IPL 2024: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಮೂರು ಬಾರಿ 250+ ಸ್ಕೋರ್ ಮಾಡಿದೆ. ಈ ಮೂಲಕ ಒಂದೇ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದ್ದ ಸರ್ವಶ್ರೇಷ್ಠ ದಾಖಲೆಯನ್ನು 3 ಬಾರಿ ಮುರಿದಿದೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಪ್ರದರ್ಶನ ಅದ್ಭುತವಾಗಿದೆ. ಟ್ರಾವಿಡ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್, ಶಹಬಾಜ್ ಅಹಮದ್ ಮತ್ತು ಅಬ್ದುಲ್ ಸಮದ್ರಂತಹ ಉತ್ತಮ ಆಟಗಾರರನ್ನು ಹೊಂದಿರುವ ಹೈದರಾಬಾದ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಕಳೆದ ಒಂದು ದಶಕದಲ್ಲಿ ಯಾವ ತಂಡವೂ ಮುರಿಯದ ಸರ್ವಶೇಷ್ಠ ರೆಕಾರ್ಡ್ ಅನ್ನು ಪ್ಯಾಟ್ ಕಮಿನ್ಸ್ ನೇತೃತ್ವದ SRH ತಂಡವು ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಮುರಿದಿದೆ.
2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ RCB ತಂಡವು ಕ್ರಿಸ್ ಗೇಲ್ (175) ಭರ್ಜರಿ ಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿ ದಾಖಲೆ ನಿರ್ಮಿಸಿತ್ತು. ಈ ಐಪಿಎಲ್ ಇತಿಹಾಸದಲ್ಲಿಯೇ ಈ ಸರ್ವಶ್ರೇಷ್ಠ ದಾಖಲೆಯನ್ನು ಯಾವ ತಂಡವೂ ಮುರಿಯಲು ಸಾಧ್ಯವಿಲ್ಲವೆಂದು ಹೇಳಲಾಗಿತ್ತು. ಅದರಂತೆ ಕಳೆದ 10 ವರ್ಷಗಳವರೆಗೆ ಯಾವ ತಂಡವೂ ಈ ದಾಖಲೆಯ ಸಮೀಪಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ.
𝗔 𝘂𝗻𝗶𝗾𝘂𝗲 𝗺𝗶𝗹𝗲𝘀𝘁𝗼𝗻𝗲 𝗮𝗰𝗵𝗶𝗲𝘃𝗲𝗱 🌟
We are now the only team in IPL history to score 2⃣5⃣0⃣+ runs on 3 occasions 🔥💪 pic.twitter.com/Pa4k77NDOG
— SunRisers Hyderabad (@SunRisers) April 21, 2024
ಆದರೆ ಪ್ರಸಕ್ತ ಟೂರ್ನಿಯಲ್ಲಿ ಹೈದರಾಬಾದ್ ತಂಡವು ಈ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಒಂದೇ ಸೀಸನ್ನಲ್ಲಿ 3 ಬಾರಿ RCB ತಂಡದ ಸರ್ವಶ್ರೇಷ್ಠ ದಾಖಲೆಯನ್ನು ಕುಟ್ಟಿಪುಡಿ ಮಾಡಿದ್ದು, ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ RCB ತಂಡದ ದಾಖಲೆಯು 5ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.
ಈ ಬಾರಿ ಮುಂಬೈ ವಿರುದ್ಧ 272 ರನ್ ಬಾರಿಸಿದ್ದ ಹೈದರಾಬಾದ್ ಐಪಿಎಲ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ಬಳಿಕ RCB ವಿರುದ್ಧವೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬರೋಬ್ಬರಿ 287 ರನ್ ಚಚ್ಚುವ ಮೂಲಕ ಮತ್ತೊಮ್ಮೆ ಹೊಸ ದಾಖಲೆ ನಿರ್ಮಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಸಿಡಿಸುವ ಮೂಲಕ ಹೈದರಾಬಾದ್ ತಂಡ ಮತ್ತೊಮ್ಮೆ ತನ್ನ ಪವರ್ಫುಲ್ ಪ್ರದರ್ಶನ ನೀಡಿದೆ.
ಈ ಮೂಲಕ ಒಂದೇ ಸೀಸನ್ನಲ್ಲಿ 3 ಬಾರಿ 263+ ಸ್ಕೋರ್ ಗಳಿಸಿ, RCB ತಂಡದ ಸರ್ವಶ್ರೇಷ್ಠ ದಾಖಲೆಯನ್ನು 3 ಬಾರಿ ಮುರಿದಿದೆ. ಐಪಿಎಲ್ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಹೈದರಾಬಾದ್ ಟಾಪ್ 2 ಸ್ಥಾನಗಳನ್ನು ತನ್ನ ಹೆಸರಿನಲ್ಲಿಸಿಕೊಂಡಿದೆ. 3ನೇ ಸ್ಥಾನದಲ್ಲಿ 272 ಸ್ಕೋರ್ ಮಾಡಿರುವ ಕೋಲ್ಕತ್ತಾ ಇದ್ದರೆ, 4ನೇ ಸ್ಥಾನದಲ್ಲಿ ಅದೇ ಹೈದರಾಬಾದ್ ಇದೆ. 5ನೇ ಸ್ಥಾನದಲ್ಲಿ 263 ಸ್ಕೋರ್ ಗಳಿಸಿರುವ RCB ಇದೆ.
ಇದನ್ನೂ ಓದಿ: Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್ ಸೆಲೆಕ್ಷನ್ ಯಾವಾಗ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.