IPL 2021 RCB vs DC: AB De Villiers ಬಿರುಗಾಳಿಯ ಇನ್ನಿಂಗ್ಸ್‌ಗೆ ಫಿದಾ ಆದ ಡೇವಿಡ್ ವಾರ್ನರ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ

ಐಪಿಎಲ್ 2021 ಆರ್‌ಸಿಬಿ ವರ್ಸಸ್ ಡಿಸಿ : ಡೇವಿಡ್ ವಾರ್ನರ್ ನಂತರ, ಎಬಿ ಡಿವಿಲಿಯರ್ಸ್ ಐಪಿಎಲ್ ಪಂದ್ಯಾವಳಿಯಲ್ಲಿ 5000 ಸಾವಿರ ರನ್ಗಳನ್ನು ಪೂರೈಸಿದ ಎರಡನೇ ಭಾರತೀಯೇತರ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Written by - Yashaswini V | Last Updated : Apr 28, 2021, 07:40 AM IST
  • ಎಬಿ ಡಿವಿಲಿಯರ್ಸ್ ಅವರ ಅದ್ಭುತ ಇನ್ನಿಂಗ್ಸ್
  • 42 ಎಸೆತಗಳಲ್ಲಿ ಅಜೇಯ 75 ರನ್
  • ಎಬಿಡಿಯನ್ನು ಹೊಗಳಿದ ವಾರ್ನರ್
IPL 2021 RCB vs DC: AB De Villiers ಬಿರುಗಾಳಿಯ ಇನ್ನಿಂಗ್ಸ್‌ಗೆ ಫಿದಾ ಆದ ಡೇವಿಡ್ ವಾರ್ನರ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ title=
Image courtesy: BCCI/IPL

ನವದೆಹಲಿ: ಮಂಗಳವಾರ ಆರ್‌ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ (RCB vs DC) ನಡುವಿನ ಐಪಿಎಲ್ 2021 (IPL 2021)ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (AB De Villiers) ಬಿರುಗಾಳಿಯಂತೆ ಕಾಣಿಸಿಕೊಂಡಿದ್ದಾರೆ. 'ಮಿಸ್ಟರ್ 360 ಡಿಗ್ರಿ' ಎಂದು ಜನಪ್ರಿಯವಾಗಿರುವ ಕ್ರಿಕೆಟಿಗ ದೆಹಲಿ ಬೌಲರ್‌ಗಳ ವಿರುದ್ಧ ಬಿರುಗಾಳಿಯ ಇನ್ನಿಂಗ್ಸ್‌ ಆಡಿದರು. 

ಡೆವಿಲರ್ಸ್ ನೀಡಿದ ಗ್ರೇಟ್ ಇನ್ನಿಂಗ್ಸ್ :
ಆರ್‌ಸಿಬಿಯ 3 ವಿಕೆಟ್‌ಗಳು 60 ರನ್‌ಗಳಿಗೆ ಕುಸಿದಾಗ, ಎಬಿ ಡಿವಿಲಿಯರ್ಸ್ (AB De Villiers) 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಅವರು ತಮ್ಮ ತಂಡದ ಇನ್ನಿಂಗ್ಸ್ ಅನ್ನು ನಿಭಾಯಿಸಿದರು ಮತ್ತು 42 ಎಸೆತಗಳಲ್ಲಿ ರೋಚಕ 75 ರನ್ ಗಳಿಸಿದರು. ಈ ಸಮಯದಲ್ಲಿ ಅವರು 3 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಹೊಡೆದರು. ಇದರಿಂದಾಗಿ ಬೆಂಗಳೂರು ದೆಹಲಿ ಕ್ಯಾಪಿಟಲ್ಸ್ ಗೆ 172 ರನ್ ಗಳಿಸುವ ಗುರಿಯನ್ನು ನೀಡಿತು.

ಇದನ್ನೂ ಓದಿ - Delhi vs Bangalore: RCB ಗೆ ಒಂದು ರನ್ ಗಳ ರೋಚಕ ಗೆಲುವು

ಈ ಅದ್ಭುತ ಇನ್ನಿಂಗ್ಸ್ ಸಮಯದಲ್ಲಿ ಎಬಿ ಡಿವಿಲಿಯರ್ಸ್ ಐಪಿಎಲ್ (IPL) ವೃತ್ತಿಜೀವನದಲ್ಲಿ 5000 ರನ್ಗಳನ್ನು ಪೂರೈಸಿದರು, ಅವರು 161 ಇನ್ನಿಂಗ್ಸ್ಗಳಲ್ಲಿ ಈ ಸ್ಥಾನವನ್ನು ಸಾಧಿಸಿದ್ದಾರೆ. ಡೇವಿಡ್ ವಾರ್ನರ್ ನಂತರ, ಡಿವಿಲಿಯರ್ಸ್ ಐಪಿಎಲ್ನಲ್ಲಿ ಈ ಸಂಖ್ಯೆಯನ್ನು ಮುಟ್ಟಿದ ಎರಡನೇ ಭಾರತೀಯೇತರ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಇದನ್ನೂ ಓದಿ- IPL 2021: ಟಿ 20 ಯಲ್ಲಿ ಮುಜುಗರದ ದಾಖಲೆ ನಿರ್ಮಿಸಿದ Chris Gayle

ಡಿವಿಲಿಯರ್ಸ್ ಬಗ್ಗೆ ಡೇವಿಡ್ ವಾರ್ನರ್ ಟ್ವೀಟ್ :
ಎಬಿ ಡಿವಿಲಿಯರ್ಸ್ ಅವರ ಈ ಅದ್ಭುತ ಇನ್ನಿಂಗ್ಸ್ ಕಂಡು ಫಿದಾ ಆದ ಡೇವಿಡ್ ವಾರ್ನರ್ 'ಎಬಿ ಡಿವಿಲಿಯರ್ಸ್, ನನ್ನ ಐಡಲ್' ಎಂದು  ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News