IPL 2024 ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ ತಂಡದಿಂದ ಈ ಸ್ಟಾರ್‌ ಆಟಗಾರ ಔಟ್.!

 Mumbai Indians: ಐಪಿಎಲ್‌ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು.. ಈ ನಡುವೆ ಮುಂಬೈ ಇಂಡಿಯನ್ಸ್‌ ತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ.. 

Written by - Savita M B | Last Updated : Mar 17, 2024, 01:50 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಮುಂಬರುವ ಸೀಸನ್ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ.
  • ಅಭಿಮಾನಿಗಳು ಈಗ ಆಕ್ಷನ್-ಪ್ಯಾಕ್ಡ್ ಪಂದ್ಯಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
  • ಮಧುಶಂಕ ಅವರು ಗಾಯದಿಂದಾಗಿ ಮೊದಲಾರ್ಧ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಖಚಿತಪಡಿಸಲಾಗಿದೆ..
IPL 2024 ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ ತಂಡದಿಂದ ಈ ಸ್ಟಾರ್‌ ಆಟಗಾರ ಔಟ್.! title=

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಮುಂಬರುವ ಸೀಸನ್ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಅಭಿಮಾನಿಗಳು ಈಗ ಆಕ್ಷನ್-ಪ್ಯಾಕ್ಡ್ ಪಂದ್ಯಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಸೀಸನ್‌ನಲ್ಲಿ MI ಯ ಮೊದಲ ಪಂದ್ಯವು ಮಾರ್ಚ್ 24 ಭಾನುವಾರದಂದು ನಡೆಯಲಿದ್ದು ಸದ್ಯ ಟೂರ್ನಿಗೂ ಮುನ್ನ ಈ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.. 

 ಈ ಸೀಸನ್‌ನಲ್ಲಿ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಮ್ಮ ವೇಗದ ಬೌಲರ್ ದಿಲ್ಶನ್ ಮಧುಶಂಕ ಅವರ ಬೆಂಬಲವನ್ನು ಪಡೆಯುವುದಿಲ್ಲ.. ಹೌದು ಸ್ಟಾರ್‌ ಆಟಗಾರ ದಿಲ್ಶನ್ ಮಧುಶಂಕ ಅವರು ಗಾಯದಿಂದಾಗಿ ಮೊದಲಾರ್ಧ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಖಚಿತಪಡಿಸಲಾಗಿದೆ.. 

ಇದನ್ನೂ ಓದಿ-ಟೀಂ ಇಂಡಿಯಾ ಬ್ಯಾಟ್ಸ್‌ಮನ್‌‌ ಶ್ರೇಯಸ್ ಅಯ್ಯರ್‌ ಅಕ್ಕ ಯಾರು ಗೊತ್ತಾ? ಬಾಲಿವುಡ್‌ ನಟಿಯರನ್ನೇ ಮೀರಿಸ್ತಾಳೆ ಈ ಚೆಲುವೆ!

 ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲವಾಗಿದ್ದು, ಸೋಮವಾರ ಚಟ್ಟೋಗ್ರಾಮ್‌ನಲ್ಲಿ ಫೈನಲ್ ಏಕದಿನ ಪಂದ್ಯ ನಡೆಯಲಿದೆ. ಈ ಎಡಗೈ ವೇಗದ ಬೌಲರ್ ಮೈದಾನದಿಂದ ಹೊರಡುವ ಮೊದಲು ಎರಡನೇ ಏಕದಿನ ಪಂದ್ಯದಲ್ಲಿ 6.4 ಓವರ್ ಬೌಲ್ ಮಾಡಿದ್ದರು.. 

ಇದನ್ನೂ ಓದಿ-ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ನಂಬರ್‌ ಅನ್ನು ಫೋನ್‌ನಲ್ಲಿ ಏನಂತ ಸೇವ್ ಮಾಡಿದ್ದಾರೆ ನೋಡಿ..!

ಇನ್ನು ಮುಂಬೈ ಐಪಿಎಲ್ 2024 ರ ಹರಾಜಿನಲ್ಲಿ ಈ ಆಟಗಾರನನ್ನು ರೂ 4.6 ಕೋಟಿಗೆ ಖರೀದಿಸಿತ್ತು.. ವೇಗದ ಬೌಲರ್ ದಿಲ್ಶನ್ ಮಧುಶಂಕ ಜಸ್​ಪ್ರೀತ್ ಬುಮ್ರಾಗೆ ಉತ್ತಮ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು ಆದರೆ ದಿಲ್ಶನ್ ಮಧುಶಂಕ ಗಾಯಗೊಂಡಿರುವುದು ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ದೊಡ್ಡ ಆಘಾತವನ್ನುಂಟುಮಾಡಿದೆ.. 

ವೇಗದ ಬೌಲರ್ ಎಲ್ಲಿಯವರೆಗೂ ಮೈದಾನದಿಂದ ಹೊರಗುಳಿಯುತ್ತಾರೆ ಎಂಬುದು ಇನ್ನೂ ತಿಳಿದಿಲ್ಲವಾದರೂ, ಮುಂದಿನ ವಾರ ಪ್ರಾರಂಭವಾಗುವ ಐಪಿಎಲ್‌ನ ಆರಂಭಿಕ ಹಂತಗಳಿಗೆ ಅವರು ಲಭ್ಯವಿಲ್ಲದಿರಬಹುದು ಎಂದು ಹೇಳಲಾಗುತ್ತಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News