ಈ ಬಾರಿ ಐಪಿಎಲ್ ಹರಾಜು ಪಕ್ರಿಯೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಶಿಫ್ಟ್ ..!

ಪ್ರತಿ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಗಾರ್ಡನ್ ಸಿಟಿಯಿಂದ ಸಿಟಿ ಆಫ್ ಜಾಯ್ ಗೆ ಸ್ಥಳಾಂತರಗೊಂಡಿದೆ. ಡಿಸೆಂಬರ್ 19 ರಂದು 2020 ಐಪಿಎಲ್ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಆ ಮೂಲಕ ಹಳೆಯ ಸಂಪ್ರದಾಯಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದೆ.

Last Updated : Oct 1, 2019, 04:28 PM IST
ಈ ಬಾರಿ ಐಪಿಎಲ್ ಹರಾಜು ಪಕ್ರಿಯೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಶಿಫ್ಟ್ ..!   title=
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರತಿ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಗಾರ್ಡನ್ ಸಿಟಿಯಿಂದ ಸಿಟಿ ಆಫ್ ಜಾಯ್ ಗೆ ಸ್ಥಳಾಂತರಗೊಂಡಿದೆ. ಡಿಸೆಂಬರ್ 19 ರಂದು 2020 ಐಪಿಎಲ್ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಆ ಮೂಲಕ ಹಳೆಯ ಸಂಪ್ರದಾಯಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದೆ.

ಇಎಸ್‌ಪಿಎನ್‌ಕ್ರಿನ್‌ಫೊದಲ್ಲಿನ ವರದಿಯ ಪ್ರಕಾರ ಮುಂದಿನ ವರ್ಷ ಫ್ರಾಂಚೈಸಿಗಳು ವಿಸರ್ಜಿಸುವ ಮೊದಲು 2020 ಐಪಿಎಲ್ ಹರಾಜು ಕೊನೆಯದಾಗಿದೆ ಮತ್ತು 2021 ರಿಂದ ಹೊಸ ತಂಡಗಳನ್ನು ರೆಡಿ ಮಾಡಲು ತಯಾರಿ ನಡೆಸುತ್ತವೆ ಎನ್ನಲಾಗಿದೆ. ಎಲ್ಲಾ ಎಂಟು ಫ್ರಾಂಚೈಸಿಗಳ ವ್ಯಾಪಾರ ವಿಂಡೋ ನವೆಂಬರ್ 14ಕ್ಕೆ ಕೊನೆಗೊಳ್ಳಲಿದೆ. 2020 ರ ಐಪಿಎಲ್ ಆವೃತ್ತಿಗೆ, ಎಲ್ಲಾ ಫ್ರಾಂಚೈಸಿಗಳಿಗೆ ಮೂಲತಃ ತಮ್ಮ ತಂಡಗಳನ್ನು ನಿರ್ಮಿಸಲು 85 ಕೋಟಿ ರೂ. ಹೆಚ್ಚುವರಿಯಾಗಿ 3 ಕೋಟಿ ರೂಗಳನ್ನು ಬಳಸಬಹುದು.

ಸದ್ಯ ಇರುವ ಎಲ್ಲ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 8.2 ಕೋಟಿ ರೂ.ಬಾಕಿಯನ್ನು ಹೊಂದಿದೆ.ರಾಜಸ್ಥಾನ್ ರಾಯಲ್ಸ್ (7.15 ಕೋಟಿ ರೂ.), ಕೋಲ್ಕತಾ ನೈಟ್ ರೈಡರ್ಸ್ (6.05 ಕೋಟಿ ರೂ.), ಸನ್‌ರೈಸರ್ಸ್ ಹೈದರಾಬಾದ್ (5.3 ಕೋಟಿ ರೂ.), ಕಿಂಗ್ಸ್ ಇಲೆವೆನ್ ಪಂಜಾಬ್ (3.7 ಕೋಟಿ ರೂ. ), ಚೆನ್ನೈ ಸೂಪರ್ ಕಿಂಗ್ಸ್ (3.2 ಕೋಟಿ ರೂ.), ಮುಂಬೈ ಇಂಡಿಯನ್ಸ್ (3.05 ಕೋಟಿ ರೂ.) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (1.8 ಕೋಟಿ ರೂ.) ಎಂದು ವರದಿ ಹೇಳಿದೆ.  

Trending News