India vs England: ರೋಹಿತ್‌ ಬದಲು ಈ‌ ಆಟಗಾರ ಓಪನರ್‌? ಭಾರತದ ಪ್ಲೇಯಿಂಗ್‌ 11 ನಲ್ಲಿ ಭಾರೀ ಬದಲಾವಣೆ!

India vs England Test Series: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್‌ 11 ನಲ್ಲಿ ಭಾರೀ ಬದಲಾವಣೆ ಕಾಣುವ ನಿರೀಕ್ಷೆಯಿದೆ ಎನ್ನಲಾಗಿದೆ.

Written by - Chetana Devarmani | Last Updated : Feb 1, 2024, 04:27 PM IST
  • ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ ಸರಣಿ
  • ಟೀಂ ಇಂಡಿಯಾದ ಪ್ಲೇಯಿಂಗ್‌ 11
  • ರೋಹಿತ್‌ ಬದಲು ಈ‌ ಆಟಗಾರ ಓಪನರ್‌!
India vs England: ರೋಹಿತ್‌ ಬದಲು ಈ‌ ಆಟಗಾರ ಓಪನರ್‌? ಭಾರತದ ಪ್ಲೇಯಿಂಗ್‌ 11 ನಲ್ಲಿ ಭಾರೀ ಬದಲಾವಣೆ!  title=

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಅಚ್ಚರಿಯ ಸಂಗತಿಯೊಂದು ಹರಿದಾಡುತ್ತಿದೆ. ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್‌ 11 ನಲ್ಲಿ ಭಾರೀ ಬದಲಾವಣೆ ಕಾಣುವ ನಿರೀಕ್ಷೆಯಿದೆ ಎನ್ನಲಾಗಿದೆ. 

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ನಿರಂತರವಾಗಿ ಫ್ಲಾಫ್​ ಆಗುತ್ತಿದ್ದಾರೆ. ಯಶಸ್ವಿ ಜೈಸ್ವಾಲ್​ ಆಗಮನದ ಬಳಿಕ ಗಿಲ್​ ಆರಂಭಿಕ ಸ್ಥಾನ ಕೈತಪ್ಪಿದೆ. ಗಿಲ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. 

ಗಿಲ್​ ಓಪನಿಂಗ್‌ ಸ್ಲಾಟ್‌ನಲ್ಲಿ ಆಡಿದಂತೆ 3ನೇ ಕ್ರಮಾಂಕದಲ್ಲಿ ಅಬ್ಬರಿಸುತ್ತಿಲ್ಲ. ಕೇವಲ ಒಂದೇ ಒಂದು ಅರ್ಧಶತಕಕ್ಕೂ ಗಿಲ್‌ ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಭಾರತದ ಮಾಜಿ ಆಯ್ಕೆಗಾರ ಸರಣ್‌ದೀಪ್ ಸಿಂಗ್ ಮಾತನಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಗಿಲ್ ಓಪನಿಂಗ್ ಮಾಡಬೇಕು.‌ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ಇದೇ ಪ್ರಮುಖ ಕಾರಣವೇ! 

ಗಿಲ್ ಮೂರನೇ ನಂಬರ್ ಆಟಗಾರನಲ್ಲ. ಅವರು ಓಪನರ್.‌ ರೋಹಿತ್ ಸ್ಪಿನ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ಓಪನಿಂಗ್‌ ಸ್ಲಾಟ್‌ನಲ್ಲಿ ಗಿಲ್‌ಗೆ ಅವಕಾಶ ಕಲ್ಪಿಸಲು ಅವರು ಮೂರನೇ ಕ್ರಮಾಂಕದಲ್ಲಿ ಆಡಬೇಕಕು ಎಂದು ಸರಣ್‌ದೀಪ್ ಸಿಂಗ್ ಹೇಳಿದ್ದಾರೆ. 

ಇದಕ್ಕೂ ಮುನ್ನ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಕೂಡ ಇದೇ ರೀತಿಯ ಸಲಹೆಯನ್ನು ನೀಡಿದ್ದರು. ನನ್ನ ಪ್ರಕಾರ 2ನೇ ಟೆಸ್ಟ್‌ನಲ್ಲಿ ಗಿಲ್ ಮತ್ತು ಜೈಸ್ವಾಲ್ ಓಪನ್ ಆಗಬೇಕು ಮತ್ತು ರೋಹಿತ್ ನಂ.3ರಲ್ಲಿ ಬ್ಯಾಟಿಂಗ್ ಮಾಡಬೇಕು. ರೋಹಿತ್ ಸ್ಪಿನ್ ಚೆನ್ನಾಗಿ ಆಡುತ್ತಾರೆ ಎಂದು ಜಾಫರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: IND vs ENG: 'ರೋಹಿತ್ ಬದಲು ಈತ ನಾಯಕನಾಗಿದ್ರೆ, ಭಾರತ ಟೆಸ್ಟ್’ನಲ್ಲಿ ಸೋಲುತ್ತಿರಲಿಲ್ಲ'! ಇಂಗ್ಲೆಂಡ್ ಕ್ರಿಕೆಟರ್ ಹೇಳಿದ್ದು ಯಾರ ಬಗ್ಗೆ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News