ಸರ್ಕಾರದ ಅನುಮತಿಯೊಂದಿಗೆ ಇಮ್ರಾನ್ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವೆ-ಕಪಿಲ್ ದೇವ್

   

Last Updated : Aug 2, 2018, 05:30 PM IST
ಸರ್ಕಾರದ ಅನುಮತಿಯೊಂದಿಗೆ ಇಮ್ರಾನ್ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವೆ-ಕಪಿಲ್ ದೇವ್ title=

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಒಂದು ವೇಳೆ ಆಹ್ವಾನಿಸಿದ್ದರೆ, ಭಾರತ ಸರ್ಕಾರದ ಅನುಮತಿಯೊಂದಿಗೆ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವೆ ಎಂದು  ಹೇಳಿದ್ದಾರೆ.

ಈ ಕುರಿತಾಗಿ  ಪ್ರತಿಕ್ರಯಿಸಿದ ಕಪಿಲ್ ದೇವ್ "ನಾನು ಆಮಂತ್ರಣದ ಬಗ್ಗೆ ಇನ್ನೂ ಪರಿಶೀಲಿಸಿಲ್ಲ,ಆದರೆ ಒಂದು ವೇಳೆ ನನಗೆ ಆಮಂತ್ರಣ ಬಂದದ್ದೆ ಆದರೆ ನಾನು ಖಂಡಿತವಾಗಿ ಸಮಾರಂಭದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಹೋಗುತ್ತೇನೆ" ಎಂದು ಎಎನ್ಐಗೆ ತಿಳಿಸಿದರು.

ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸುನೀಲ್ ಗಾವಸ್ಕರ್, ನವಜೋತ್ ಸಿಂಗ್ ಸಿದ್ದು ಮತ್ತು ನಟ ಅಮೀರ್ ಖಾನ್ ಅವರನ್ನು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಇದೇ ವೇಳೆ ಆಮಂತ್ರಣವನ್ನು ಸ್ವೀಕರಿಸಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮಗೆ ನೀಡಿರುವ ಆಮಂತ್ರಣ ವೈಯಕ್ತಿಕವಾದದ್ದು, ಇದೊಂದು ತಮಗೆ 
ಸಿಕ್ಕಿರುವ ದೊಡ್ಡ ಗೌರವ ಎಂದು ಸಿಧು ತಿಳಿಸಿದ್ದಾರೆ.ಇತ್ತೀಚಿಗೆ ಪಾಕಿಸ್ತಾನದ  272 ರಾಷ್ಟ್ರೀಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪಿಟಿಐ 116 ಸ್ಥಾನಗಳನ್ನು  ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

Trending News