IND vs NZ : ಮೊದಲ ಟೆಸ್ಟ್‌ ಮ್ಯಾಚ್ ನಲ್ಲಿ ಶಕ್ತಿ ಪ್ರದರ್ಶಿಸಿದ ಅಯ್ಯರ್-ಜಡೇಜಾ!

ಕಾನ್ಪುರದ ಐತಿಹಾಸಿಕ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸರಣಿಯ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಿದೆ. ಈ ಪಂದ್ಯದ ಮೊದಲ ದಿನದ ಆಟ ಮುಗಿದಿದೆ. ಭಾರತ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ.

Written by - Channabasava A Kashinakunti | Last Updated : Nov 25, 2021, 05:49 PM IST
  • ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್
  • ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಫೈಟ್
  • ಟೀಂ ಇಂಡಿಯಾಗೆ ಕಠಿಣ ಸವಾಲು
IND vs NZ : ಮೊದಲ ಟೆಸ್ಟ್‌ ಮ್ಯಾಚ್ ನಲ್ಲಿ ಶಕ್ತಿ ಪ್ರದರ್ಶಿಸಿದ ಅಯ್ಯರ್-ಜಡೇಜಾ! title=

ನವದೆಹಲಿ : ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ (Ind Vs Nz 1st Test) ಆರಂಭವಾಗಿದೆ. ಕಾನ್ಪುರದ ಐತಿಹಾಸಿಕ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸರಣಿಯ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಿದೆ. ಈ ಪಂದ್ಯದ ಮೊದಲ ದಿನದ ಆಟ ಮುಗಿದಿದೆ. ಭಾರತ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ.

ಟೀಮ್ ಇಂಡಿಯಾ ಇನ್ನಿಂಗ್ಸ್

ಶುಭಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್(Mayank Agarwal) ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸಿದರು. ಮಾಯಾಂಕ್ ಕೇವಲ 13 ರನ್ ಗಳಿಸುವ ಮೂಲಕ ಕೈಲ್ ಜೇಮಿಸನ್‌ಗೆ ಬಲಿಯಾದರು, ಆದರೆ ಗಿಲ್ ಅರ್ಧಶತಕ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ಚೇತೇಶ್ವರ ಪೂಜಾರ ಕೇವಲ 26 ರನ್ ಗಳಿಸಲಷ್ಟೇ ಶಕ್ತರಾದರು, ರಹಾನೆ ಕೇವಲ 35 ರನ್ ಗಳಿಸಿ ಔಟಾದರು. ಇದಾದ ನಂತರ ಶ್ರೇಯಸ್ ಅಯ್ಯರ್ 75 ಮತ್ತು ರವೀಂದ್ರ ಜಡೇಜಾ 50 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಕಿವೀಸ್ ತಂಡಕ್ಕೆ ಸವಾಲನ್ನು ಒಡ್ಡಲು ಎಚ್ಚರಿಕೆಯಿಂದ ಆಡುವ ಮತ್ತು ದೊಡ್ಡ ಮೊತ್ತವನ್ನು ಗಳಿಸುವ ಜವಾಬ್ದಾರಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲಿದೆ. ಮೊದಲ ದಿನದ ನಂತರ ಟೀಮ್ ಇಂಡಿಯಾ ಸ್ಕೋರ್ ಹೊರಬಿದ್ದಿದೆ - 258/4 (84 ಓವರ್).

ಇದನ್ನೂ ಓದಿ : ಕೊಹ್ಲಿಗೆ ಡಾನ್ಸ್ ಕಲಿಸಿಕೊಟ್ಟ ಚಹಲ್ ಪತ್ನಿ, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ ವಿಡಿಯೋ

ಅರ್ಧಶತಕ ಭಾರಿಸಿದ ಶುಭಮನ್ ಗಿಲ್  

ಶುಭಮನ್ ಗಿಲ್(Shubman Gill) ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಅರ್ಧಶತಕವನ್ನು ಪೂರ್ಣಗೊಳಿಸಿದರು, ಅವರು ಕೇವಲ 81 ಎಸೆತಗಳಲ್ಲಿ 50 ರನ್ ಗಡಿಯನ್ನು ಮುಟ್ಟಿದರು, ಈ ಸಮಯದಲ್ಲಿ ಅವರು 5 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಹೊಡೆದರು. ಅವರು ತಮ್ಮ ಚೊಚ್ಚಲ ಟೆಸ್ಟ್ ಶತಕದತ್ತ ಸಾಗುತ್ತಿದ್ದರು, ಆದರೆ ಕೈಲ್ ಜೇಮಿಸನ್ ಅವರನ್ನು 52 ರನ್‌ಗಳಿಗೆ ಕ್ಲೀನ್ ಬೌಲ್ಡ್ ಮಾಡಿದರು.

ಟಾಸ್ ಗೆದ್ದ ಟೀಂ ಇಂಡಿಯಾ

ಟಾಸ್ ಗೆದ್ದ ಟೀಂ ಇಂಡಿಯಾ(Team India) ನಾಯಕ ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ತಂಡವನ್ನು ಮೊದಲು ಬೌಲಿಂಗ್ ಮಾಡಲು ಅವಕಾಶ ನೀಡಿದರು. ನ್ಯೂಜಿಲೆಂಡ್ ಗುಣಮಟ್ಟದ ತಂಡವಾಗಿದ್ದು, ನಾವು ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ರಹಾನೆ ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಕೂಡ ಭಾರತದ ಸವಾಲನ್ನು ಸ್ವೀಕರಿಸಿದರು.

ಅಜಿಂಕ್ಯ ರಹಾನೆ ಮೇಲೆ ಇದೆ ದೊಡ್ಡ ಜವಾಬ್ದಾರಿ

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಕಮಾಂಡ್ ಅಜಿಂಕ್ಯ ರಹಾನೆ(Ajinkya Rahane) ಕೈಯಲ್ಲಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 'ಕಿಂಗ್ ಕೊಹ್ಲಿ'ಗೆ ವಿಶ್ರಾಂತಿ ನೀಡಲಾಗಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ.

ಇದು ಶ್ರೇಯಸ್ ಅಯ್ಯರ್ ಗೆ ಚೊಚ್ಚಲ ಟೆಸ್ಟ್ 

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಾದಾರ್ಪಣೆ ಮಾಡುವ ಅವಕಾಶ ಪಡೆದರು. ವಿರಾಟ್ ಕೊಹ್ಲಿ ಬದಲಿಗೆ ಶ್ರೇಯಸ್ ಅಯ್ಯರ್ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಟೀಮ್ ಇಂಡಿಯಾ(Team India) ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದೀರ್ಘಕಾಲ ಆಡುತ್ತಿದ್ದಾರೆ. ಅಯ್ಯರ್ ಅವರಿಗೆ ಇದು ಭಾರತದ ಪರ ಆಡುತ್ತಿರುವ ಮೊದಲ ಟೆಸ್ಟ್ ಸರಣಿಯಾಗಿದೆ. ದೇಶಿಯ ಕ್ರಿಕೆಟ್‌ನಲ್ಲೂ ಈ ಬ್ಯಾಟ್ಸ್‌ಮನ್ ಟೆಸ್ಟ್‌ನಲ್ಲೂ ಉತ್ತಮ ಬ್ಯಾಟ್ಸ್‌ಮನ್ ಆಗಬಲ್ಲೆ ಎಂಬುದನ್ನು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ : IPL 2022 ರ ಮೆಗಾ ಹರಾಜಿನಲ್ಲಿ CSK, MI, DC, RCB, KKR ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ

ಕಾನ್ಪುರ ಪಿಚ್ ಮೂಡ್

ಮೊದಲ ಟೆಸ್ಟ್(Ind Vs Nz 1st Test) ನಲ್ಲಿ ಪಿಚ್ ಪ್ರಮುಖ ಪಾತ್ರ ವಹಿಸಲಿದ್ದು, ಮೊದಲ ದಿನ ಎಲ್ಲರ ಕಣ್ಣು ಗ್ರೀನ್ ಪಾರ್ಕ್ ಮೈದಾನದತ್ತ ನೆಟ್ಟಿದೆ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲೂ ಚಳಿ ಹೆಚ್ಚಾಗುತ್ತಿದ್ದು, ಹವಾಮಾನವೂ ಮುಖ್ಯವಾಗಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಎಲ್ಲರ ಕಣ್ಣು ಕೂಡ ಉಭಯ ತಂಡಗಳ ಸ್ಪಿನ್ನರ್‌ಗಳ ಮೇಲಿರುತ್ತದೆ. ಇದಕ್ಕೆ ಕಾರಣ, ಪಂದ್ಯದ ಎರಡೂವರೆ ದಿನಗಳಿಂದ ಸ್ಪಿನ್ನರ್‌ಗಳ ನೆರವಿಗೆ ಬರುತ್ತಿದ್ದು, ಈ ಬಾರಿಯೂ ಅವರಲ್ಲಿ ಭರವಸೆ ಮೂಡಲಿದೆ.

ಬ್ಯಾಟ್ಸ್‌ಮನ್‌ಗಳಿಗೆ ಪಿಚ್ ಹೇಗಿದೆ?

ಕಾನ್ಪುರದ ಗ್ರೀನ್ ಪಾರ್ಕ್(Kanpur Green Park) ಮೈದಾನದ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ ಮತ್ತು ಇಲ್ಲಿ ಪ್ರತಿ ಫಾರ್ಮೆಟ್‌ನಲ್ಲಿ ರನ್ ಪೇರಿಸಲಾಗಿದೆ. ಆದರೆ, ಈ ವಿಕೆಟ್‌ನಲ್ಲಿ ಭಾರತ ಮತ್ತು ಕಿವೀಸ್ ತಂಡದ ಸ್ಪಿನ್ನರ್‌ಗಳು ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳ ಸಮಸ್ಯೆಯನ್ನು ಹೆಚ್ಚಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News