IND vs WI: ಇಂದು ವಿಂಡೀಸ್‌ಗೆ ಭಾರತ ಸವಾಲು: ಈ ಆಟಗಾರನ ದಾಳಿಗೆ ತತ್ತರಿಸಲಿದೆ ಕೆರಿಬಿಯನ್‌ ಪಡೆ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ಗೆ ಮಾರಕ ಆಟಗಾರನಾಗಿ ಎಂಟ್ರಿ ಕೊಡಲಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬಹುದು.  ಇಶಾನ್ ಕಿಶನ್ ಪಂದ್ಯಗಳನ್ನು ಕ್ಷಣಾರ್ಧದಲ್ಲಿ ಗೆಲುವಿನ ಕಡೆಗೆ ತಿರುಗಿಸುವಂತಹ ನೈಪುಣ್ಯತೆ ಹೊಂದಿದ್ದಾರೆ. ಜೊತೆಗೆ ಇಶಾನ್ ಕಿಶನ್ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್‌ನ್ನೂ ಸಹ ಮಾಡುತ್ತಿದ್ದಾರೆ. 

Written by - Bhavishya Shetty | Last Updated : Jul 29, 2022, 10:13 AM IST
  • ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಆಟಗಾರರ ಬಲ
  • ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ಇಶಾನ್‌ ಕಿಶನ್‌
  • ಇಲ್ಲಿದೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ವೇಳಾಪಟ್ಟಿ
IND vs WI: ಇಂದು ವಿಂಡೀಸ್‌ಗೆ ಭಾರತ ಸವಾಲು: ಈ ಆಟಗಾರನ ದಾಳಿಗೆ ತತ್ತರಿಸಲಿದೆ ಕೆರಿಬಿಯನ್‌ ಪಡೆ! title=
India Vs West Indies

ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ರಾತ್ರಿ 8 ಗಂಟೆಯಿಂದ ನಡೆಯಲಿದೆ. ಈ ಟಿ 20 ಅಂತರಾಷ್ಟ್ರೀಯ ಸರಣಿಯ ಮೂಲಕ ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಮರಳಿದ್ದಾರೆ. ಇವರ ಈ ಮರಳುವಿಕೆ ಟೀಂ ಇಂಡಿಯಾಗೆ ಬಲವಾದರೆ, ವೆಸ್ಟ್ ಇಂಡೀಸ್‌ಗೆ ಭಯವನ್ನು ಸೃಷ್ಟಿಸಲಿದೆ. ರೋಹಿತ್ ಶರ್ಮಾ ಹೊರತಾಗಿ ಟೀಂ ಇಂಡಿಯಾದ ಕೆಲವು ಬ್ಯಾಟ್ಸ್‌ಮನ್‌ಗಳ ಅಬ್ಬರ ವಿಂಡೀಸ್‌ ತಂಡಕ್ಕೆ ಇನ್ನಷ್ಟು ಭಯವನ್ನುಂಟು ಮಾಡಲಿದೆ. 

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ಗೆ ಮಾರಕ ಆಟಗಾರನಾಗಿ ಎಂಟ್ರಿ ಕೊಡಲಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬಹುದು.  ಇಶಾನ್ ಕಿಶನ್ ಪಂದ್ಯಗಳನ್ನು ಕ್ಷಣಾರ್ಧದಲ್ಲಿ ಗೆಲುವಿನ ಕಡೆಗೆ ತಿರುಗಿಸುವಂತಹ ನೈಪುಣ್ಯತೆ ಹೊಂದಿದ್ದಾರೆ. ಜೊತೆಗೆ ಇಶಾನ್ ಕಿಶನ್ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್‌ನ್ನೂ ಸಹ ಮಾಡುತ್ತಿದ್ದಾರೆ. 

ಇದನ್ನೂ ಓದಿ: ತೆರಿಗೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ : ITRಸಂಬಂಧಿಸಿದಂತೆ ಬಿಗ್ ಅಪ್ಡೇಟ್

ಬಿರುಸಿನ ಬ್ಯಾಟಿಂಗ್: 
ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದು, ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಇಶಾನ್ ಕಿಶನ್ ಕ್ರೀಸ್‌ಗೆ ಬಂದ ತಕ್ಷಣ, ತಮ್ಮ ಬ್ಯಾಟ್‌ನಿಂದ ಬಾಲ್‌ಗಳನ್ನು ಎಸೆಯುವ ಮೂಲಕ ರನ್‌ ಮಳೆಗಳನ್ನು ಸುರಿಸುತ್ತಾರೆ. ಹೀಗಾಗಿ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಇಶಾನ್ ಕಿಶನ್ ಆಯ್ಕೆ ಬಹುತೇಕ ಖಚಿತ ಎಂದು ಪರಿಗಣಿಸಲಾಗಿದೆ. 

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ಹೀಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ವೇಳಾಪಟ್ಟಿ

ಜುಲೈ 29: ರಾತ್ರಿ 8 - 1ನೇ T20I (ಟ್ರಿನಿಡಾಡ್)

ಆಗಸ್ಟ್ 1: ರಾತ್ರಿ 8 ಗಂಟೆಗೆ - 2 ನೇ T20I (ಸೇಂಟ್ ಕೀಟ್ಸ್)

ಆಗಸ್ಟ್ 2: ರಾತ್ರಿ 8 ಗಂಟೆಗೆ - 3ನೇ T20I (ಸೇಂಟ್ ಕೀಟ್ಸ್)

ಆಗಸ್ಟ್ 6: ರಾತ್ರಿ 8 - 4 ನೇ T20I (ಫ್ಲೋರಿಡಾ)

ಆಗಸ್ಟ್ 7: ರಾತ್ರಿ 8 ಗಂಟೆಗೆ - ಐದನೇ ಟಿ20 ಪಂದ್ಯ (ಫ್ಲೋರಿಡಾ)

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ರೈಲ್ವೇ ಪ್ರಯಾಣ ಮಾಡುತ್ತೀರಾ? ಹಾಗಾದ್ರೆ ಇಲಾಖೆಯಿಂದ ನಿಮಗಿದೆ ಸಿಹಿಸುದ್ದಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News