Ind vs AFG T20 : ಟಿ20ಐನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ಕಿಂಗ್ ಕೊಹ್ಲಿ

ಕೊಹ್ಲಿ 61 ಎಸೆತಗಳಲ್ಲಿ 122 ರನ್‌ಗಳನ್ನು ಸಿಡಿಸಿದರೆ, ಪಂತ್ 16 ರಲ್ಲಿ 20 ರನ್ ಗಳಿಸಿದರು. ಅಫ್ಘಾನಿಸ್ತಾನಕ್ಕೆ ಈಗ 20.0 ಓವರ್‌ಗಳಲ್ಲಿ ಟೀಂ ಇಂಡಿಯಾ 213 ರನ್‌ಗಳ ಟಾರ್ಗೆಟ್ ನೀಡಿದೆ.   

Written by - Channabasava A Kashinakunti | Last Updated : Sep 8, 2022, 09:23 PM IST
  • ಏಷ್ಯಾ ಕಪ್ 2022 ರಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಕೊನೆಯ
  • ಕೊಹ್ಲಿ ತಮ್ಮ ಮೊದಲ ಟಿ20 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ
  • ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ
Ind vs AFG T20 : ಟಿ20ಐನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ಕಿಂಗ್ ಕೊಹ್ಲಿ  title=

Ind vs AFG, Asia Cup 2022 : ಟೀಂ ಇಂಡಿಯಾ ಏಷ್ಯಾ ಕಪ್ 2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ, ಕೊಹ್ಲಿ ಟಿ20ಯಲ್ಲಿ 3,500 ರನ್ ಮತ್ತುಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ಸಿಡಿಸಿದ್ದಾರೆ. ವಿರಾಟ್ ಅವರ ಅಮೋಘ ಶತಕದ ನಂತರ, ಟೀಂ ಇಂಡಿಯಾ 212/2 ಕ್ಕೆ ತಮ್ಮ ಬ್ಯಾಟಿಂಗ್ ಮುಕ್ತಾಯ ಗೊಳಿಸಿದರು. 

ಕೊಹ್ಲಿ 61 ಎಸೆತಗಳಲ್ಲಿ 122 ರನ್‌ಗಳನ್ನು ಸಿಡಿಸಿದರೆ, ಪಂತ್ 16 ರಲ್ಲಿ 20 ರನ್ ಗಳಿಸಿದರು. ಅಫ್ಘಾನಿಸ್ತಾನಕ್ಕೆ ಈಗ 20.0 ಓವರ್‌ಗಳಲ್ಲಿ ಟೀಂ ಇಂಡಿಯಾ 213 ರನ್‌ಗಳ ಟಾರ್ಗೆಟ್ ನೀಡಿದೆ. 

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಏಷ್ಯಾ ಕಪ್ ಸೂಪರ್ 4 ರ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ಮೊಹಮ್ಮದ್ ನಬಿ ಟಾಸ್ ಗೆದ್ದು ಭಾರತ ವಿರುದ್ಧ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. 

ಈ ಎರಡೂ ತಂಡಗಳು 2022ರ ಏಷ್ಯಾಕಪ್‌ನಿಂದ ಹೊರಬಿದ್ದಿವೆ. ಈ ಎರಡು ತಂಡಗಳು ಸೂಪರ್-4 ನ ಮೊದಲ ಗೆಲುವಿಗಾಗಿ ಕಾದಾಡುತ್ತಿವೆ.

ಸೂಪರ್ 4 ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಮತ್ತೊಂದೆಡೆ, ಅಫ್ಘಾನಿಸ್ತಾನವು ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತು ಮತ್ತು ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು.

ಟೀಂ ಇಂಡಿಯಾ ಪ್ಲೇಯಿಂಗ್ XI : ಕೆಎಲ್ ರಾಹುಲ್(ಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ಡಬ್ಲ್ಯೂ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.

ಅಫ್ಘಾನಿಸ್ತಾನದ ಪ್ಲೇಯಿಂಗ್ XI: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ಡಬ್ಲ್ಯೂ), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ಸಿ), ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಎಫ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News