IND vs PAK ಪಂದ್ಯ: ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂಪೂರ್ಣ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ.

Written by - Puttaraj K Alur | Last Updated : Oct 10, 2021, 08:23 AM IST
  • ಅ.17ರಿಂದ ನ.14ರವರೆಗೆ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್
  • ಅ.24ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತುರ
  • ಭಾರತ-ಪಾಕ್ ಪಂದ್ಯಕ್ಕೆ ನನಗೆ 2 ಟಿಕೆಟ್ ಬೇಕೆಂದು ರೋಹಿತ್ ಶರ್ಮಾಗೆ ಬೇಡಿಕೆಯಿಟ್ಟ ಅಭಿಮಾನಿ
IND vs PAK ಪಂದ್ಯ: ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ title=
ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ

ನವದೆಹಲಿ: ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಕುತೂಹಲ ಮೂಡಿಸಿರುವ ಐಸಿಸಿ ಟಿ-20 ವಿಶ್ವಕಪ್ (ICC T20 World Cup 2021) ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ. ವಿರಾಟ್ ಕೊಹ್ಲಿ(Virat Kohli) ನಾಯಕತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿಯೇ ಸಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಸೂಪರ್ ಹಿಟ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  

ರೋಹಿತ್ ಶರ್ಮಾಗೆ ಅಭಿಮಾನಿಯ ಬೇಡಿಕೆ

ಭಾರತ ಮತ್ತು ಪಾಕಿಸ್ತಾನ ಪಂದ್ಯ(India vs Pakistan Match)ವನ್ನು ವೀಕ್ಷಿಸಲು ತುದಿಗಾಲ ಮೇಲೆ ನಿಂತಿರುವ ಅಭಿಮಾನಿಯೊಬ್ಬರು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್‌ ಶರ್ಮಾ ಮುಂದೆ ಬೇಡಿಕೆಯೊಂದನ್ನು ಇಟ್ಟಿರುವುದು ಗಮನ ಸೆಳೆಯುತ್ತಿದೆ. ಅಬುಧಾಬಿಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದ ಅಭಿಮಾನಿಯೊಬ್ಬರು ಭಾರತ ಮತ್ತು ಪಾಕ್ ನಡುವಿನ ಟಿ-20 ವಿಶ್ವಕಪ್ ಪಂದ್ಯಕ್ಕೆ ಟಿಕೆಟ್ ಬೇಕು ಎಂದು ರೋಹಿತ್ ಶರ್ಮಾಗೆ ಕೇಳಿದ್ದಾರೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.  

ಇದನ್ನೂ ಓದಿ: IPL 2021, SRH vs MI: ವೇಗದ ಅರ್ಧ ಶತಕ ಬಾರಿಸಿದ ಇಶಾನ್ ಕಿಶನ್

ಭಾರತ-ಪಾಕ್ ಪಂದ್ಯಕ್ಕೆ 2 ಟಿಕೆಟ್ ಬೇಕು

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಹೈದರಾಬಾದ್ (MI vs SRH) ನಡುವಿನ ಪಂದ್ಯದ ವೇಳೆ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಕ್ರಿಕೆಟ್ ಅಭಿಮಾನಿಯೊಬ್ಬರು ‘ರೋಹಿತ್ ಶರ್ಮಾ(Rohit Sharma) ಅವರೇ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ನಡೆಯಲಿರುವ ಪಂದ್ಯದ 2 ಟಿಕೆಟ್‌ಗಳು ದಯವಿಟ್ಟು ನನಗೆ ಬೇಕು’ ಎಂದು ಬರೆದಿರುವ ಪ್ಲಕಾರ್ಡ್ ಹಿಡಿದು ವಿನಂತಿಸಿಕೊಂಡಿದ್ದಾರೆ.

ಅಂತರ್ಜಾಲದಲ್ಲಿ ವೈರಲ್ ಆದ ಫೋಟೋ

ರೋಹಿತ್ ಶರ್ಮಾ(Rohit Sharma)ಗೆ ಟಿಕೆಟ್ ಬೇಡಿಕೆಯಿಟ್ಟಿರುವ ಅಭಿಮಾನಿಯ ಈ ಫೋಟೋ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್‌ಗಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವಂತೂ ಭಾರೀ ಕುತೂಹಲ ಮೂಡಿಸಿರುತ್ತದೆ. ಉಭಯ ತಂಡಗಳ ನಡುವಿನ ಪಂದ್ಯವನ್ನು ಅಭಿಮಾನಿಗಳು ಯುದ್ಧಕ್ಕೆ ಹೋಲಿಕೆ ಮಾಡುತ್ತಾರೆ.

ಇದನ್ನೂ ಓದಿ: ಕೆ.ಎಲ್.ರಾಹುಲ್ ಗೆ ಕೊಹ್ಲಿ, ರೋಹಿತ್ ಶರ್ಮಾಗಿಂತಲೂ ಅಧಿಕ ಸಾಮರ್ಥ್ಯವಿದೆ-ಗೌತಮ್ ಗಂಭೀರ್    

ಈಗಾಗಲೇ ಸಂಪೂರ್ಣ ಟಿಕೆಟ್ ಮಾರಾಟ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂಪೂರ್ಣ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ. ಹೀಗಾಗಿ ಇದೀಗ ರೋಹಿತ್ ಶರ್ಮಾ ತಮ್ಮ ಅಭಿಮಾನಿಯ ಬೇಡಿಕೆಯನ್ನು ಈಡೇರಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News