IPL 2023: ಗಂಭೀರ ಗಾಯದ ಹಿನ್ನೆಲೆ: ಚೆನ್ನೈ ತಂಡದಿಂದ ಸಂಪೂರ್ಣವಾಗಿ ಹೊರಗುಳಿದ ಈ ಆಟಗಾರ

IPL 2023 Chennai Super Kings: ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಈ ಬಗ್ಗೆ ಮಾತನಾಡಿದ್ದು, “ವೇಗದ ಬೌಲರ್ ಕೈಲ್ ಜಮ್ಮಿಸನ್ ಈ ವಾರ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಮಾರು ನಾಲ್ಕು ತಿಂಗಳ ಕಾಲ ಮೈದಾನದಿಂದ ದೂರವಿರುತ್ತಾರೆ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Feb 20, 2023, 07:25 PM IST
    • ಚೆನ್ನೈ ಸೂಪರ್ ಕಿಂಗ್ಸ್‌ನ ದೊಡ್ಡ ಮ್ಯಾಚ್ ವಿನ್ನರ್ ಆಟಗಾರ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ.
    • ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಋತುವಿನಲ್ಲಿ ಜೆಮಿಸನ್ ಆಡಲು ಸಾಧ್ಯವಾಗುವುದಿಲ್ಲ
    • ಸ್ಟ್ರೆಸ್ ಫ್ಯ್ರಾಕ್ಚರ್ ಕಾರಣದಿಂದ ಕೈಲ್ ಜಮ್ಮಿಸನ್ ಅವರು ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ
IPL 2023: ಗಂಭೀರ ಗಾಯದ ಹಿನ್ನೆಲೆ: ಚೆನ್ನೈ ತಂಡದಿಂದ ಸಂಪೂರ್ಣವಾಗಿ ಹೊರಗುಳಿದ ಈ ಆಟಗಾರ title=
kyle jammison

IPL 2023 Chennai Super Kings: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಹಿನ್ನಡೆ ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ದೊಡ್ಡ ಮ್ಯಾಚ್ ವಿನ್ನರ್ ಆಟಗಾರ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ಈ ಆಟಗಾರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಬಹುಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.

ಇದನ್ನೂ ಓದಿ: IND vs AUS: ಜಡೇಜಾ ಅಲ್ಲ, ಈ ಆಟಗಾರ ನಿಜವಾದ 'ಮ್ಯಾನ್ ಆಫ್ ದಿ ಮ್ಯಾಚ್'.!

ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಈ ಬಗ್ಗೆ ಮಾತನಾಡಿದ್ದು, “ವೇಗದ ಬೌಲರ್ ಕೈಲ್ ಜಮ್ಮಿಸನ್ ಈ ವಾರ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಮಾರು ನಾಲ್ಕು ತಿಂಗಳ ಕಾಲ ಮೈದಾನದಿಂದ ದೂರವಿರುತ್ತಾರೆ” ಎಂದು ಹೇಳಿದ್ದಾರೆ.

ಮಾರ್ಚ್ 31 ರಿಂದ ಮೇ 28 ರವರೆಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಋತುವಿನಲ್ಲಿ ಜೆಮಿಸನ್ ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.

ಸ್ಟ್ರೆಸ್ ಫ್ಯ್ರಾಕ್ಚರ್ ಕಾರಣದಿಂದ ಕೈಲ್ ಜಮ್ಮಿಸನ್ ಅವರು ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಕಳೆದ ಜೂನ್‌ನಲ್ಲಿ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ಸಂದರ್ಭದಲ್ಲಿ ಆದ ಗಾಯವಾಗಿದೆ. ಹ್ಯಾಮಿಲ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯೂಜಿಲೆಂಡ್ 11 ರ ಅಭ್ಯಾಸ ಪಂದ್ಯದಲ್ಲಿ ಹೋಮ್ ಸರ್ಕ್ಯೂಟ್‌ನಲ್ಲಿ ಆಡಲು ಹಿಂತಿರುಗಿದ ಕಿವೀ ವೇಗಿ ಪುನರಾಗಮನದ ಹಾದಿಯಲ್ಲಿದ್ದರು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸ್ವದೇಶಿ ಸರಣಿಗಾಗಿ ನ್ಯೂಜಿಲೆಂಡ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಆದರೆ, ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದಲೂ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: KL Rahul : ರಾಹುಲ್ ಉಪನಾಯಕತ್ವ ಕಿತ್ತುಕೊಂಡ ಬಿಸಿಸಿಐ, ಈ ಸ್ಥಾನಕ್ಕೆ 3 ಆಟಗಾರರು ಸ್ಪರ್ಧಿಗಳು

ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್, 'ಕೈಲ್ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ವಾರದ ಕೊನೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಕೈಲ್‌ ಗೆ ಇದು ಸವಾಲಿನ ಮತ್ತು ಕಷ್ಟಕರ ಸಮಯವಾಗಿದೆ. ನಮಗೆ ದೊಡ್ಡ ಹೊಡೆತ. ಅವರು ಅದ್ಭುತ ಬೌಲರ್ ಆಗಿದ್ದಾರೆ. ಹೆನ್ರಿ ಮತ್ತು ಜೇಮ್ಸನ್ ಕೂಡ ಇರಲಿಲ್ಲ. ಈ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಭಾರೀ ಸೋಲನ್ನು ಅನುಭವಿಸಿತು. ಹೆನ್ರಿ, ತನ್ನ ಎರಡನೇ ಮಗುವಿನ ಜನನದ ಕಾರಣ ಬೇ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್ ಅನ್ನು ಮಿಸ್ ಮಾಡಿಕೊಂಡರು. ಇಲ್ಲಿನ ಬೇಸಿನ್ ರಿಸರ್ವ್ ನಲ್ಲಿ ಫೆ.24ರಂದು ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News