Asian Games 2023: ಏಷ್ಯನ್ ಗೇಮ್ಸ್ ಫೈನಲ್ ತಲುಪಿದ ಭಾರತೀಯ ಕ್ರಿಕೆಟ್ ತಂಡ! ಚಿನ್ನಕ್ಕೆ ಒಂದೇ ಹೆಜ್ಜೆ ಬಾಕಿ…

Asian Games 2023, IND W vs BAN W: ಹ್ಯಾಂಗ್‌ ಝೌನಲ್ಲಿರುವ ಪಿಂಗ್‌ ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕಿ ನಿಗರ್ ಸುಲ್ತಾನಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

Written by - Bhavishya Shetty | Last Updated : Sep 24, 2023, 09:53 AM IST
    • ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್-2023ರ ಕ್ರಿಕೆಟ್ ಸೆಮಿಫೈನಲ್
    • ಬಾಂಗ್ಲಾದೇಶವನ್ನು 8 ವಿಕೆಟ್‌ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ
    • ಬಲಗೈ ಮಧ್ಯಮ ವೇಗಿ ಪೂಜಾ ವಸ್ತ್ರಾಕರ್ ಅದ್ಭುತ ಬೌಲಿಂಗ್
Asian Games 2023: ಏಷ್ಯನ್ ಗೇಮ್ಸ್ ಫೈನಲ್ ತಲುಪಿದ ಭಾರತೀಯ ಕ್ರಿಕೆಟ್ ತಂಡ! ಚಿನ್ನಕ್ಕೆ ಒಂದೇ ಹೆಜ್ಜೆ ಬಾಕಿ… title=
Asian Games 2023

Asian Games 2023, IND W vs BAN W: ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್-2023 ರ ಸೆಮಿಫೈನಲ್’ನಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು 8 ವಿಕೆಟ್‌ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಪದಕವನ್ನು ಖಚಿತಪಡಿಸಿಕೊಂಡಿದೆ.

ಇದನ್ನೂ ಓದಿ: ಮೊದಲ ಸ್ಪರ್ಧಿ ನಟನೂ ಅಲ್ಲ, ನಟಿಯೂ ಅಲ್ಲ! ಬಿಗ್ ಬಾಸ್ ಮನೆಗೆ ಆಟವಾಡಲು ಬರ್ತಿದೆ ಮುದ್ದು 'ಚಾರ್ಲಿ’

ಭಾರತಕ್ಕೆ ಮಹಾ ಗೆಲುವು:

ಹ್ಯಾಂಗ್‌ ಝೌನಲ್ಲಿರುವ ಪಿಂಗ್‌ ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕಿ ನಿಗರ್ ಸುಲ್ತಾನಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಬಾಂಗ್ಲಾದೇಶ ತಂಡ ಸಂಪೂರ್ಣ ವೈಫಲ್ಯ ಕಂಡು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ನಿಗರ್ ಸುಲ್ತಾನಾ (12)ಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಬಾಂಗ್ಲಾದೇಶ ತಂಡ 17.5 ಓವರ್‌’ಗಳಲ್ಲಿ 51 ರನ್‌’ಗಳಿಗೆ ಆಲೌಟ್ ಆಗಿದ್ದು, ಭಾರತ ತಂಡ 8.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಪೂಜಾ ಮಿಂಚಿಂಗ್… ಈಗ ಚಿನ್ನವೇ ಟಾರ್ಗೆಟ್!

ಬಲಗೈ ಮಧ್ಯಮ ವೇಗಿ ಪೂಜಾ ವಸ್ತ್ರಾಕರ್ ಅದ್ಭುತ ಬೌಲಿಂಗ್ ಮಾಡಿ 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ಟಿಟಾಸ್ ಸಾಧು, ಅಮನ್ಜೋತ್ ಕೌರ್, ರಾಜೇಶ್ವರಿ ಗಾಯಕ್ವಾಡ್ ಮತ್ತು ದೇವಿಕಾ ವೈದ್ಯ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು?

52 ರನ್‌;ಗಳ ಸಣ್ಣ ಗುರಿಯನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಕೇವಲ 7 ರನ್‌ ಗಳಿಸಿ, ಮಾರುಫಾ ಅಖ್ತರ್‌’ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ತಂಡವು 40 ರನ್ ಗಳಿಸುವಷ್ಟರಲ್ಲಿ ಶೆಫಾಲಿ ವರ್ಮಾ (17) ರೂಪದಲ್ಲಿ ಎರಡನೇ ವಿಕೆಟ್ ಪತನವಾಯಿತು. ಜೆಮಿಮಾ ರೋಡ್ರಿಗಸ್ 20 ರನ್ ಗಳಿಸಿ ಅಜೇಯರಾಗಿ ಮರಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News