ಮುಂಬೈ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 59ನೇ ಪಂದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ರಾತ್ರಿ 7.30ಕ್ಕೆ ನಡೆಯಲಿರುವ ಈ ಪಂದ್ಯವು ಮುಂಬೈಗೆ ಪ್ರತಿಷ್ಠೆಯಾಗಿದ್ದರೆ, ಚೆನ್ನೈಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಆಡಿರುವ 11 ಪಂದ್ಯಗಳಲ್ಲಿ 9 ಸೋಲು ಕಂಡಿರುವ ಮುಂಬೈ ಈಗಾಗಲೇ ಪ್ರಸಕ್ತ ಟೂರ್ನಿಯಿಂದ ಹೊರಬಿದ್ದಿದೆ. ಕೇವಲ 4 ಅಂಕಗಳನ್ನು ಕಲೆಹಾಕಿರುವ ರೋಹಿತ್ ಶರ್ಮಾ ಪಡೆ ಕಳಪೆ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ವೈಫಲ್ಯ ಅನುಭವಿಸುವ ಮೂಲಕ ಹೀನಾಯ ಸೋಲುಗಳನ್ನು ಕಾಣುವ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ಪಾಕ್ ಆಟಗಾರನಿಗೆ IPL ಆಹ್ವಾನ ನೀಡಿದ್ರಂತೆ KKR ಮಾಲೀಕ ಶಾರುಖ್!
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈಗೆ ಇದು ಅನೌಪಚಾರಿಕ ಪಂದ್ಯವಾಗಿದೆ. ಆದರೆ ಚೆನ್ನೈಗೆ ಇನ್ನೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ರವೀಂದ್ರ ಜಡೇಜಾ ಮರಳಿ ನಾಯಕತ್ವವನ್ನು ಎಂ.ಎಸ್.ಧೋನಿಗೆ ವಹಿಸಿರುವುದು ಚೆನ್ನೈ ತಂಡಕ್ಕೆ ಆನೆಬಲ ಬಂದಂತಾಗಿದೆ. ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಚೆನ್ನೈ 8 ಅಂಕಗಳನ್ನು ಕೆಲೆಹಾಕುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಬಾಕಿ ಇರುವ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ + ರನ್ ರೇಟ್ ಹೊಂದಿರುವ ಚೆನ್ನೈಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಲಭಿಸಲಿದೆ. ಆದರೆ ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿರುವ ತಂಡಗಳ ಸೋಲು-ಗೆಲುವಿನ ಮೇಲೆ ಚೆನ್ನೈ ತಂಡದ ಭವಿಷ್ಯ ನಿರ್ಧಾರವಾಗಲಿದೆ.
Champion's Yellove for the LLORD, through the years! 💛
WIshing you a super birthday, Polly! See you tonight! #CSKvMI #WhistlePodu #Yellove 🦁💛 pic.twitter.com/i6uXPymy3f
— Chennai Super Kings (@ChennaiIPL) May 12, 2022
ಉಭಯ ತಂಡಗಳು ಪ್ರಸಕ್ತ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಹಿಂದೆಬಿದ್ದಿವೆ. ಸದ್ಯ ಚೇತರಿಕೆ ಹಾದಿಯಲ್ಲಿರುವ ಚೆನ್ನೈ ಗೆಲುವಿನ ಲಯಕ್ಕೆ ಮರಳಿದ್ದು, ಮುಂದಿನ 3 ಪಂದ್ಯಗಳ ಫಲಿತಾಂಶ ಏನಾಗಲಿದೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಚೆನ್ನೈ ಉಳಿರುವ ಪಂದ್ಯಗಳಲ್ಲಿ ಭಾರೀ ರನ್ ಅಂತರದಲ್ಲಿ ಗೆಲುವು ದಾಖಲಿಸಿ ಕಮಾಲ್ ಮಾಡಬೇಕಿದೆ. ಬಾಕಿ ಉಳಿದಿರುವ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಲ್ಪಸ್ವಲ್ಪ ಮರ್ಯಾದೆ ಉಳಿಸಿಕೊಳ್ಳಲು ಮುಂಬೈ ಸರ್ಕಸ್ ಮಾಡಬೇಕಿದೆ.
ಇದನ್ನೂ ಓದಿ: IPL ಇತಿಹಾಸದಲ್ಲಿ 150 ವಿಕೆಟ್ ಪಡೆದ ದಾಖಲೆ ವೀರ ಅಶ್ವಿನ್
ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:
ಚೆನ್ನೈ ಸೂಪರ್ ಕಿಂಗ್ಸ್: ಎಂ.ಎಸ್.ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಮಿಚೆಲ್ ಸ್ಯಾಂಟ್ನರ್, ತುಷಾರ್ ದೇಶ್‌ಪಾಂಡೆ, ಡ್ವೈನ್ ಪ್ರಿಟೋರಿಯಸ್, ಕ್ರಿಸ್ ಜೋರ್ಡಾನ್, ಹರಿ ನಿಶಾಂತ್, ಎನ್.ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಕೆ.ಎಂ.ಆಸಿಫ್, ರಾಜವರ್ಧನ್ ಹಂಗರ್ಗೇಕರ್, ಮತೀಶ ಪತಿರಾನ, ಭಗತ್ ವರ್ಮಾ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಮಣದೀಪ್ ಸಿಂಗ್, ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಜಯದೇವ್ ಉನದ್ಕತ್, ಫ್ಯಾಬಿಯನ್ ಅಲೆನ್, ಬೆಸಿಲ್ ಥಂಪಿ, ಅನ್ಮೋಲ್ಪ್ರೀತ್ ಸಿಂಗ್, ಸಂಜಯ್ ಯಾದವ್, ಮಯಾಂಕ್ ಮಾರ್ಕಾಂಡೆ, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ರಾಹುಲ್ ಬುದ್ಧಿ, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.