ಚೆನ್ನೈ: ಐಪಿಎಲ್ 2021ರ ಉತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಈ ಋತುವಿನ ಮೊದಲ ಪಂದ್ಯ ಏಪ್ರಿಲ್ 9 ರಿಂದ ಪ್ರಾರಂಭವಾಗಲಿದೆ, ಆದರೆ ಅದಕ್ಕೂ ಮೊದಲು ವಿಶ್ವದ ಶ್ರೀಮಂತ ಟಿ 20 ಕ್ರಿಕೆಟ್ ಲೀಗ್ ಮೇಲೆ ಕರೋನಾ ಕಾರ್ಮೋಡ ಕವಿದಿದೆ. ಆರಂಭದಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಆಟಗಾರ ದೇವದುತ್ ಪಡಿಕ್ಕಲ್ (Devdutt Padikkal) ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿತ್ತು. ಆದರೆ ಈಗ ಈ ತಂಡದ ಸ್ಟಾರ್ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ (Daniel Sams) ಅವರಿಗೂ ಕೂಡ ಕರೋನಾ ದೃಢಪಟ್ಟಿದ್ದು ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಆರ್‌ಸಿಬಿಗೆ ದೊಡ್ಡ ಆಘಾತ:
ಹೌದು, ತಂಡದ ಸ್ಟಾರ್ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೂ ಕೂಡ ಕರೋನಾ ದೃಢಪಟ್ಟಿರುವುದು ಏಪ್ರಿಲ್ 9 ರಂದು ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಕ್ಕೆ ದೊಡ್ಡ ಆಘಾತವಾಗಿದೆ.
IPL 2021: RCB's Daniel Sams tests positive for COVID-19
Read @ANI Story | https://t.co/xBrrdF1zDl pic.twitter.com/KqX3INd9sJ
— ANI Digital (@ani_digital) April 7, 2021
ಇದನ್ನೂ ಓದಿ- IPL 2021: ಮತ್ತೆ ತಮ್ಮ ಹಳೆಯ ಶೈಲಿಯಲ್ಲಿ ಮರಳಿದ ಮಹೇಂದ್ರ ಸಿಂಗ್ ಧೋನಿ, ವಿಡಿಯೋ ವೈರಲ್
ಡೇನಿಯಲ್ ಸೈಮ್ಸ್ ಏಪ್ರಿಲ್ 3 ರಂದು ಭಾರತಕ್ಕೆ ಆಗಮಿಸಿದರು:
'ಈ 28 ವರ್ಷದ ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ (Daniel Sams) ಏಪ್ರಿಲ್ 3 ರಂದು ಭಾರತಕ್ಕೆ ಬಂದರು ಮತ್ತು ಆ ಸಮಯದಲ್ಲಿ ಕೋವಿಡ್ -19 ಟೆಸ್ಟ್ ಮಾಡಿಸಲಾಗಿತ್ತು. ಆಗ ಅವರ ವರದಿ ನಕಾರಾತ್ಮಕವಾಗಿತ್ತು. ಆದರೆ ಏಪ್ರಿಲ್ 7 ರಂದು ಡೇನಿಯಲ್ ಸೈಮ್ಸ್ ಅವರ ಎರಡನೇ ಪರೀಕ್ಷೆಯ ವರದಿ ಸಕಾರಾತ್ಮಕವಾಗಿದೆ. ಅದಾಗ್ಯೂ ಈಗಲೂ ಸೈಮ್ಸ್ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಸದ್ಯ ಅವರು ಕ್ವಾರಂಟೈನ್ ನಲ್ಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಳಿಕೆ ನೀಡಿದೆ.
ಇದನ್ನೂ ಓದಿ- ಏಕದಿನ ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ತಂಡವು ಬಿಸಿಸಿಐ ನಿಯಮಗಳನ್ನು ಅನುಸರಿಸಲಾಗುತ್ತಿದ್ದು ಆರ್‌ಸಿಬಿಯ ವೈದ್ಯಕೀಯ ತಂಡವು ಡೇನಿಯಲ್ ಸ್ಯಾಮ್ಸ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಮತ್ತು ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.