IND vs AUS : ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡ Mohammed Siraj

ಮೊಹಮ್ಮದ್ ಸಿರಾಜ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಅವರ ದೇಶಕ್ಕಾಗಿ ಕ್ರಿಕೆಟ್ ಆಡಬೇಕೆಂಬುದು ಅವರ ತಂದೆಯ ಕನಸಾಗಿತ್ತು. ಸಿರಾಜ್ ತಮ್ಮ ತಂದೆಯ ಕನಸನ್ನು ನನಸು ಮಾಡುತ್ತಿದ್ದಾರೆ.  

Written by - Yashaswini V | Last Updated : Jan 7, 2021, 09:50 AM IST
  • ರಾಷ್ಟ್ರಗೀತೆಯ ಸಂದರ್ಭದಲ್ಲಿ ಭಾವುಕರಾಗಿ ಕಂಡ ಮೊಹಮ್ಮದ್ ಸಿರಾಜ್
  • ಸಿಡ್ನಿ ಟೆಸ್ಟ್‌ನ ಮೊದಲ ವಿಕೆಟ್ ಕಬಳಿಸಿದ ಸಿರಾಜ್
  • ನಿನ್ನ ತಂದೆಯ ಇಚ್ಚೆಯಂತೆ ಮಾಡು. ಭಾರತಕ್ಕಾಗಿ ಆಡು - ಸಿರಾಜ್ ತಾಯಿ
IND vs AUS : ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡ  Mohammed Siraj title=
Mohammed Siraj tears in his eyes (Photo-Twitter/@cricketcomau)

ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿಯ (Border-Gavaskar Trophy) ಮೂರನೇ ಟೆಸ್ಟ್ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಅವರ ವೃತ್ತಿಜೀವನದ ಎರಡನೇ ಟೆಸ್ಟ್ ಇದಾಗಿದ್ದು ಗುರುವಾರ ಪಂದ್ಯ ಪ್ರಾರಂಭವಾಗುವ ಮೊದಲು ಅವರು ತುಂಬಾ ಭಾವುಕರಾದರು.

ಸಿರಾಜ್ ಕಣ್ಣಲ್ಲಿ ನೀರು : 
ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ಪ್ರಾರಂಭವಾದಾಗ ಮೊಹಮ್ಮದ್ ಸಿರಾಜ್  (Mohammed Siraj) ಮತ್ತು ಎಲ್ಲಾ ಆಟಗಾರರು ಸಹ ಮೈದಾನದಲ್ಲಿದ್ದರು. ರಾಷ್ಟ್ರಗೀತೆಯ ಸಮಯದಲ್ಲಿ ಈ ಯುವ ಬೌಲರ್‌ಗಳು ಭಾವುಕರಾದರು ಮತ್ತು ಅವರ ಕಣ್ಣಲ್ಲಿ ನೀರು ತುಂಬಿತ್ತು. ಸಿರಾಜ್‌ಗೆ ಇದು ಮರೆಯಲಾಗದ ಕ್ಷಣವಾಗಿದೆ.

ಇದನ್ನೂ ಓದಿ : Watch: ಟೆಸ್ಟ್ ಕ್ರಿಕೆಟ್ ಪಾದಾರ್ಪಣೆಗಾಗಿ ವೇಗಿ ನವದೀಪ್ ಸೈನಿ ಭರ್ಜರಿ ತಯಾರಿ...!

ಮೆಲ್ಬೋರ್ನ್ ಟೆಸ್ಟ್ ನಲ್ಲಿ ಚೊಚ್ಚಲ ಪ್ರವೇಶ :
ಮೊಹಮ್ಮದ್ ಶಮಿ (Mohammed Shami) ಗಾಯಗೊಂಡ ಹಿನ್ನಲೆಯಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಮೆಲ್ಬೋರ್ನ್ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಲು ಅವಕಾಶ ನೀಡಲಾಯಿತು. ಈ ಪಂದ್ಯದಲ್ಲಿ ಸಿರಾಜ್ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾದ ಭರವಸೆಯನ್ನು ಹುಸಿಗೊಳಿಸಿದರು.

ಪ್ರಸ್ತುತ ಪ್ರವಾಸದಲ್ಲಿ ಮೊಹಮ್ಮದ್ ಸಿರಾಜ್ ಅವರ ತಂದೆ ನಿಧನರಾದರು. ಅದಾಗ್ಯೂ ದೇಶಕ್ಕಾಗಿ ಆಡುವ ಅವಕಾಶವನ್ನು ತಪ್ಪಿಸಿಕೊಳ್ಳಲು ಇಚ್ಚಿಸದ ಮೊಹಮ್ಮದ್ ಸಿರಾಜ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾದಲ್ಲಿ ಉಳಿಯಲು ನಿರ್ಧರಿಸಿದರು. ಸಿರಾಜ್ ಅವರ ತಾಯಿ ಸಹ ಫೋನ್‌ನಲ್ಲಿ ಮಾತನಾಡುವಾಗ  'ನಿನ್ನ ತಂದೆಯ ಇಚ್ಚೆಯಂತೆ ಮಾಡು. ಭಾರತಕ್ಕಾಗಿ ಆಡು' ಎಂದು ಹೇಳಿದ್ದಾರೆ. ಗಮನಾರ್ಹವಾಗಿ ಪ್ರತಿ ಪಂದ್ಯದ ಸಮಯದಲ್ಲೂ ಮೊಹಮ್ಮದ್ ಸಿರಾಜ್ ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ : IND vs AUS: ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ XI ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News