Virat Kohli ಗೆ ಮತ್ತೊಮ್ಮೆ ಭಾರಿ ಹಿನ್ನಡೆ, 100ನೇ ಟೆಸ್ಟ್ ಗೂ ಮುನ್ನ BCCI ಕೈಗೊಂಡಿದೆ ಈ ನಿರ್ಧಾರ

IND vs SL: ಶ್ರೀಲಂಕಾ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಆಡಲಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ವಿರಾಟ್  ಕೊಹ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ.  

Written by - Nitin Tabib | Last Updated : Feb 26, 2022, 07:24 PM IST
  • ವಿರಾಟ್ ಕೊಹ್ಲಿಗೆ ಭಾರಿ ಹಿನ್ನಡೆ
  • 100ನೇ ಟೆಸ್ಟ್ ಗೂ ಮುನ್ನ ಕಹಿ ಸುದ್ದಿ
  • BCCI ಕೈಗೊಂಡ ನಿರ್ಧಾರ ಇದು.
Virat Kohli ಗೆ ಮತ್ತೊಮ್ಮೆ ಭಾರಿ ಹಿನ್ನಡೆ, 100ನೇ ಟೆಸ್ಟ್ ಗೂ ಮುನ್ನ BCCI ಕೈಗೊಂಡಿದೆ ಈ ನಿರ್ಧಾರ title=
Ind Vs Sl Series (File Photo)

ನವದೆಹಲಿ: Ind Vs Sl Series - ಕಳೆದ ಕೆಲ ದಿನಗಳಿಂದ ವಿರಾಟ್ ಕೊಹ್ಲಿ ಕಾಲ ಸರಿಯಾಗಿಲ್ಲ ಎಂಬಂತೆ ತೋರುತ್ತಿದೆ. ವಿರಾಟ್ ಕ್ರಿಕೆಟ್ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವವನ್ನು ಕಳೆದುಕೊಂಡಿದ್ದಾರೆ ಮತ್ತು ಎರಡು ವರ್ಷಗಳಿಂದ ಅವರ ಬ್ಯಾಟ್ ನಿಂದ ಶತಕ ಕೂಡ ಬಂದಿಲ್ಲ. ಆದರೆ ಇದೀಗ ವಿರಾಟ್ ಮುಂಬರುವ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 100ನೇ ಟೆಸ್ಟ್ ಆಡಲು ಸಿದ್ಧರಾಗಿದ್ದಾರೆ. ಆದರೆ, ಈ ಪಂದ್ಯಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ.

100ನೇ ಟೆಸ್ಟ್‌ಗೂ ಮುನ್ನ ಕೊಹ್ಲಿಗೆ ಆಘಾತ (Virat Kohli 100th Test)
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ವೀಕ್ಷಕರನ್ನು ಬಿಸಿಸಿಐ ಅನುಮತಿಸುತ್ತಿಲ್ಲ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ (PCA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಮಾರ್ಚ್ 4 ರಂದು ವಿರಾಟ್ ಆದಬೇಕಿರುವ 100ನೇ ಟೆಸ್ಟ್ ಪಂದ್ಯದ ವೆನ್ಯೂ ಇದಾಗಿದೆ. ಮೊಹಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್ -19 ರ ಹೊಸ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೇ ವೇಳೆ ಹೆಚ್ಚಿನ ಭಾರತೀಯ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಂಡಗಳಿಗೆ ಎರಡನೇ ಟೆಸ್ಟ್ ಮುಗಿದ ನಂತರ 'ಬಬಲ್ ಟು ಬಬಲ್ ಟ್ರಾನ್ಸ್‌ಫರ್' ಮೂಲಕ ಸೇರಿಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಪಂದ್ಯ ವೀಕ್ಷಿಸಲು ಅಭಿಮಾನಿಗಳು ಬರುತ್ತಿಲ್ಲ
ಈ ಕುರಿತು ಶನಿವಾರ ಮಾಹಿತಿ ನೀಡಿರುವ PCA ಹಿರಿಯ ಖಜಾಂಚಿ ಆರ್. ಪಿ. ಸಿಂಗಲಾ, "ಹೌದು, BCCI (ಭಾರತೀಯ ಕ್ರಿಕೆಟ್ ಮಂಡಳಿ) ಮಾರ್ಗಸೂಚಿಗಳ ಪ್ರಕಾರ ಟೆಸ್ಟ್ ಪಂದ್ಯಕ್ಕಾಗಿ ಕರ್ತವ್ಯದಲ್ಲಿರುವವರನ್ನು ಹೊರತುಪಡಿಸಿ ಇತರ ಸಾಮಾನ್ಯ ಪ್ರೇಕ್ಷಕರನ್ನು ಅನುಮತಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ, 'ತಾಜಾ ಮೊಹಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ಕೊವಿಡ್ 19 ಪ್ರಕರಣಗಳು ಬೆಳಕಿಗೆಬರುತ್ತಿವೆ, ಆದ್ದರಿಂದ ನಾವು ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಸುಮಾರು ಮೂರು ವರ್ಷಗಳ ನಂತರ ಮೊಹಾಲಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ಇದರಿಂದ ಭಾರಿ ನಿರಾಶೆಯಾಗಿರುವುದು ಮಾತ್ರ ಖಂಡಿತ.

ವಿರಾಟ್‌ಗೆ ದೊಡ್ಡ ಅವಕಾಶ
ಆದರೆ, ಕೊಹ್ಲಿಯ ಮಿನುಗುವ ಕ್ರಿಕೆಟ್ ವೃತ್ತಿಜೀವನದ ಈ ವೈಭವದ ಸಂದರ್ಭವನ್ನು ಆಚರಿಸಲು PCA ಕ್ರೀಡಾಂಗಣದಾದ್ಯಂತ 'ಬಿಲ್ಬೋರ್ಡ್'ಗಳು ತಲೆ ಎತ್ತಿವೆ. ನಾವು ದೊಡ್ಡ ಜಾಹೀರಾತು ಫಲಕಗಳನ್ನು ಹಾಕುತ್ತಿದ್ದೇವೆ ಮತ್ತು ನಮ್ಮ ಪಿಸಿಎ ಅಪೆಕ್ಸ್ ಕೌನ್ಸಿಲ್ ಕೂಡ ವಿರಾಟ್ ಅವರನ್ನು ಗೌರವಿಸಲು ನಿರ್ಧರಿಸಿದೆ ಎಂದು ಅವರು ಹಿರಿಯ ಖಜಾಂಚಿ ಮಾಹಿತಿ ನೀಡಿದ್ದಾರೆ. ಬಿಸಿಸಿಐ ಸೂಚನೆಯಂತೆ ಪಂದ್ಯದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಅದು ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News