ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್

ICC Test Ranking: ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್ ವಿನ್ನಿಂಗ್ ಆಟ ಆಡಿದ ಬಳಿಕ ರಿಶಭ್ ಪಂತ್ ವಿಶ್ವದ ಅತಿ ಉತ್ತಮ ಶ್ರೇಯಾಂಕ ಪಡೆದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಇದಲ್ಲದ ಮೊಹಮ್ಮದ್ ಶಿರಾಜ್ ಹಾಗೂ ಸುಂದರ್ ಕೂಡ ಶ್ರೇಯಾಂಕ ಪಟ್ಟಿಯಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ.

Written by - Nitin Tabib | Last Updated : Jan 20, 2021, 03:43 PM IST
  • ICC ತಾಜಾ ವಿಶ್ವ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ.
  • ರಿಷಬ್ ಪಂತ್ ಗೆ ವಿಶ್ವದ ಸರ್ವೋತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಪಟ್ಟ.
  • ಪಟ್ಟಿಯಲ್ಲಿ ಉದ್ದದ ಜಿಗಿತ ಕಂಡ ಸಿರಾಜ್ ಹಾಗೂ ಸುಂದರ್.
ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್ title=
ICC Test Ranking(File Photo)

ICC Test Ranking: ದುಬೈ- ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇತ್ತೀಚಿನ ವಿಶ್ವ  ಶ್ರೇಯಾಂಕ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ICCಯ ಈ ಪಟ್ಟಿಯಿಂದ ಭಾರತೀಯ ತಂಡದ ಆಟಗಾರರಿಗೆ ಅತಿ ಲಾಭವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಜಯಗಳಿಸಿದ ನಂತರ ರಿಷಭ್ ಪಂತ್, ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಶ್ರೇಯಾಂಕದಲ್ಲಿ ದೊಡ್ಡ ಜಿಗಿತವನ್ನೇ ಗಮನಿಸಲಾಗಿದೆ. 

ಧಮಾಲ್ ಮಾಡಿದ ರಿಶಬ್ ಪಂತ್
ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಮ್ಯಾಚ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಶಬ್ ಪಂತ್ 89 (ನಾಟ್ ಔಟ್) ಆಟ ಪ್ರದರ್ಶಿಸಿದ್ದರು. ಇದರಿಂದ ಅವರು ವಿಶ್ವದ ಸರ್ವೋತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದ್ದಾರೆ. 

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC Test Ranking) ಬುಧವಾರ ಬಿಡುಗಡೆ ಮಾಡಿರುವ ತಾಜಾ ಶ್ರೇಯಾಂಕ ಪಟ್ಟಿಯಲ್ಲಿ ರಿಷಬ್ ಪಂತ್ 13 ಸ್ಥಾನಕ್ಕೆ ತಲುಪಿದ್ದಾರೆ. ಇದು ಅವರ ವೃತ್ತಿಜೀವನದ ಇದುವರೆಗಿನ ಸರ್ವಶ್ರೇಷ್ಠ ಶ್ರೇಯಾಂಕ ಆಗಿದೆ.

ತನ್ನ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಹೆಸರುವಾಸಿಯಾಗಿರುವ ರಿಷಬ್ ಪಂತ್ ಒಟ್ಟು 691 ಅಂಕ ಗಳಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಅವರ ನಂತರದ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಕ್ರಿಕೆಟ್  ಆಟಗಾರ ಕ್ವೀಟನ್ ಡಿಕಾಕ್ ಅಲಂಕರಿಸಿದ್ದಾರೆ. 677 ಅಂಕಗಳೊಂದಿಗೆ ಅವರು 15 ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ- ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ

ವಿರಾಟ್ ಕೊಹ್ಲಿಗೆ ಹಾನಿ
ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮ್ಯಾನ್ ಆಗಿರುವ ಆಬುಷೆನ್, ಬ್ರಿಸ್ಬೇನ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (862) ಅವರನ್ನು ಶ್ರಿಯಾಂಕ ಪಟ್ಟಿಯಲ್ಲಿ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಲಾಬುಷೆನ್ ಒಟ್ಟು 878 ಅಂಕ ಗಳಿಸಿದ್ದಾರೆ. ಪೇರೆಂಟಲ್ ರಜೆಯ ಕಾರಣ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಟೂರ್ ನ ಕೊನೆಯ ಮೂರು ಪಂದ್ಯಗಳಲ್ಲಿ ಭಾಗವಹಿಸಿರಲಿಲ್ಲ. 

ನ್ಯೂಜಿಲ್ಯಾಂಡ್ ನ ಕೆನ್ ವಿಲಿಯಮ್ಸನ್ (919 ) ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (891) ಈ ಪಟ್ಟಿಯ ಮೊದಲೆರಡು ಸ್ಥಾನದಲ್ಲಿದ್ದಾರೆ. 

ಭಾರತೀಯ ಕ್ರಿಕೆಟ್ ತಂಡದ ಯುವ ಪ್ರತಿಭೆ ಶುಭಮನ್ ಗಿಲ್ ಪಟ್ಟಿಯಲ್ಲಿ ತಮ್ಮ ಮುನ್ನಡೆ ಮುಂದುವರೆಸಿದ್ದಾರೆ. ಇನ್ನೊಂದೆಡೆ ಎರಡನೇ ಇನ್ನಿಂಗ್ಸ್ ನಲ್ಲಿ 91 ರನ್ಸ್ ಗಳ ಮಹತ್ವದ ಕೊಡುಗೆಯ ದಮ್ ಮೇಲೆ ಅವರು 68ನೇ ಸ್ಥಾನದಿಂದ 47ನೇ ಸ್ಥಾನಕ್ಕೆ ಏರಿದ್ದಾರೆ. ಮಧ್ಯ ಕ್ರಮಾಂಕದ ಆಟಗಾರ ಚೇತೆಶ್ವರ್ ಪುಜಾರಾ ಒಂದು ಸ್ಥಾನ ಅಂದರೆ 7 ನೇ ಸ್ಥಾನಕ್ಕೆ ಏರಿದ್ದಾರೆ.

ಇದನ್ನು ಓದಿ-ಕೊಹ್ಲಿ ಹಿಂದಿಕ್ಕಿ ವಿಶ್ವದ ನಂಬರ್ 1 ಟೆಸ್ಟ್ ಆಟಗಾರನ ಪಟ್ಟ ಅಲಂಕರಿಸಿದ ಕೇನ್ ವಿಲಿಯಮ್ಸನ್

ಸಿರಾಜ್ ಹಾಗೂ ಸುಂದರ್ ಅವರಿಗೆ ಲಾಭ
ಬೌಲರ್ ಗಳ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 32 ಸ್ಥಾನಗಳನ್ನು ಹಿಂದಿಕ್ಕಿ 45 ನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಮ್ಯಾಚ್ ನಲ್ಲಿ ಒತ್ತು 6 ವಿಕೆಟ್ ಕಬಳಿಸಿದ್ದು, ಎರಡನೇ ಇನ್ನಿಂಗ್ಸ್ ನ 4 ವಿಕೆಟ್ ಗಳು ಇದರಲ್ಲಿ ಶಾಮೀಲಾಗಿವೆ. 

ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನದ ಮೊದಲ ಟೆಸ್ಟ್ ಪಂದ್ಯವನ್ನಾಡಿರುವ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಕೂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಮ್ಮ ಕೊಡುಗೆಯಿಂದ ರಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಗಳಿಸಲು ಯಶಸ್ವಿಯಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ನಲ್ಲಿ 82 ಹಾಗೂ ಬೌಲಿಂಗ್ ನಲ್ಲಿ 97ನೇ ಸ್ಥಾನಗಳನ್ನು ಅಲಂಕರಿಸಿದ್ದರೆ, ಶಾರ್ದೂಲ್ ಬ್ಯಾಟಿಂಗ್ ಪಟ್ಟಿಯಲ್ಲಿ 113ನೇ ಹಾಗೂ ಬೌಲಿಂಗ್ ಪಟ್ಟಿಯಲ್ಲಿ 65ನೇ ಸ್ಥಾನ ಅಲಂಕರಿಸಿದ್ದಾರೆ. 

ಇದನ್ನು ಓದಿ-ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News