ಐಸಿಸಿ ನೂತನ ಟಿ-20 ರ‍್ಯಾಂಕಿಂಗ್‌: ಟಾಪ್ 10ಕ್ಕೆ ಮರಳಿದ ಕಿಂಗ್ ಕೊಹ್ಲಿ..!

ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಇಬ್ಬರು ಭಾರತೀಯರು ಸ್ಥಾನ ಗಳಿಸಿದ್ದಾರೆ. 

Written by - Puttaraj K Alur | Last Updated : Oct 26, 2022, 06:57 PM IST
  • ಐಸಿಸಿಯ ನೂತನ ಟಿ-20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ
  • ಟಾಪ್ 10 ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ
  • 3ನೇ ಸ್ಥಾನಕ್ಕೆ ಕುಸಿತ ಸೂರ್ಯಕುಮಾರ್ ಯಾದವ್
ಐಸಿಸಿ ನೂತನ ಟಿ-20 ರ‍್ಯಾಂಕಿಂಗ್‌: ಟಾಪ್ 10ಕ್ಕೆ ಮರಳಿದ ಕಿಂಗ್ ಕೊಹ್ಲಿ..! title=
ಟಾಪ್ 10 ಸ್ಥಾನಕ್ಕೆ ಜಿಗಿದ ಕೊಹ್ಲಿ

ನವದೆಹಲಿ: ಭಾನುವಾರ ನಡೆದ ಟಿ-20 ವಿಶ್ವಕಪ್‍ನ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.

ಸೋಲುವ ಪಂದ್ಯದಲ್ಲಿ ಅದ್ಭುತವಾಗಿ ಆಡಿದ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಇದ್ದ ಅಜೇಯ 82 ರನ್ ಗಳಿಸಿ ಮಿಂಚಿದರು. ಈ ಪಂದ್ಯದ ಸ್ಫೋಟಕ ಬ್ಯಾಟಿಂಗ್‍ನಿಂದ ಇದೀಗ ಕಿಂಗ್ ಕೊಹ್ಲಿ ಟಿ-20 ಕ್ರಿಕೆಟ್‍ನ ಟಾಪ್ 10 ಬ್ಯಾಟಿಂಗ್ ಶ್ರೇಯಾಂಕವನ್ನು ಮರಳಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಜೀವನದಲ್ಲಿ ಕಿಂಗ್ ಕೊಹ್ಲಿಯ ಈ 5 ಗುಣ ಅಳವಡಿಸಿಕೊಂಡ್ರೆ ಖಂಡಿತ ಯಶಸ್ಸು ಸಿಗುತ್ತಂತೆ..!

ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಇಬ್ಬರು ಭಾರತೀಯರು ಸ್ಥಾನ ಗಳಿಸಿದ್ದು, ಕೊಹ್ಲಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಸೂರ್ಯ ಕುಮಾರ್ ಯಾದವ್ 828 ಅಂಕಗಳೊಂದಿಗೆ 3ನೇ ಸ್ಥಾನ ಸಂಪಾದಿಸಿದರೆ, ಕೊಹ್ಲಿ 635 ಪಾಯಿಂಟ್‍ಗಳೊಂದಿಗೆ 9ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

849 ಅಂಕಗಳೊಂದಿಗೆ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಝ್ವಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ 831 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ 799 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ ಐಡೆನ್ ಮಾರ್ಕ್ರಾಮ್ 762 ಅಂಕಗಳೊಂದಿಗೆ 5ನೇ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ: T20 World Cup 2022: DLS ನಿಯಮದಡಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್‌ಗೆ ಭರ್ಜರಿ ಗೆಲುವು..!

ವಿಶೇಷವೆಂದರೆ 33 ವರ್ಷದ ವಿರಾಟ್ ಕೊಹ್ಲಿ 5 ಸ್ಥಾನಗಳನ್ನು ಜಿಗಿತ ಕಂಡಿದ್ದು, 9ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಜೇಯ 92 ರನ್ ಗಳಿಸಿದ ಡೆವೊನ್ ಕಾನ್ವೆ ಅವರು ಸೂರ್ಯಕುಮಾರ್ ಯಾದವ್, ಬಾಬರ್ ಅಜಮ್ ಮತ್ತು ಐಡೆನ್ ಮಾರ್ಕ್ರಾಮ್‍ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News