Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

ಬ್ರಿಸ್ಬೇನ್‌ನ ಗಬ್ಬಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಭಾರತ ಕ್ರಿಕೆಟ್ ತಂಡ ಸರಣಿಯನ್ನು ಗೆದ್ದು ಹಲವಾರು ದಾಖಲೆಗಳನ್ನು ಪಡೆದುಕೊಂಡಿತು.

Written by - Yashaswini V | Last Updated : Jan 19, 2021, 02:30 PM IST
  • ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಗೋಲುಗಳಿಂದ ಗೆದ್ದ ಟೀಂ ಇಂಡಿಯಾ
  • ಗೆದ್ದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡ ಭಾರತ
  • ಗಬಾದಲ್ಲಿ 32 ವರ್ಷಗಳ ನಂತರ ಆಸ್ಟ್ರೇಲಿಯಾದ ಸೋಲು
Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ  title=
Ind vs Aus, Test Series

ಬ್ರಿಸ್ಬೇನ್ : ಬ್ರಿಸ್ಬೇನ್‌ನ ಗಬಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಗೋಲುಗಳಿಂದ ಗೆದ್ದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಆಸ್ಟ್ರೇಲಿಯಾದ ಕೊನೆಯ ಪ್ರವಾಸದಲ್ಲಿ 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ಈ ಟ್ರೋಫಿಯನ್ನು ಗೆದ್ದುಕೊಂಡಿತು.

ಶುಭ್​ಮನ್​ ಗಿಲ್​ (91), ಚೇತೇಶ್ವರ ಪೂಜಾರ (56) ಹಾಗೂ ರಿಷಬ್​ ಪಂತ್ (Rishabh Pant)​ ಅಜೇಯ 89 ರನ್​ ನೆರವಿನಿಂದ ಎರಡನೇ ಇನ್ನಿಂಗ್ಸ್​ನಲ್ಲಿ 96 ಓವರ್​ಗೆ 7 ವಿಕೆಟ್​ ನಷ್ಟಕ್ಕೆ 329 ರನ್​ ಕಲೆಹಾಕುವ ಮೂಲಕ ಟೀಮ್​ ಇಂಡಿಯಾ ವಿಜಯೋತ್ಸವ ಆಚರಿಸಿತು. ಈ ಮೂಲಕ ಬ್ರಿಸ್ಬೇನ್​ ಟೆಸ್ಟ್​ ಇತಿಹಾಸಲ್ಲೇ ಅತಿ ಹೆಚ್ಚು ರನ್ (257)​ ಗುರಿ ಬೆನ್ನಟ್ಟಿದ ಕೀರ್ತಿಗೆ ಭಾರತ ಪಾತ್ರವಾಗಿದೆ.

ಇದನ್ನೂ ಓದಿ - IND vs AUS Sydney Test: ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

ಗಬಾದಲ್ಲಿ 32 ವರ್ಷಗಳ ನಂತರ ಆಸ್ಟ್ರೇಲಿಯಾದ ಸೋಲು
32 ವರ್ಷಗಳ ನಂತರ ಆಸ್ಟ್ರೇಲಿಯಾದ ಕ್ರಿಕೆಟ್ ತಂಡವು ಬ್ರಿಸ್ಬೇನ್‌ನ ಗಬ್ಬಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋತಿದೆ. ಗೆಲುವಿಗೆ 328 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ (Team India) ಕ್ಕೆ ವರುಣನ ಅಡಚಣೆಯಾಯಿತು. ಇದರಿಂದಾಗಿ ಪಂದ್ಯ ಡ್ರಾ ಆಗುವ ಭೀತಿ ಎದುರಾಗಿತ್ತು. ಆದರೆ ಈ ಭಾರತ ತಂಡದ ಯುವಪಡೆ ಕೊನೆಗೂ ಟ್ರೋಫಿ ಉಳಿಸಿಕೊಳ್ಳುವಲ್ಲಿ ಮೇಲುಗೈ ಸಾಧಿಸಿದ್ದು ಐತಿಹಾಸಿಕ ಸಾಧನೆ ಮಾಡಿದೆ. 

ಇದನ್ನೂ ಓದಿ - IND vs AUS: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ !

ಭಾರತದ ಅತ್ಯಂತ ಯಶಸ್ವಿ ರನ್ ಚೇಸ್
ಯಾವ ತಂಡದ ವಿರುದ್ಧ  ರನ್ ಪಂದ್ಯ ನಡೆದ ಸ್ಥಳ ಯಾವಾಗ
ವೆಸ್ಟ್ ಇಂಡೀಸ್  406 ಪೋರ್ಟ್ ಆಫ್ ಸ್ಪೇನ್  1975/76
ಇಂಗ್ಲೆಂಡ್  387 ಚೆನ್ನೈ 2008/09
ಆಸ್ಟ್ರೇಲಿಯಾ  328 ಬ್ರಿಸ್ಬೇನ್ 2020/21
ವೆಸ್ಟ್ ಇಂಡೀಸ್  276 ದೆಹಲಿ 2011/12
ಶ್ರೀಲಂಕಾ 264 ಕ್ಯಾಂಡಿ 2001

 

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಗೆಲುವು
ರನ್  ತಂಡ  ಪಂದ್ಯ ನಡೆದ ಸ್ಥಳ
414  ದಕ್ಷಿಣ ಆಫ್ರಿಕಾ 2008/09
332 ಇಂಗ್ಲೆಂಡ್ 1928/29
329 ಭಾರತ 2020/21

 

ಟೆಸ್ಟ್ ಪಂದ್ಯಗಳಲ್ಲಿ ಸತತ ಗೆಲುವು
ಎಷ್ಟು ವರ್ಷಗಳು ತಂಡ  ಕ್ರೀಡಾಂಗಣ ಯಾವಾಗ
34 ವರ್ಷ ಪಾಕಿಸ್ತಾನ ರಾಷ್ಟ್ರೀಯ ಕ್ರೀಡಾಂಗಣ (ಕರಾಚಿ) (1955-00)
31 ವರ್ಷ ಆಸ್ಟ್ರೇಲಿಯಾ ಗಬಾ ಅಂತರರಾಷ್ಟ್ರೀಯ ಕ್ರೀಡಾಂಗಣ (1989–19)
27 ವರ್ಷ ವೆಸ್ಟ್ ಇಂಡೀಸ್ ಕೆನ್ಸಿಂಗ್ಟನ್  ಓವಲ್  (1948-93)
25 ವರ್ಷ ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್ (1905-54)
19 ವರ್ಷ ವೆಸ್ಟ್ ಇಂಡೀಸ್ ಸಬೀನಾ ಪಾರ್ಕ್ (1958-89)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G 
Apple Link - https://apple.co/3loQYe  

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News