IND Vs Aus Women's WC: ಟೀಂ ಇಂಡಿಯಾಗೆ ಭಾರಿ ಮುಖಭಂಗ, ವ್ಯರ್ಥವಾದ Mithali-Harmanpreet ಶತಕದ ಜೊತೆಯಾಟ

ICC Women World Cup 2022: ಹೋಳಿ ಹಬ್ಬದ ಒಂದು ದಿನ ನಂತರ ಮಹಿಳಾ ವಿಶ್ವಕಪ್ ಕ್ರಿಕೆಟ್ ನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಬಂದಿದೆ. ಇಂದು ನಡೆದ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಭಾರತ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದೆ.

Written by - Nitin Tabib | Last Updated : Mar 19, 2022, 04:08 PM IST
  • ಮಹಿಳಾ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತಕ್ಕೆ ಭಾರಿ ಮುಖಭಂಗ
  • 6 ವಿಕೆಟ್ ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ
  • ಸೆಮಿಫೈನಲ್ ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ
IND Vs Aus Women's WC: ಟೀಂ ಇಂಡಿಯಾಗೆ ಭಾರಿ ಮುಖಭಂಗ, ವ್ಯರ್ಥವಾದ Mithali-Harmanpreet ಶತಕದ ಜೊತೆಯಾಟ title=
IND Vs Aus Women's WC

ICC Women World Cup 2022: ICC ಮಹಿಳಾ ವಿಶ್ವಕಪ್ 2022 ರಲ್ಲಿ ಭಾರತೀಯ ಅಭಿಮಾನಿಗಳಿಗೆ ಇಂದಿನ ದಿನ ಕಹಿಯಾಗಿ ಪರಿಣಮಿಸಿದೆ. ಇಂದು ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿ ಸೆಮಿಫೈನಲ್‌ ನಲ್ಲಿ ತನ್ನ ಸ್ಥಾನ ಭದ್ರಪಡಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 277 ರನ್ ಗಳಿಸಿತ್ತು. ಆದರೆ, ಪಂದ್ಯದ ಕೊನೆಯ ಓವರ್‌ನಲ್ಲಿ ಜೂಲನ್ ಗೋಸ್ವಾಮಿ ಪಂದ್ಯವನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ.

ಅರ್ಧ ಶತಕ ಬಾರಿಸಿದ ಮೂವರು ಆಟಗಾರರು 
ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 277 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 49.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ  ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಭಾರತದ ಪರ ನಾಯಕಿ ಮಿಥಾಲಿ ರಾಜ್ (Mithali Raj) (68), ಹರ್ಮನ್‌ಪ್ರೀತ್ ಕೌರ್ (Harmanpreet Kaur) (57*) ಮತ್ತು ಯಾಸ್ತಿಕಾ ಭಾಟಿಯಾ (Yastika Bhatia) (59) ರನ್ ಗಳಿಸಿದರು.

ಇದನ್ನೂ ಓದಿ-'ಅದು ರಿಕಿ ಪಾಂಟಿಂಗ್ ಆಗಿಲ್ಲದಿದ್ದರೆ...ನಾನು ಅವನ ತಲೆಯನ್ನು ಕತ್ತರಿಸುತ್ತಿದ್ದೆ'

ಕೊನೆಯ ಓವರ್‌ನಲ್ಲಿ ಜೂಲನ್ ಅರ ಅನುಭವವು ಕೆಲಸ ಮಾಡಲಿಲ್ಲ (ICC Women World Cup 2022)
ಪಂದ್ಯದ ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿಗೆ 8 ರನ್ ಗಳು ಬೇಕಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ಅತ್ಯಂತ ಅನುಭವಿ ಬೌಲರ್ ಜೂಲನ್ ಗೋಸ್ವಾಮಿಗೆ (Jhulan Goswami) ಅವರ ಕೈಯಲ್ಲಿ ಬಾಲ್ ನೀಡಲಾಗಿತ್ತು, ಆದರೆ, ಅವರ ಅನುಭವ ಅವರಿಗೆ ಸಾಥ್ ನೀಡಲಿಲ್ಲ. ಓವರ್‌ನ ಮೊದಲ 3 ಎಸೆತಗಳಲ್ಲಿಯೇ ಆಸ್ಟ್ರೇಲಿಯಾದ ಆಟಗಾರ್ತಿ ಮೂನಿ ಒಂದು ಬೌಂಡರಿ, 2 ರನ್ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ-T20 World Cup 2022: ಟಿ-20 ವಿಶ್ವಕಪ್​ಗೆ ಈ ಇಬ್ಬರು ಆಟಗಾರರ ಸ್ಥಾನ ಅಪಾಯದಲ್ಲಿದೆ!

ಶತಕ ವಂಚಿತರಾದ ನಾಯಕಿ ಮೆಗ್ ಲೆನ್ನಿಂಗ್
ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲೆನ್ನಿಂಗ್ ಅವರು ಮೇಘನಾ ಸಿಂಗ್ ಬೌಲ್ ನಲ್ಲಿ (Meghana Singh)  ಔಟಾದಾಗ ಅವರು ಶತಕದ ಸಮೀಪದಲ್ಲಿದ್ದರು. ಸಿಂಗ್ ಎಸೆತದಲ್ಲಿ ಪೂಜಾ ವಸ್ತ್ರಾಕರ್ (Pooja Vastrakar) ಉತ್ತಮ ಕ್ಯಾಚ್ ಪಡೆದು ಲೆನ್ನಿಂಗ್ ಅವರನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ.ಲೆನ್ನಿಂಗ್ ಒಟ್ಟು 107 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 97 ರನ್ ಗಳ ಅಮೋಘ ಇನಿಂಗ್ಸ್ ಆಡಿದರು.

ಇದನ್ನೂ ಓದಿ-'ನಾವು ಇಲ್ಲಿ ಇರುವುದು ಸಾಬೀತುಪಡಿಸುವುದಕ್ಕೆ ಅಲ್ಲ, ಉತ್ತಮ ಕ್ರಿಕೆಟ್ ಆಡಲಿಕ್ಕೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News