ಕ್ರಿಕೆಟ್‌ ಜಗತ್ತಿಗೆ ಇದು ಕರಾಳ ದಿನ..! ಬ್ಯಾಟಿಂಗ್‌ ವೇಳೆ ಹೃದಯಾಘಾತದಿಂದ ಕ್ರಿಕೆಟಿಗ ಸಾವು..!!

Imran patel: ಮಹಾರಾಷ್ಟ್ರದ ಪುಣೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪಂದ್ಯ ಆಡುವ ವೇಳೆ ಮೈದಾನದಲ್ಲೇ ಕುಸಿದು ಬಿದ್ದು ಆಟಗಾರರೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗರ್ವಾರೆ ಕ್ರೀಡಾಂಗಣದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಕ್ರಿಕೆಟ್‌ ಜಗತ್ತಿನಲ್ಲಿ ಈ ಘಟನೆ ಆಘಾತ ಮೂಡಿಸಿದೆ.   

Written by - Zee Kannada News Desk | Last Updated : Nov 30, 2024, 07:30 AM IST
  • ಪಂದ್ಯ ಆಡುವ ವೇಳೆ ಮೈದಾನದಲ್ಲೇ ಕುಸಿದು ಬಿದ್ದು ಆಟಗಾರರೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
  • ಗರ್ವಾರೆ ಕ್ರೀಡಾಂಗಣದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಕ್ರಿಕೆಟ್‌ ಜಗತ್ತಿನಲ್ಲಿ ಈ ಘಟನೆ ಆಘಾತ ಮೂಡಿಸಿದೆ.
  • ಬಿರುಸಿನ ಬ್ಯಾಟಿಂಗ್‌ ಮಾಡುತ್ತಿದ್ದ ಇಮ್ರಾನ್‌ಗೆ ಬೌಂಡರಿ ಹೊಡೆಯುತ್ತಿದ್ದಂತೆ, ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು.
ಕ್ರಿಕೆಟ್‌ ಜಗತ್ತಿಗೆ ಇದು ಕರಾಳ ದಿನ..! ಬ್ಯಾಟಿಂಗ್‌ ವೇಳೆ ಹೃದಯಾಘಾತದಿಂದ ಕ್ರಿಕೆಟಿಗ ಸಾವು..!!  title=

Imran patel: ಮಹಾರಾಷ್ಟ್ರದ ಪುಣೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪಂದ್ಯ ಆಡುವ ವೇಳೆ ಮೈದಾನದಲ್ಲೇ ಕುಸಿದು ಬಿದ್ದು ಆಟಗಾರರೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗರ್ವಾರೆ ಕ್ರೀಡಾಂಗಣದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಕ್ರಿಕೆಟ್‌ ಜಗತ್ತಿನಲ್ಲಿ ಈ ಘಟನೆ ಆಘಾತ ಮೂಡಿಸಿದೆ. 

35 ವರ್ಷದ ಇಮ್ರಾನ್ ಪಟೇಲ್ ಆರಂಭಿಕರಾಗಿ ಬ್ಯಾಟಿಂಗ್‌ ಮಾಡಲು ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. ಸ್ವಲ್ಪ ಹೊತ್ತು ಸರಾಗವಾಗಿ ಬ್ಯಾಟಿಂಗ್ ಮಾಡಿ, ಭಾರಿ ಮೊತ್ತದ ರನ್‌ ಕಲೆಹಾಕಿದ್ದರು. ಬಿರುಸಿನ ಬ್ಯಾಟಿಂಗ್‌ ಮಾಡುತ್ತಿದ್ದ ಇಮ್ರಾನ್‌ಗೆ ಬೌಂಡರಿ ಹೊಡೆಯುತ್ತಿದ್ದಂತೆ, ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪಿಚ್‌ನಲ್ಲೆ ಕೂತು ಅವರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಯತ್ನಿಸಿದ್ದರು. 

ನಂತರ, ಅವರ  ಕೈ ಮತ್ತು ಎದೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಅಂಪೈರ್‌ಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ತೀವ್ರವಾದ ನೋವಿನಿಂದ ಬಳಲು ಆರಂಭಿಸಿದ ಅವರನ್ನು ನೋಡಿದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಇಮ್ರಾನ್ ಪಟೇಲ್‌ಗೆ ಮೈದಾನದಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟರು. ಆದರೆ ಪೆವಿಲಿಯನ್ ಹಾದಿ ಹಿಡಿದ ಇಮ್ರಾನ್ ಪಟೇಲ್ ಸ್ವಲ್ಪ ದೂರ ಹೆಜ್ಜೆ ಇಡುತ್ತಿದ್ದಂತೆಯೇ ಕುಸಿದು ಬಿದ್ದರು. ಅಂಪೈರ್‌ಗಳು ಮತ್ತು ಎದುರಾಳಿ ತಂಡದ ಆಟಗಾರರು ಅವರತ್ತ ಓಡಿ ಹೋಗಿ ಅವರ ಸಹಾಯಕ್ಕೆ ದಾವಿಸಿದ್ದರು. 

ಫೀಲ್ಡ್‌ನಲ್ಲಿ ಕುಸಿದು ಬಿದ್ದ ಇಮ್ರಾನ್‌ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಅವರು ಪ್ರಾಣ ಬಿಟ್ಟಿದ್ದರು, ಇದನ್ನು ವೈದ್ಯರು ದೃಢಪಡಿಸಿದ್ದಾರೆ. ಆದರೆ, ಆಲ್ ರೌಂಡರ್ ಆಗಿದ್ದ ಇಮ್ರಾನ್‌ ಅವರು, ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ಚೆನ್ನಾಗಿಯೇ ಇದ್ದರು, ಸದ್ಯ ದಿಢೀರನೇ ಇವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. 

ಇನ್ನೂ, ಇಮ್ರಾನ್‌ಗೆ ಮೂವರು ಮಕ್ಕಳಿದ್ದಾರೆ, ಮೂವರು ಕೂಡ ಹೆಣ್ಣು ಮಕ್ಕಳಾಗಿದ್ದು, ಕಿರಿಯ ಮಗುವಿಗೆ ಇದೀಗ ಕೇವಲ ನಾಲ್ಕು ತಿಂಗಳು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News