India Vs Pakistan: ಪಾಕಿಸ್ತಾನವನ್ನು ಬಗ್ಗುಬಡಿದು ಇತಿಹಾಸ ಬರೆದ ಭಾರತ, ಈ ರೀತಿಯಾಗಿದ್ದು ಇದೆ ಮೊದಲು

Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಭಾರತ ಹಾಕಿ ತಂಡ ಮೈದಾನದಲ್ಲಿ ಪಾಕಿಸ್ತಾನವನ್ನು 10-2 ಗೋಲುಗಳಿಂದ ಬಗ್ಗುಬಡಿದಿದೆ. ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ 4 ಗೋಲು ಗಳಿಸಿದ್ದಾರೆ. Sports News In Kannada  

Written by - Nitin Tabib | Last Updated : Sep 30, 2023, 10:46 PM IST
  • ಈ ಗೆಲುವಿನ ಮೂಲಕ 41 ವರ್ಷಗಳ ಹಿಂದಿನ ಆ ಹೀನಾಯ ಸೋಲಿಗೆ ಶನಿವಾರದ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಂಡಂತಾಗಿದೆ.
  • ಭಾರತ ತಂಡ ಸತತ ನಾಲ್ಕು ಗೆಲುವಿನ ನಂತರ 12 ಅಂಕಗಳೊಂದಿಗೆ ಪೂಲ್-ಎನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
  • ಅಕ್ಟೋಬರ್ 2 ರಂದು ತಂಡವು ತನ್ನ ಕೊನೆಯ ಪೂಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
India Vs Pakistan: ಪಾಕಿಸ್ತಾನವನ್ನು ಬಗ್ಗುಬಡಿದು ಇತಿಹಾಸ ಬರೆದ ಭಾರತ, ಈ ರೀತಿಯಾಗಿದ್ದು ಇದೆ ಮೊದಲು title=

Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಭಾರತ ಹಾಕಿ ತಂಡ ಮೈದಾನದಲ್ಲಿ ಪಾಕಿಸ್ತಾನವನ್ನು 10-2 ಗೋಲುಗಳಿಂದ ಬಗ್ಗುಬಡಿದಿದೆ. ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ 4 ಗೋಲು ಗಳಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಸ್ಥಾನವನ್ನು ಸುಬಧ್ರಗೊಳಿಸಿದೆ.

ಭಾರತದ ಅತಿ ದೊಡ್ಡ ಗೆಲುವು
ನಾಯಕ ಹರ್ಮನ್‌ಪ್ರೀತ್ ಸಿಂಗ್ ನಾಲ್ಕು ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡವು ಶನಿವಾರ ನಡೆದ ಏಷ್ಯನ್ ಗೇಮ್ಸ್‌ನ ಪೂಲ್ ಎ ನ ಏಕಪಕ್ಷೀಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 10-2 ಗೋಲುಗಳ ಭಾರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತ ಸೆಮಿಫೈನಲನಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸಿದೆ. ಗೋಲುಗಳ ಅಂತರದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡಕ್ಕೆ ದೊರೆತ ದೊಡ್ಡ ಗೆಲುವು ಇದಾಗಿದೆ. ಹರ್ಮನ್‌ಪ್ರೀತ್ 11, 17, 33 ಮತ್ತು 34ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ವರುಣ್ ಕುಮಾರ್ 2 ಗೋಲು (41 ಮತ್ತು 54ನೇ) ಗಳಿದಿದ್ದಾರೆ. 150ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಮನದೀಪ್ ಸಿಂಗ್ (8ನೇ), ಸುಮಿತ್ (30ನೇ), ಶಂಶೇರ್ ಸಿಂಗ್ (46ನೇ) ಮತ್ತು ಲಲಿತ್ ಕುಮಾರ್ ಉಪಾಧ್ಯಾಯ (49ನೇ ನಿ.) ಗೋಲು ಗಳಿಸಿದ ಇತರ ಆಟಗಾರರಾಗಿದ್ದಾರೆ.

ಇದನ್ನೂ ಓದಿ-ಈ ದೇಶದ ಸುಂದರ 'ರಾಜಕುಮಾರಿ' ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ, ಕಾರಣ ಇಲ್ಲಿದೆ

ಭಾರತ-ಪಾಕ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಗೆಲುವು
ಭಾರತವೇ ಸಂಪೂರ್ಣ ಪಾರುಪತ್ಯ ಮೆರೆದ ಈ ಪಂದ್ಯದಲ್ಲಿ ಮೊಹಮ್ಮದ್ ಖಾನ್ (38ನೇ ನಿ) ಮತ್ತು ಅಬ್ದುಲ್ ರಾಣಾ (45ನೇ ನಿ) ಗೋಲು ಗಳಿಸಿ ಪಾಕಿಸ್ತಾನದ ಸೋಲಿನ ಅಂತರವನ್ನು ತಗ್ಗಿಸಿದರು. ಉಭಯ ತಂಡಗಳ ನಡುವಿನ 180ನೇ ಪಂದ್ಯ ಇದಾಗಿದ್ದು, 8 ಗೋಲುಗಳ ಅಂತರದ ಗೆಲುವು ಭಾರತ-ಪಾಕಿಸ್ತಾನ ಹಾಕಿ ಇತಿಹಾಸದಲ್ಲಿ ಇದುವರೆಗಿನ ಅತಿ ದೊಡ್ಡ ಗೆಲುವಾಗಿದೆ. 2017ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 7-1 ಅಂತರದಿಂದ ಜಯ ಸಾಧಿಸಿತ್ತು. ಇದೇ ಅಂತರದಲ್ಲಿ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಅತಿ ದೊಡ್ಡ ಗೆಲುವು ದಾಖಲಿಸಿದೆ. 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಫೈನಲ್‌ನಲ್ಲಿ ಪಾಕಿಸ್ತಾನ ಈ ಸಾಧನೆ ಮಾಡಿತ್ತು.

ಇದನ್ನೂ ಓದಿ-ಇನ್ನೂ ನಿಮ್ಮ ಬಳಿ ರೂ.2000 ನೋಟುಗಳಿವೆಯಾ? ಚಿಂತೆ ಬಿಟ್ಟು ಈ ಸುದ್ದಿ ಓದಿ!

41 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ
ಈ ಗೆಲುವಿನ ಮೂಲಕ 41 ವರ್ಷಗಳ ಹಿಂದಿನ ಆ ಹೀನಾಯ ಸೋಲಿಗೆ ಶನಿವಾರದ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಂಡಂತಾಗಿದೆ. ಭಾರತ ತಂಡ ಸತತ ನಾಲ್ಕು ಗೆಲುವಿನ ನಂತರ 12 ಅಂಕಗಳೊಂದಿಗೆ ಪೂಲ್-ಎನಲ್ಲಿ  ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅಕ್ಟೋಬರ್ 2 ರಂದು ತಂಡವು ತನ್ನ ಕೊನೆಯ ಪೂಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಪಂದ್ಯದ 8ನೇ ನಿಮಿಷದಲ್ಲಿಯೇ ಭಾರತ ತಂಡ ಮುನ್ನಡೆ ಸಾಧಿಸಿತ್ತು. ಅಭಿಷೇಕ್ ಅವರ ಅದ್ಭುತ ಪ್ರಯತ್ನವನ್ನು ಮಂದೀಪ್ ಅವರು ಗೋಲ್ ಆಗಿ  ಪರಿವರ್ತಿಸಿದ್ದಾರೆ. ಇದರ ನಂತರ, ಪಾಕಿಸ್ತಾನವು ಪ್ರತಿದಾಳಿ ನಡೆಸಿ ಮೊದಲ ಪೆನಾಲ್ಟಿ ಕಾರ್ನರ್ ಅನ್ನು ಪಡೆದುಕೊಂಡಿತು. ಆದರೆ ಪಂದ್ಯದ 11 ನೇ ನಿಮಿಷದಲ್ಲಿ ಅದರ ಪ್ರಯತ್ನವನ್ನು ಭಾರತದ ಗೋಲ್ಕೀಪರ್ ಕೃಷ್ಣ ಬಹದ್ದೂರ್ ಪಾಠಕ್ ವಿಫಲಗೊಳಿಸಿದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News