ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಶುಭಾರಂಭ: ಟೀಂ ಇಂಡಿಯಾ ಬತ್ತಳಿಕೆಗೆ 4 ಪದಕಗಳು

Asian Games 2023, India Medal Tally: ಸ್ಟಾರ್ ಶೂಟರ್ ಮೆಹುಲಿ ಘೋಷ್, ಆಶಿ ಚೌಕ್ಸೆ ಮತ್ತು ರಮಿತಾ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಇದಾದ ಬಳಿಕ ರೋಯಿಂಗ್‌’ನಲ್ಲಿ ದೇಶಕ್ಕೆ ಪದಕಗಳು ಬಂದಿವೆ.

Written by - Bhavishya Shetty | Last Updated : Sep 24, 2023, 10:32 AM IST
    • ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್-2022
    • ಇಂದು ಈ ಪಂದ್ಯಗಳಲ್ಲಿ ಭಾರತದ ಆಟಗಾರರು 4 ಪದಕಗಳನ್ನು ಗೆದ್ದಿದ್ದಾರೆ.
    • ಏಷ್ಯನ್ ಗೇಮ್ಸ್‌’ನಲ್ಲಿ ಭಾರತದ ಒಟ್ಟು 655 ಆಟಗಾರರು ಭಾಗವಹಿಸುತ್ತಿದ್ದಾರೆ.
ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಶುಭಾರಂಭ: ಟೀಂ ಇಂಡಿಯಾ ಬತ್ತಳಿಕೆಗೆ 4 ಪದಕಗಳು title=
Asian Games 2023 India Medal Tally

Asian Games 2023, India Medal Tally: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್-2022 ರಲ್ಲಿ ಭಾರತವು ಶುಭಾರಂಭ ಮಾಡಿದೆ. ಸ್ಪರ್ಧೆಯ ಮೊದಲ ದಿನವಾದ ಭಾನುವಾರ ಅಂದರೆ ಇಂದು ಈ ಪಂದ್ಯಗಳಲ್ಲಿ ಭಾರತದ ಆಟಗಾರರು 4 ಪದಕಗಳನ್ನು ಗೆದ್ದಿದ್ದಾರೆ. ಸ್ಟಾರ್ ಶೂಟರ್ ಮೆಹುಲಿ ಘೋಷ್, ಆಶಿ ಚೌಕ್ಸೆ ಮತ್ತು ರಮಿತಾ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಇದಾದ ಬಳಿಕ ರೋಯಿಂಗ್‌’ನಲ್ಲಿ ದೇಶಕ್ಕೆ ಪದಕಗಳು ಬಂದಿವೆ.

ಇದನ್ನೂ ಓದಿ:  Asian Games 2023: ಏಷ್ಯನ್ ಗೇಮ್ಸ್ ಫೈನಲ್ ತಲುಪಿದ ಭಾರತೀಯ ಕ್ರಿಕೆಟ್ ತಂಡ!

ಶೂಟಿಂಗ್‌’ನಲ್ಲಿ ಮೊದಲ ಪದಕ:

ಶೂಟಿಂಗ್‌’ನಲ್ಲಿ, ಭಾರತವು ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌’ನಲ್ಲಿ 1886 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯಗಳಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಮೆಹುಲಿ ಘೋಷ್, ಆಶಿ ಚೌಕ್ಸೆ ಮತ್ತು ರಮಿತಾ ಮೂವರು ಭಾರತಕ್ಕೆ ಈ ಪದಕ ಗೆದ್ದಿದ್ದಾರೆ. ರಮಿತಾ 631.9, ಮೆಹುಲಿ 630.8 ಮತ್ತು ಆಶಿ 623.3 ಅಂಕ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಆತಿಥೇಯ ಚೀನಾ ಚಿನ್ನದ ಪದಕ ಗೆದ್ದುಕೊಂಡಿತು.

ರೋಯಿಂಗ್‌’ನಲ್ಲಿ ಬೆಳ್ಳಿ:

ರೋಯಿಂಗ್‌’ನಲ್ಲಿ ಭಾರತ ತನ್ನ ಎರಡನೇ ಪದಕವನ್ನು ಪಡೆದುಕೊಂಡಿತು. ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್‌’ನಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿದ್ದಾರೆ.

ಬಾಬು ಲಾಲ್-ರಾಮ್ ಲೇಖ್ ವಿಜಯಮಾಲೆ:

ರೋಯಿಂಗ್‌’ನಲ್ಲಿ ಭಾರತಕ್ಕೆ ದಿನದ ಮೂರನೇ ಪದಕ ಲಭಿಸಿದೆ. ಬಾಬು ಲಾಲ್ ಯಾದವ್ ಮತ್ತು ರಾಮ್ ಲೇಖ್ ಪುರುಷರ ಡಬಲ್ಸ್ ಫೈನಲ್-ಎಯಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಈ ಜೋಡಿ 6:50:41 ಸಮಯ ತೆಗೆದುಕೊಂಡು, ಕಂಚು ಗೆದ್ದಿದೆ.

ಫೈನಲ್‌’ ಪ್ರವೇಶಿಸಿದ ಮಹಿಳಾ ಕ್ರಿಕೆಟ್ ತಂಡ:

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೇಮ್ಸ್‌’ನ ಫೈನಲ್ ಪ್ರವೇಶಿಸಿದೆ. ಸ್ಮೃತಿ ಮಂಧಾನ ತಂಡ ಸೆಮಿಫೈನಲ್‌’ನಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌’ಗಳಿಂದ ಸೋಲಿಸಿತು. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಈ ಪಂದ್ಯಗಳಲ್ಲಿ ಕನಿಷ್ಠ ಬೆಳ್ಳಿಯನ್ನು ಖಚಿತಪಡಿಸಿದೆ.

ಇದನ್ನೂ ಓದಿ:  ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು?

ಚೀನಾದ ಹ್ಯಾಂಗ್‌ ಝೌನಲ್ಲಿ ನಡೆಯುತ್ತಿರುವ ಈ ಏಷ್ಯನ್ ಗೇಮ್ಸ್‌’ನಲ್ಲಿ ಭಾರತದ ಒಟ್ಟು 655 ಆಟಗಾರರು ಭಾಗವಹಿಸುತ್ತಿದ್ದಾರೆ. ಇದು ಏಷ್ಯನ್ ಗೇಮ್ಸ್‌’ನಲ್ಲಿ ಇದುವರೆಗಿನ ದೇಶದ ಅತಿದೊಡ್ಡ ತಂಡವಾಗಿದೆ. ಭಾರತದ ಆಟಗಾರರು ಒಟ್ಟು 40 ಇವೆಂಟ್‌’ಗಳಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಸಹ ಭಾಗವಹಿಸುತ್ತಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News