ದಕ್ಷಿಣ ಆಫ್ರಿಕಾ ವಿರುದ್ದ 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭಾರಿ ಜಯ ! 1-1 ಅಂತರದಲ್ಲಿ ಸರಣಿ ಸಮ

INdvs SA test series equal :  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯ ಗಳ ಟೆಸ್ಟ್‌ ಸರನಿಯು ಇಂದು ಅಂತ್ಯಗೊಂಡಿದೆ.  ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಖಾ ತಂಡ ಜಯಗಳಿಸಿದರೆ ಭಾರತವು 2ನೇ ಟೆಸ್ಟ್‌ ಪಂದ್ಯದಲ್ಲಿ ಗದ್ದು ಸೇಡು ತೀರಿಸಿಕೊಂಡಿದೆ. ಈ ಮೂಲಕ ಟೆಸ್ಟ್‌ ಸರಣಿಯು ಸಮವಾಗಿದೆ. 

Written by - Zee Kannada News Desk | Last Updated : Jan 4, 2024, 06:43 PM IST
  • ದಕ್ಷಿಣ ಆಪ್ರಿಕಾ ವಿರುದ್ದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ದೊರೆತ ಜಯ
  • ಭಾರತವು 1-1 ಅಂತರದಿಂದ ಸರಣಿ ಸಮಗೊಳಿಸಿದೆ
  • ಮೊಹಮ್ಮದ್ ಸಿರಾಜ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು
ದಕ್ಷಿಣ ಆಫ್ರಿಕಾ ವಿರುದ್ದ 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭಾರಿ ಜಯ ! 1-1 ಅಂತರದಲ್ಲಿ ಸರಣಿ ಸಮ title=

IND vs SA test series : ದಕ್ಷಿಣ ಆಫ್ರಿಕಾ ವಿರುದ್ದ ಭಾರತವು ತನ್ನ 2ನೇ ಪಂದ್ಯಲ್ಲಿ ಸೇಡು ತೀರಿಸಿಕೊಂಡಿದೆ. ಭಾರತವು 2ನೇ ದಿನದ ಪಂದ್ಯದಲ್ಲೇ ಹರಣಗಳನ್ನು ಅವರ ತವರಿನಲ್ಲಿ 7 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯು 1-1 ಅಂತರಗಳಿಂದ ಸಮವಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತವು ಟಿ20 ಸರಣಿಯನ್ನು ಡ್ರಾ ಮಾಡಿಕೊಂಡಿತ್ತು, ಇನ್ನು ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದು, ಈಗ ಟೆಸ್ಟ್‌ ಸರಣಿಯನ್ನು ಕೂಡ ಡ್ರಾ ಮೂಲಕ ಅಂತ್ಯಗೊಳಿಸಿದೆ.

ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದದ್ಯದಲ್ಲಿ ದಕ್ಷಿಣ ಆಫ್ರಿಕಾವು ಬಲಿಷ್ಠ ತಂಡವಾದ ಭಾರತದ ವಿರುಧ್ದ ಭರ್ಜರಿ ಜಯಗಳಿಸಿತ್ತು. ಪಂದ್ಯ ಅಂತ್ಯಗೊಳ್ಳಲು ಎರಡು ದಿನ ಬಾಕಿ ಇರುವಾಗಲೆ ಹರಿಣಗಳು 32 ರನ್‌ಗಳಿಂದ ಜಯಗಳಿಸಿತ್ತು. ಅದಕ್ಕೆ ಭಾರತವು 2ನೇ ಟೆಸ್ಟ್‌ ಪಂದ್ಯದಲ್ಲಿ ತಿರುಗೇಟು ನೀಡಿದ್ದು, 2ನೇ ದಿನದ ಪಂದ್ಯದಲ್ಲೇ ಹರಣಿಗಳನ್ನು 7 ವಿಕೆಟ್‌ಗಳಿಂದ ಸೋಲಿಸಿ ಸೇಡು ತೀರಿಸಿಕೊಂಡ ಭಾರತವು ಸರಣಿ ಸಮ ಮಾಡಿಕೊಂಡಿದೆ. 

ಇದನ್ನು ಓದಿ-ಮೊದಲ ದಿನದ ಪಂದ್ಯದಲ್ಲಿ ಬರೊಬ್ಬರಿ 23 ವಿಕೆಟ್‌ಗಳ ಪತನ ! ಇತಿಹಾಸದಲ್ಲಿ 2ನೇ ಅತೀ ಹೆಚ್ಚು ವಿಕೆಟ್‌ ಉರುಳಿದ ದಾಖಲೆ ನಿರ್ಮಾಣ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ವೇಗಿ ಮೊಹಮ್ಮದ್‌ ಸಿರಾಜ್‌ 6 ವಿಕೆಟ್‌ಗಳನ್ನು ಪಡೆದು ಹರಣಗಳನ್ನು 55 ರನ್‌ಗಲಿಗೆ ಆಲ್‌ಔಟ್‌ ಮಾಡಿದಿರು. ಇನ್ನೂ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಬುಮ್ರಾ ಬೌಲಿಂಗ್‌ನಲ್ಲಿ ಚಮತ್ಕಾರ ಮಾಡಿ 6 ವಿಕೆಟ್‌ ತೆಗದು ಕೊಂಡು 176 ರನ್‌ಗಳಿಗೆ ಆಲ್‌ ಔಆಟ್‌ ಮಾಡುವ ಮೂಲಕ 76ರ ಕನಿಷ್ಟ ಗುರಿಗೆ ಕಟ್ಟಿ ಹಾಕಿದರು. 

ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ ಐಡೆನ್‌ ಮಾರ್ಕ್ರಂ ಒಬ್ಬರೆ 106 ರನ್‌ ಗಳಿಸಿ ಔಟ್ ಆದರೆ ಇನ್ನುಳಿದ ಯಾವುದೆ ಆಟಗಾರರಿಂದ ಕನಿಷ್ಠ ಮಟ್ಟದ ಪ್ರದರ್ಶನೂ ಕಂಡುಬಂದಿಲ್ಲ. ಮಾರ್ಕ್ರಂ ಅವರ ಶತಕದಿಂದ ತಂಡವು 176 ರನ್‌ ಗಳಿಸಿ 76 ರನ್‌ಗಳ ಕನಿಷ್ಠ ಗುರಿ ನೀಡಿತು . ಗುರಿ ಬೆನ್ನಟ್ಟಿದ ಭಾರತವು  ಕೇವಲ 12 ಒವರ್‌ಗಳಲ್ಲೇ 3 ವಿಕೆಟ್‌ ನಷ್ಠಕ್ಕೆ 80 ರನ್‌ ಗಳಿಸುವ ಮೂಲಕ ಏಕಾಭಿಮುಕವಾಗಿ ಜಯಗಳಿಸಿತು.

ಇದನ್ನು ಓದಿ-ಮೈದಾನದಲ್ಲಿ ಭಗವಾನ್ ಶ್ರೀರಾಮನಂತೆ ಬಿಲ್ಲು ಹಿಡಿದು ನಿಂತ ಕೊಹ್ಲಿ… ‘ವಿರಾಟ’ ರೂಪಕ್ಕೆ ಫ್ಯಾನ್ಸ್ ಫುಲ್ ಖುಷ್

ದಕ್ಷಿಣ ಆಫ್ರಿಕಾ ತಂಡದ 2ನೇ ಟೆಸ್ಟ್ ವಿವರ :
ಬ್ಯಾಟಿಂಗ್‌ ವಿವರ - ಐಡೆನ್‌ ಮಾರ್ಕ್ರಂ (2 & 106), ಡೀನ್‌ ಎಲ್ಗರ್‌ (4 & 12), ಟೋನಿ ಡಿ ಜೋರ್ಜಿ (2 & 1), ಟ್ರಿಸ್ಟನ್ ಸ್ಟಬ್ಸ್ (3 & 1), ಡೇವಿಡ್‌ ಬೆಡಿಂಗ್ಹ್ಯಾಮ್ (12 & 11), ಕೈಲ್ ವೆರ್ರೆನ್ನೆ (15 & 9), ಮಾರ್ಕೊ ಜಾನ್ಸೆನ್ (0 & 11), ಕೇಶವ್‌ ಮಹರಾಜ್‌ (3 & 3), ಕಗಿಸೋ ರಬಾಡ (5 & 2), ನಂದ್ರೆ ಬರ್ಜರ್‌ (4 & 6), ಲುಂಗಿ ಎನ್ಗಿಡಿ (0 & 8).

ಬೌಲಿಂಗ್‌ ವಿವರ - ಕಗಿಸೋ ರಬಾಡ (3 & 1) , ಲುಂಗಿ ಎನ್ಗಿಡಿ (3), ನಂದ್ರೆ ಬರ್ಜರ್‌ (3 & 1), ಮಾರ್ಕೊ ಜಾನ್ಸೆನ್ (0 & 1)

ಭಾರತ ತಂಡದ‌ 2ನೇ ಟೆಸ್ಟ್ ವಿವರ : 
ಬ್ಯಾಟಿಂಗ್‌ ವಿವರ - ರೋಹಿತ್‌ ಶರ್ಮಾ (39 & 17), ಯಶಸ್ವಿ ಜೈಸ್ವಾಲ್‌ (0 & 28), ಶುಭ್ಮನ್‌ ಗಿಲ್‌ (36 & 10),ವಿರಾಟ್‌ ಕೊಹ್ಲಿ (46 & 12), ಶ್ರೆಯಸ್‌ ಅಯ್ಯರ್‌ (0 & 4), ಕೆಎಲ್‌ ರಾಹುಲ್‌ (8),  ರವಿಚಂದ್ರನ್‌ ಅಶ್ವಿನ್‌ (0), ಜಸ್ಪ್ರಿತ್‌ ಬುಮ್ರಾ (0), ಮೊಹಮ್ಮದ್‌ ಸಿರಾಜ್‌ (0), ಪ್ರಸಿಧ್‌ ಕೃಷ್ಣ (0), ಮುಕೇಶ್‌ ಕುಮಾರ್‌ (0) 

ಬೌಲಿಂಗ್‌ ವಿವರ - ಜಸ್ಪ್ರಿತ್‌ ಬುಮ್ರಾ (2 & 6)  , ಮೊಹಮ್ಮದ್‌ ಸಿರಾಜ್‌ (6 & 1) , ಪ್ರಸಿಧ್‌ ಕೃಷ್ಣ (0 & 1), ಮುಕೇಶ್‌ ಕುಮಾರ್ (2 & 2)‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News