ಶೀಘ್ರದಲ್ಲೇ ನಡೆಯಲಿದೆ Ind vs Pak ಅಂತಾರಾಷ್ಟ್ರೀಯ ಪಂದ್ಯ, ಈ ಸ್ಥಳದಲ್ಲಿ ಎರಡು ದೇಶಗಳ ಆಟಗಾರರು ಮುಖಾಮುಖಿ

ಪಾಕಿಸ್ತಾನ ಕಬಡ್ಡಿ ಫೆಡರೇಷನ್ (PKF) ಕಾರ್ಯದರ್ಶಿ ರಾಣಾ ಮೊಹಮ್ಮದ್ ಸರ್ವರ್ ಈ ಕುರಿತು ಶನಿವಾರ ಮಾಹಿತಿ ನೀಡಿದ್ದು. ಮಾರ್ಚ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲು ಎರಡೂ ದೇಶಗಳು ಸಿದ್ಧವಾಗಿವೆ ಎಂದು ಅವರು ಹೇಳಿದರು.

Written by - Channabasava A Kashinakunti | Last Updated : Nov 7, 2021, 10:17 AM IST
  • ಭಾರತ ಮತ್ತು ಪಾಕಿಸ್ತಾನ ಮಧ್ಯ ಫೈಟ್
  • 2022ರ ಮಾರ್ಚ್‌ನಲ್ಲಿ ಕಬಡ್ಡಿ ಪಂದ್ಯ
  • ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಮ್ಯಾಚ್
ಶೀಘ್ರದಲ್ಲೇ ನಡೆಯಲಿದೆ Ind vs Pak ಅಂತಾರಾಷ್ಟ್ರೀಯ ಪಂದ್ಯ, ಈ ಸ್ಥಳದಲ್ಲಿ ಎರಡು ದೇಶಗಳ ಆಟಗಾರರು ಮುಖಾಮುಖಿ title=

ನವದೆಹಲಿ : ಮುಂದಿನ ವರ್ಷ 4 ದೇಶಗಳ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೂ(International Kabaddi Match) ಮುನ್ನ ಕರ್ತಾರ್‌ಪುರ ಕಾರಿಡಾರ್‌ನಲ್ಲಿ 2022ರ ಮಾರ್ಚ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.

ಕಬಡ್ಡಿ ಪಂದ್ಯಕ್ಕೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ

ಪಾಕಿಸ್ತಾನ ಕಬಡ್ಡಿ ಫೆಡರೇಷನ್ (PKF) ಕಾರ್ಯದರ್ಶಿ ರಾಣಾ ಮೊಹಮ್ಮದ್ ಸರ್ವರ್ ಈ ಕುರಿತು ಶನಿವಾರ ಮಾಹಿತಿ ನೀಡಿದ್ದು. ಮಾರ್ಚ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್‌(Kartarpur Corridor)ನಲ್ಲಿ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲು ಎರಡೂ ದೇಶಗಳು ಸಿದ್ಧವಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ : Afghanistan vs New Zealand: ನ್ಯೂಜಿಲೆಂಡ್ vs ಅಫ್ಘಾನಿಸ್ತಾನ್ ಪಂದ್ಯದ ಬಗ್ಗೆ ಅಖ್ತರ್ ನುಡಿದ ಭವಿಷ್ಯವೇನು ಗೊತ್ತೇ?

ಇತಿಹಾಸ ಸೃಷ್ಟಿಯಾಗಲಿದೆ ಕರ್ತಾರ್‌ಪುರ ಕಾರಿಡಾರ್‌ನಲ್ಲಿ

ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ಅಂತಾರಾಷ್ಟ್ರೀಯ ಪಂದ್ಯ(Ind Vs Pak International Kabaddi Match)ವನ್ನು ಆಡಲು ಒಪ್ಪಿಕೊಂಡಿರುವುದರಿಂದ ಇತಿಹಾಸ ನಿರ್ಮಿಸುವುದನ್ನು ನೋಡಲು ನಾವು ಸಿದ್ಧರಿದ್ದೇವೆ ಎಂದು ಮೊಹಮ್ಮದ್ ಸರ್ವರ್ ಹೇಳಿದ್ದಾರೆ. ತಂಡಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಗಡಿಯುದ್ದಕ್ಕೂ ಬರುತ್ತವೆ ಎಂದು ಎರಡೂ ಫೆಡರೇಶನ್‌ಗಳು ಒಪ್ಪಿಕೊಂಡಿವೆ. ಪಂದ್ಯದ ನಂತರ ಎರಡೂ ತಂಡಗಳು ತಮ್ಮ ತಮ್ಮ ದೇಶಗಳಿಗೆ ಮರಳಲಿವೆ.

ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಂಬಂಧಿಸಿದಂತೆ  ಮುಂದುವರಿದಿದೆ ಮಾತುಕತೆ

ಪಂದ್ಯದ ಕುರಿತು ಹೆಚ್ಚಿನ ಮಾಹಿತಿ ಕೇಳಿದಾಗ, ಅದನ್ನು ಅಂತಿಮಗೊಳಿಸಲು ಮಾತುಕತೆ ನಡೆಯುತ್ತಿದೆ ಎಂದು ಮೊಹಮ್ಮದ್ ಸರ್ವರ್ ಹೇಳಿದರು. ಮಾರ್ಚ್ ಅಂತ್ಯದಲ್ಲಿ ಅಂತರಾಷ್ಟ್ರೀಯ ಪಂದ್ಯ(International Kabaddi Match) ಆಯೋಜಿಸುವ ವಿಶ್ವಾಸವಿದೆ ಎಂದರು. ನಾವು ಏಪ್ರಿಲ್‌ನಲ್ಲಿ ಲಾಹೋರ್‌ನಲ್ಲಿ ನಾಲ್ಕು ರಾಷ್ಟ್ರಗಳ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಬೇಕಾಗಿರುವುದರಿಂದ, ಈ ಪಂದ್ಯಗಳನ್ನು ಕೆಲವು ವಾರಗಳ ಹಿಂದೆ ಮಾರ್ಚ್‌ನಲ್ಲಿ ಮಾಡಲು ನಾವು ಬಯಸುತ್ತೇವೆ.

ಇದನ್ನೂ ಓದಿ : ಸ್ಕಾಟ್ಲೆಂಡ್ ವಿರುದ್ಧ ಗೆಲುವು: ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದೇವೆಂದ ವಿರಾಟ್ ಕೊಹ್ಲಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News