ನವದೆಹಲಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2021) 33ನೇ ಪಂದ್ಯದಲ್ಲಿ ಇಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಿಷಭ್ ಪಂತ್(Rishabh Pant) ನೇತೃತ್ವದ ಪಡೆಗೆ ಕೊನೆಯ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ಸವಾಲು ಒಡ್ಡಲಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಲಿಷ್ಠವಾಗಿರವು ದೆಹಲಿ(Delhi Capitals) ತಂಡ ಈಗಗಾಲೇ ಮೊದಲ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಬಲಿಷ್ಠ ತಂಡಗಳಿಗೆ ಮಣ್ಣುಮುಕ್ಕಿಸಿರುವ ರಿಷಭ್ ಪಂತ್ ಪಡೆ ಹೈದರಾಬಾದ್ ವಿರುದ್ಧ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಹಂತದಲ್ಲಿ ತಾನಾಡಿದ 8 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ದೆಹಲಿ ಕೇವಲ 2 ಪಂದ್ಯಗಳಲ್ಲಿ ಸೋಲು ಕಂಡಿದೆ.
ಇದನ್ನೂ ಓದಿ: IPL 2021: ಕನ್ನಡಿಗ ಕೆ.ಎಲ್.ರಾಹುಲ್ ಗೆ ಅದೃಷ್ಟ ಕೈಕೊಟ್ಟಾಗ..!
The last time @SunRisers faced #DelhiCapitals in the #VIVOIPL, Kane Williamson scored an unbeaten 6⃣6⃣. 👍 👍
As we get ready for tonight's #DCvSRH clash, let's relive that fine knock from Williamson 🎥 👇
— IndianPremierLeague (@IPL) September 22, 2021
12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ದೆಹಲಿ ಈಗಾಗಲೇ ಬಹುತೇಕ ಪ್ಲೇ ಆಫ್ ಹಂತಕ್ಕೆ ತಲುಪಿದೆ. ಉತ್ತಮ ಯುವಪಡೆಯನ್ನು ಹೊಂದಿರುವ ದೆಹಲಿ ಗೆಲ್ಲುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಆದರೆ ಹೈದರಾಬಾದ್(Sunrisers Hyderbad) ಯಾವ ರೀತಿ ರಿಷಭ್ ಪಂತ್ ಪಡೆಗೆ ಸವಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಕೇನ್ ವಿಲಿಯಮ್ಸನ್(Kane Williamson) ಪಡೆ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಮೊದಲ ಹಂತದಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಹೈದರಾಬಾದ್ ತಂಡ ಐಪಿಎಲ್ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ತಾನಾಡಿರುವ 7 ಪಂದ್ಯದಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಹೈದರಾಬಾದ್ ಗೆಲುವು ಸಾಧಿಸಿದ್ದು, 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಕೇವಲ 2 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ವಿಲಿಯಮ್ಸನ್ ಪಡೆ ಬಾಕಿ ಉಳಿದಿರುವ 7 ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ. ಉಭಯ ತಂಡಗಳ ನಡುವೆ ಗೆಲುವಿಗಾಗಿ ನಡೆಯಲಿರುವ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ICC World Cup ಆಟವಾಡಬೇಕಿರುವ ಈ ದೇಶದಲ್ಲಿ IPL ವೀಕ್ಷಣೆಯ ಮೇಲೆ ಬ್ಯಾನ್, ಕಾರಣ ಬೆಚ್ಚಿಬೀಳಿಸುವಂತಿದೆ
ಎರಡೂ ತಂಡಗಳ ಸ್ಕ್ವಾಡ್ ಹೀಗಿದೆ ನೋಡಿ...
ದೆಹಲಿ ಕ್ಯಾಪಿಟಲ್ಸ್: ಶ್ರೇಯಸ್ ಅಯ್ಯರ್, ಅಮಿತ್ ಮಿಶ್ರಾ, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಅಜಿಂಕ್ಯ ರಹಾನೆ, ಅವೇಶ್ ಖಾನ್, ಸ್ಯಾಮ್ ಬಿಲ್ಲಿಂಗ್ಸ್, ಆರ್.ಅಶ್ವಿನ್, ಪೃಥ್ವಿ ಶಾ, ಇಶಾಂತ್ ಶರ್ಮಾ, ವಿಷ್ಣು ವಿನೋದ್, ಮಾರ್ಕಸ್ ಸ್ಟೋಯಿನಿಸ್, ಶಿಖರ್ ಧವನ್, ಕಗಿಸೊ ರಬಾಡಾ, ಲಲಿತ್ ಯಾದವ್, ಶಿಮ್ರಾನ್ ಹೆಟ್ಮೀರ್, ಪ್ರವಿನ್ ದುಬೆ, ರಿಪಾಲ್ ಪಟೇಲ್, ಸ್ಟೀವ್ ಸ್ಮಿತ್, ಅನ್ರಿಚ್ ನಾರ್ಟ್ಜೆ, ಟಾಮ್ ಕುರ್ರಾನ್, ಉಮೇಶ್ ಯಾದವ್, ಬೆನ್ ದ್ವಾರಶೂಯಿಸ್, ಲುಕ್ಮಾನ್ ಮೆರಿವಾಲಾ, ಕುಲ್ವಂತ್ ಖೆಜ್ರೋಲಿಯಾ.
ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಕೇನ್ ವಿಲಿಯಮ್ಸನ್ (ನಾಯಕ), ರಶೀದ್ ಖಾನ್, ಶ್ರೀವತ್ ಗೋಸ್ವಾಮಿ, ಅಭಿಷೇಕ್ ಶರ್ಮಾ, ಮನೀಶ್ ಪಾಂಡೆ, ಸಂದೀಪ್ ಶರ್ಮಾ, ವಿಜಯ್ ಶಂಕರ್, ವಿರಾಟ್ ಸಿಂಗ್, ಟಿ.ನಟರಾಜನ್, ಮಿಚೆಲ್ ಮಾರ್ಷ್, ಪ್ರಿಯಂ ಗರ್ಗ್, ಬೆಸಿಲ್ ತಂಪಿ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಶಹಬಾಜ್ ನದೀಮ್, ಶೆರ್ಫೇನ್ ರುದರ್‌ಫೋರ್ಡ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹಮದ್, ಮುಜೀಬ್ ಝದ್ರನ್, ಜೆ.ಸುಚಿತ್.
ಐಪಿಎಲ್ ಪಂದ್ಯ: 32
ದೆಹಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್
ದಿನಾಂಕ: ಸೆಪ್ಟೆಂಬರ್ 22, ಬುಧವಾರ
ಸ್ಥಳ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಸಮಯ: ಸಂಜೆ 7.30
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.