/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 4ನೇ ಪಂದ್ಯದಲ್ಲಿ ಇಂದು ಹೊಸ ತಂಡಗಳು(GT vs LSG) ಮುಖಾಮುಖಿಯಾಗಲಿವೆ. ಹಾರ್ದಿಕ್ ಪಾಂಡ್ಯ(Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್‍ನ ಚೊಚ್ಚಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಉಭಯ ತಂಡಗಳಿಗೂ ಐಪಿಎಲ್​ ಟೂರ್ನಿ(Indian Premier League 2022)ಯಲ್ಲಿ ಇತಿಹಾಸವೇ ಇಲ್ಲದ ಕಾರಣ ದಾಖಲೆಗಳ ವಿಷಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಎರಡೂ ತಂಡಗಳು ಮೊದಲ ಪಂದ್ಯದ ಗೆಲುವಿನ ಸಿಹಿ ಅನುಭವಿಸಲು ಹಾತೊರೆಯುತ್ತಿವೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಆಧಾರಸ್ತಂಭವಾಗಿದ್ದ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡ(Gujarat Titans)ದ ನಾಯಕತ್ವ ವಹಿಸಿಕೊಂಡಿದ್ದಾರೆ. ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆ.ಎಲ್.ರಾಹುಲ್ ಲಕ್ನೋ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: CSK vs KKR: ಐಪಿಎಲ್ 2022ರ ಮೊದಲ ಬಾಲೇ ನೋ ಬಾಲ್!

ಲಕ್ನೋ(Lucknow Super Giants) ಮತ್ತು ಗುಜರಾತ್ ಹೊಸ ತಂಡಗಳಾಗಿ ಕಣಕ್ಕಿಳಿಯುತ್ತಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಹುರುಪು ಮೂಡಿಸಿದೆ. ಎರಡೂ ತಂಡಗಳಲ್ಲಿ ಯುವ ಆಟಗಾರರೇ ತುಂಬಿಕೊಂಡಿದ್ದು, ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಉಭಯ ತಂಡಗಳ ಬೌಲಿಂಗ್ ಹಾಗೂ ಬ್ಯಾಟಿಂಗ್ ಹೇಗಿರಲಿದೆ..? ಯಾವ್ಯಾವ ಆಟಗಾರರು ಮಿಂಚು ಹರಿಸಲಿದ್ದಾರೆ..? ಹೊಸ ತಂಡಗಳ ನಾಯಕರಾಗಿ ಹಾರ್ದಿಕ್ ಮತ್ತು ರಾಹುಲ್(KL Rahul) ಹೇಗೆ ತಂಡಗಳನ್ನು ಮುನ್ನಡೆಸಲಿದ್ದಾರೆಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಚುಟುಕು ಕ್ರಿಕೆಟ್ ಕದನದಲ್ಲಿ ಯಾರಿಗೆ ಚೊಚ್ಚಲ ಗೆಲುವಿನ ಸಿಹಿ ದೊರಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್, ಸಾಯಿ ಕಿಶೋರ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್, ವರುಣ್ ಯಾಂಗ್ವಾನ್, ವಿಜಯ್ ಶಂಕರ್, ಗುರುಕೀರತ್ ಸಿಂಗ್ ಮನ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ಸಾಯಿ ಸುದರ್ಶನ್, ಯಶ್ ದಯಾಲ್, ನೂರ್ ಅಹ್ಮದ್

ಲಕ್ನೋ ಸೂಪರ್ ಜೈಂಟ್ಸ್: ಕೆ.ಎಲ್.ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ದೀಪಕ್ ಹೂಡಾ, ಕೆ.ಪಾಂಡ್ಯ, ಅಂಕಿತ್ ರಾಜ್‌ಪೂತ್, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಅವೇಶ್ ಖಾನ್, ಶಹಬಾಜ್ ನದೀಮ್, ಎವಿನ್ ಲೂಯಿಸ್, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್

ಇದನ್ನೂ ಓದಿ: Mayanti Langer : ಐಪಿಎಲ್ ನಿರೂಪಣೆಗೆ ಮರಳಿದ ಮಯಾಂತಿ ಲ್ಯಾಂಗರ್‌!

ಐಪಿಎಲ್‌ ಪಂದ್ಯ: 04

ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್

ದಿನಾಂಕ: ಮಾರ್ಚ್ 28, ಸೋಮವಾರ

ಸ್ಥಳ: ಮುಂಬೈನ ವಾಂಖೆಡೆ ಕ್ರೀಡಾಂಗಣ

ಸಮಯ: ಸಂಜೆ 7.30ಕ್ಕೆ

=====================================================================================

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
IPL 2022, GT vs LSG: 4th Match Prediction, Who will win Todays Match?
News Source: 
Home Title: 

IPL 2022, GT vs LSG: ಹೊಸ ತಂಡಗಳ ಕದನದಲ್ಲಿ ಚೊಚ್ಚಲ ಗೆಲುವು ಯಾರಿಗೆ..?

IPL 2022, GT vs LSG: ಹೊಸ ತಂಡಗಳ ಕದನದಲ್ಲಿ ಚೊಚ್ಚಲ ಗೆಲುವು ಯಾರಿಗೆ..?
Caption: 
ಇಂದು ಹೊಸ ತಂಡಗಳ ಮುಖಾಮುಖಿ
Yes
Is Blog?: 
No
Tags: 
Facebook Instant Article: 
Yes
Highlights: 

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 4ನೇ ಪಂದ್ಯದಲ್ಲಿ ಇಂದು ಹೊಸ ತಂಡಗಳ ಮುಖಾಮುಖಿ

ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ ಸೆಣಸಾಟದಲ್ಲಿ ಚೊಚ್ಚಲ ಗೆಲುವು ಯಾರಿಗೆ?

ಉಭಯ ತಂಡಗಳಲ್ಲಿ ಯುವ ಆಟಗಾರರು ತುಂಬಿಕೊಂಡಿದ್ದು, ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ

Mobile Title: 
IPL 2022, GT vs LSG: ಹೊಸ ತಂಡಗಳ ಕದನದಲ್ಲಿ ಚೊಚ್ಚಲ ಗೆಲುವು ಯಾರಿಗೆ..?
Puttaraj K Alur
Publish Later: 
No
Publish At: 
Monday, March 28, 2022 - 15:26
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No