ನವದೆಹಲಿ: ಅಬುದಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಐಪಿಎಲ್ ನ 53 ನೇ ಪಂದ್ಯದಲ್ಲಿ ಚೆನ್ನೈ ತಂಡವು ಪಂಜಾಬ್ ವಿರುದ್ಧ 9 ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿದ ಚೆನ್ನೈ ತಂಡವು ಪಂಜಾಬ್ ತಂಡವನ್ನು 20 ಓವರ್ ಗಳಲ್ಲಿ 6 ವಿಕೆಟ್ 153 ರನ್ ಗಳಿಗೆ ಕಟ್ಟಿ ಹಾಕಿತು. ಪಂಜಾಬ್ ತಂಡದ ಪರವಾಗಿ ದೀಪಕ್ ಹೂಡಾ 62 ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ ಅಂತಹ ವೇಗದ ಆಟವಾಡಲಿಲ್ಲ. ಕಳೆದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಗೇಲ್ ಕೂಡ ಇಂದು ವಿಫಲರಾದರು.
ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುತ್ತಾರೆಯೇ? ಇಲ್ಲಿದೆ ಉತ್ತರ..!
#DefinitelyNot the end we were hoping for...#SaddaPunjab #IPL2020 #KXIP #CSKvKXIP pic.twitter.com/tQ7vSH1AsS
— Kings XI Punjab (@lionsdenkxip) November 1, 2020
154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಕೇವಲ ಒಂದು ವಿಕೆಟ್ ನಷ್ಟಕ್ಕೆ 18.5 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು. ಚೆನ್ನೈ ತಂಡದ ಪರವಾಗಿ ಋತುರಾಜ್ ಗಾಯಕ್ವಾಡ್ 62 (ಅಜೇಯ) ದುಪ್ಲೆಸಿ 48 ಹಾಗೂ ಅಂಬಟಿ ರಾಯಡು 30 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಈ ಪಂದ್ಯದಲ್ಲಿ ಪಂಜಾಬ್ ತಂಡವು ಸೋಲುವುದರ ಮೂಲಕ ಐಪಿಎಲ್ ಪ್ಲೇ ಆಫ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.