುತ್ತವೆ.

Written by - Puttaraj K Alur | Last Updated : Jan 23, 2022, 06:43 AM IST
  • ಗಾಯದ ಸಮಸ್ಯೆಯಿಂದ ಐಪಿಎಲ್ ಮೆಗಾ ಹರಾಜಿನಿಂದ ಔಟ್ ಆದ ಸ್ಟಾರ್ ಸ್ಟಾರ್ ಆಲ್‌ರೌಂಡರ್
  • ಕೆಳ ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಇಂಗ್ಲೆಂಡಿನ ಮಾರಕ ಆಲ್‌ರೌಂಡರ್ ಸ್ಯಾಮ್​ ಕುರ್ರಾನ್
  • ಭಾರೀ ಕುತೂಹಲ ಮೂಡಿಸಿರುವ 2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ
IPL 2022: ಸಿಎಸ್‌ಕೆಯನ್ನು ಚಾಂಪಿಯನ್ ಮಾಡಿದ ಈ ಸ್ಟಾರ್ ಆಟಗಾರ ಮೆಗಾ ಹರಾಜಿನಿಂದ ಔಟ್! title=
ಸ್ಯಾಮ್ ಕುರ್ರಾನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ

ನವದೆಹಲಿ: ಐಪಿಎಲ್ 2022ಕ್ಕೂ ಮುನ್ನ ಮೆಗಾ ಹರಾಜು(IPL 2022 Mega Action) ನಡೆಯಲಿದೆ. ಈ ದೊಡ್ಡ ಹರಾಜು ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಸ್ಟಾರ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 1,200ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಪ್ರಮುಖ ತಂಡಗಳು ಕೆಲವು ಸ್ಟಾರ್ ಆಟಗಾರರನ್ನು ತಮ್ಮಲ್ಲಿ ಉಳಿಸಿಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ಆಟಗಾರರ ಮೇಲೆ ಕಣ್ಣಿಟ್ಟಿವೆ.

ಈ ಬಾರಿಯ ಐಪಿಎಲ್ ಟೂರ್ನಿ(IPL 2022)ಗೆ 2 ಹೊಸ ತಂಡಗಳು ಸೇರ್ಪಡೆಯಾಗಲಿವೆ. ಎಲ್ಲಾ 10 ತಂಡಗಳು ಹರಾಜಿನಲ್ಲಿ ಸ್ಟಾರ್ ಆಲ್‌ರೌಂಡರ್ ಕೊರತೆಯನ್ನು ಅನುಭವಿಸುತ್ತವೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ(CSK) ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರನೊಬ್ಬ ಮೆಗಾ ಹರಾಜಿನಿಂದ ಹೊರಬಿದ್ದಿದ್ದಾರೆ. ಹಾಗಿದ್ದರೆ ಯಾರು ಈ ಆಟಗಾರ..?

ಗಾಯದ ಸಮಸ್ಯೆಯಿಂದ ಮೆಗಾ ಹರಾಜಿನಿಂದ ಔಟ್!

ಇಂಗ್ಲೆಂಡಿನ ಮಾರಕ ಆಲ್‌ರೌಂಡರ್ ಸ್ಯಾಮ್​ ಕುರ್ರಾನ್(Sam Curran) ಅವರು ಕೆಳ ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳಲು IPL 2022 ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಪರ ಕುರ್ರಾನ್ ಆಡಿದ್ದರು. ದುಬೈನಲ್ಲಿ ನಡೆದ ಐಪಿಎಲ್ ದ್ವಿತೀಯಾರ್ಧದ ವೇಳೆ ಅವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಅವರಿಗೆ ಬೆನ್ನಿನ ಕೆಳಭಾಗದಲ್ಲಿ ಗಾಯವಾಗಿತ್ತು. ಅಕ್ಟೋಬರ್ 2ರಂದು ಅಬುಧಾಬಿಯಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಕುರ್ರಾನ್ ಗಾಯಗೊಂಡಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿತ್ತು.

ಇದನ್ನೂ ಓದಿ: Ind vs SA : ಭಾರತದ ಸೋಲಿಗೆ ವಿಲನ್ ಯಾರು? ಟೀಂನಿಂದ ಔಟ್ ಆಗ್ತಾನಾ ಈ ಆಟಗಾರ?

ಬೆನ್ನು ನೋವಿಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಕುರ್ರಾನ್

ಸದ್ಯ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕುರ್ರಾನ್(Sam Curran) ಮುಂದಿನ ಕೆಲವು ದಿನಗಳಲ್ಲಿ ಸಂಪೂರ್ಣ ಚಿಕಿತ್ಸೆಗೆ ಒಳಗಾಗುತ್ತಾರೆ. ತಾವು ಗಾಯದ ಸಮಸ್ಯೆಯಿಂದ ಬಳುತ್ತಿರುವ ಬಗ್ಗೆ ಈ ಹಿಂದೆಯೇ ಅವರು ತಿಳಿಸಿದ್ದರು. ಡ್ರೆಸ್ಸಿಂಗ್ ರೂಂನಿಂದಲೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವರು ಚಿತ್ರವನ್ನು ಪೋಸ್ಟ್ ಮಾಡಿದ್ದರು. ಕೆಳ ಬೆನ್ನಿನ ಗಾಯಕ್ಕೆ ಅಗತ್ಯ ಚಿಕಿತ್ಸೆ ಪಡೆದ ಬಳಿಕ ಅವರು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.   

ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ

ಆಡಿರುವ 32 IPL ಪಂದ್ಯಗಳಲ್ಲಿ ಕುರ್ರಾನ್(Sam Curran) 2 ಅರ್ಧ ಶತಕಗಳನ್ನು ಒಳಗೊಂಡಂತೆ 22.47ರ ಸರಾಸರಿಯಲ್ಲಿ 337 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಅವರು 31.09 ರ ಸರಾಸರಿಯಲ್ಲಿ 32 ವಿಕೆಟ್ ಗಳನ್ನು ಮತ್ತು 9.21ರ Economy Rateನಲ್ಲಿ 11ಕ್ಕೆ 4 ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ. 2020 ಮತ್ತು 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುವ ಮುನ್ನ ಕುರ್ರಾನ್ 2019ರ ತನ್ನ ಮೊದಲ IPL ಋತುವಿನಲ್ಲಿ ಕಿಂಗ್ಸ್ XI ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ: "ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೊರತುಪಡಿಸಿ ಒತ್ತಡ ನಿಭಾಯಿಸಬಲ್ಲವರು ಭಾರತ ತಂಡದಲ್ಲಿಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News