IND vs NZ: ಭಾರತ-ನ್ಯೂಜಿಲೆಂಡ್ ಮೊದಲ ಟಿ20I: ಲೈವ್, ಪ್ಲೇಯಿಂಗ್ XI, ಪಿಚ್ ವರದಿ ಇಲ್ಲಿದೆ

India-New Zealand First T20I: ಹಾರ್ದಿಕ್ ಪಾಂಡ್ಯ ನಾಯಕ ಮತ್ತು ರಿಷಬ್ ಪಂತ್ ಉಪನಾಯಕರಾಗಿರುತ್ತಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಪ್ರಮುಖ ಆಟಗಾರರಿಲ್ಲದೆ ಭಾರತ ಈ ಸರಣಿಯನ್ನು ಆಡಲಿದೆ. ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಲಿದ್ದಾರೆ.

Written by - Bhavishya Shetty | Last Updated : Nov 18, 2022, 11:27 AM IST
    • ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ
    • ಹಾರ್ದಿಕ್ ಪಾಂಡ್ಯ ನಾಯಕ ಮತ್ತು ರಿಷಬ್ ಪಂತ್ ಉಪನಾಯಕರಾಗಿರುತ್ತಾರೆ
    • ಹಿರಿಯರಿಗೆ ವಿಶ್ರಾಂತಿ ನೀಡಿದ್ದರಿಂದ ಬಹುತೇಕ ಯುವ ತಂಡ ಕಿವೀಸ್‌ಗೆ ತೆರಳಿದೆ
IND vs NZ: ಭಾರತ-ನ್ಯೂಜಿಲೆಂಡ್ ಮೊದಲ ಟಿ20I: ಲೈವ್, ಪ್ಲೇಯಿಂಗ್ XI, ಪಿಚ್ ವರದಿ ಇಲ್ಲಿದೆ  title=
India

India-New Zealand First T20I: ಮೂರು ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ. ವೆಲ್ಲಿಂಗ್ಟನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಈ ಸರಣಿಯಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡಿದ್ದರಿಂದ ಬಹುತೇಕ ಯುವ ತಂಡ ಕಿವೀಸ್‌ಗೆ ತೆರಳಿದೆ.

ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಹೊಸ ಓಪನರ್! ಬದಲಾಗುತ್ತಾ ಟೀಂ ಇಂಡಿಯಾ ಭವಿಷ್ಯ?

ಹಾರ್ದಿಕ್ ಪಾಂಡ್ಯ ನಾಯಕ ಮತ್ತು ರಿಷಬ್ ಪಂತ್ ಉಪನಾಯಕರಾಗಿರುತ್ತಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಪ್ರಮುಖ ಆಟಗಾರರಿಲ್ಲದೆ ಭಾರತ ಈ ಸರಣಿಯನ್ನು ಆಡಲಿದೆ. ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಲಿದ್ದಾರೆ.

ರೋಹಿತ್-ರಾಹುಲ್ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್-ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಮತ್ತು ಪಂತ್ ಅವರೊಂದಿಗೆ ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಥವಾ ಸಂಜು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಗಾಯದಿಂದ ಚೇತರಿಸಿಕೊಂಡಿರುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ವಿಶ್ವಕಪ್‌ನಲ್ಲಿ ಆಡಿದ್ದ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಈ ಸರಣಿಯಲ್ಲಿಯೂ ಆಡಲಿದ್ದಾರೆ. ಇವರೊಂದಿಗೆ ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಇದ್ದಾರೆ. ಚಹಾಲ್ ಮತ್ತು ಕುಲದೀಪ್ ಯಾದವ್ ಸ್ಪಿನ್ನರ್‌ಗಳಾಗಿ ತಂಡವನ್ನು ಸೇರಿಕೊಂಡಿದ್ದಾರೆ.

ಮತ್ತೊಂದೆಡೆ ಕಿವೀಸ್ ತಂಡಕ್ಕೆ ಗಾಯದಿಂದ ಚೇತರಿಸಿಕೊಳ್ಳದ ಗುಪ್ಟಿಲ್ ದೊಡ್ಡ ಹೊಡೆತ ನೀಡಲಿದ್ದಾರೆ. ಆದರೆ ಅಲೆನ್ ಫಿನ್ ಕಾನ್ವೆಯೊಂದಿಗೆ ಉತ್ತಮ ಪಂದ್ಯವನ್ನಾಡುವ ಸಾಧ್ಯತೆಯಿದೆ. ಇನ್ನು ಸೆಂಟ್ರಲ್ ಒಪ್ಪಂದದಿಂದ ಹಿಂದೆ ಸರಿದಿರುವ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ತಂಡವು ಫಿಲಿಪ್ಸ್, ಮಿಚೆಲ್, ನೀಶಮ್ ಮತ್ತು ಸ್ಯಾಂಟ್ನರ್ ಅವರಂತಹ ಪ್ರಮುಖ ಆಟಗಾರರನ್ನು ಹೊಂದಿದೆ. ಸೌಥಿ, ಇಶ್ ಸೊಥೆ, ಆಡಮ್ ಮಿಲ್ನೆ ಮತ್ತು ಫರ್ಗುಸನ್ ಅವರಂತಹ ಗುಣಮಟ್ಟದ ಬೌಲರ್‌ಗಳೊಂದಿಗೆ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: IND vs NZ Series: ಭಾರತ- ನ್ಯೂಜಿಲೆಂಡ್ ಸಿರೀಸ್ ಟಿವಿಯಲ್ಲಿ ಬರಲ್ಲ: ಈ ಆಪ್ ಮೂಲಕ ಮಾತ್ರ ನೋಡಬಹುದು!

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯಗಳ ನೇರಪ್ರಸಾರದ ಹೊಣೆಯನ್ನು ಅಮೆಜಾನ್ ಪ್ರೈಂ ವಿಡಿಯೋ ಹೊತ್ತಿದೆ. ಮಧ್ಯಾಹ್ನ 12 ಗಂಟೆಗೆ ಈ ಪಂದ್ಯ ನಡೆಯಲಿದ್ದು, ವೆಲ್ಲಿಂಗ್ಟನ್ ಮೈದಾನ ಇದಕ್ಕೆ ಸಾಕ್ಷಿಯಾಗಲಿದೆ. ಈ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೌಲಿಂಗ್ ಗೆ ಕೊಂಚ ಹಿನ್ನಡೆಯಾಗಲಿದೆ. ಈ ಮೈದಾನದಲ್ಲಿ ಈಗಾಗಲೇ 15 ಟಿ20I ಪಂದ್ಯಗಳು ನಡೆದಿದ್ದು, ಆ ಪೈಕಿ 8 ಬಾರಿ ಚೇಸಿಂಗ್‌ ತಂಡಗಳು ಗೆಲುವು ಪಡೆದಿವೆ. ಈ ಮೈದಾನದಲ್ಲಿ ಬಾರಿಸಿರುವ ಸರಾಸರಿ ಮೊತ್ತ 160 ರಿಂದ 170 ರನ್ ಆಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News