ಭಾರತ- ನ್ಯೂಜಿಲೆಂಡ್ ಸೆಮಿಫೈನಲ್ ಗೆ ಮಳೆ ಅಡ್ಡಿ, ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 211/5

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

Last Updated : Jul 9, 2019, 08:21 PM IST
ಭಾರತ- ನ್ಯೂಜಿಲೆಂಡ್ ಸೆಮಿಫೈನಲ್ ಗೆ ಮಳೆ ಅಡ್ಡಿ, ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 211/5 title=

ನವದೆಹಲಿ: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಆರಂಭದಲ್ಲಿ ಭಾರತದ ಬೌಲಿಂಗ್ ದಾಳಿಗೆ ಸಿಕ್ಕ ನ್ಯೂಜಿಲೆಂಡ್ ತಂಡದ ರನ್ ಗತಿಗೆ ಕಡಿವಾಣ ಬಿದ್ದಿತು. ಭಾರತದ ಆರಂಭಿಕ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರು ಎರಡು ಮೇಡನ್ ಓವರ್ ಗಳ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಕಾಡಿದರು. ಈ ಹಂತದಲ್ಲಿ ೧ ರನ್ ಗಳಿಸಿ ಖಾತೆ ತೆಗೆದಿದ್ದ ಮಾರ್ಟಿನ್ ಗುಪ್ಟಿಲ್ ಬುಮ್ರಾ ಅವರ ಬೌಲಿಂಗ್ ನಲ್ಲಿ  ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾದ ನಂತರ ರಕ್ಷಣಾತ್ಮಾಕ ಆಟಕ್ಕೆ ಮೊರೆಹೋದ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಿಗೆ ಕಾದಿತ್ತು. ರವಿಂದ್ರ ಜಡೇಜಾ ಬೌಲಿಂಗ್ ನಲ್ಲಿ ಹೆನ್ರಿ ನಿಕೊಲಸ್ ಬೌಲ್ಡ್ ಆದರು. 

ಮಿಂಚಿದ ಕೇನ್ ವಿಲಿಯಮ್ಸನ್, ರಾಸ್ ಟೇಲರ್:

ಒಂದು ಹಂತದಲ್ಲಿ ವಿಕೆಟ್ಗಳು ಉರುಳುತ್ತಿದ್ದ ವೇಳೆ ಭದ್ರವಾಗಿ ನೆಲೆಯೂರಿದ ಇಬ್ಬರು ಆಟಗಾರರು ಅರ್ಧ ಶತಕವನ್ನು ಗಳಿಸಿದರು. ಆದರೆ ರನ್ ವೇಗಕ್ಕೆ ಇನ್ನೇನು ವೇಗ ಸಿಗುತ್ತಿದೆ ಎನ್ನುವ ವೇಳೆ ನಾಯಕ ಕೇನ್ ವಿಲಿಯಮ್ಸನ್ 67 ರನ್ ಗಳಿಸಿ ಔಟಾದರು.ಸದ್ಯ ರಾಸ್ ಟೇಲರ್ ಇನ್ನು ಕ್ರಿಸ್ ನಲ್ಲಿದ್ದು 67 ರನ್ ಗಳಿಸಿದ್ದಾರೆ. ಪ್ರಾರಂಭದಿಂದಲೂ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು, ಅದರಂತೆ ಇಂದು ಮಳೆ ಬಂದು ಪಂದ್ಯಕ್ಕೆ ಅಡ್ಡಿಪಡಿಸಿತು. ಈಗ ನ್ಯೂಜಿಲೆಂಡ್ ತಂಡವು 46.1 ಓವರ್ ಗಳಲ್ಲಿ 211 ರನ್ ಗಳಿಸಿದೆ. 

 

Trending News