ICC ODI Ranking: ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!

ICC ODI Ranking: ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿ ಮಂಗಳವಾರ, ಜೂನ್ 18ರಂದು ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸ್ಮೃತಿ ಮಂಧಾನ  ಐದನೇ ಸ್ಥಾನದಿಂದ ಮೂರನೇ ಸ್ತಾನಕ್ಕೆ ಬಡ್ತಿ ಪಡೆದಿದ್ದಾರೆ.  

Written by - Zee Kannada News Desk | Last Updated : Jun 19, 2024, 09:02 AM IST
  • ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿ ಮಂಗಳವಾರ, ಜೂನ್ 18ರಂದು ಬಿಡುಗಡೆಯಾಗಿದೆ.
  • ಪಟ್ಟಿಯಲ್ಲಿ ಸ್ಮೃತಿ ಮಂಧಾನ ಐದನೇ ಸ್ಥಾನದಿಂದ ಮೂರನೇ ಸ್ತಾನಕ್ಕೆ ಬಡ್ತಿ ಪಡೆದಿದ್ದಾರೆ.
  • ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 715 ರೇಟಿಂಗ್ ಪಡೆದಿರುವ ಸ್ಮೃತಿ ಮಂಧಾನ
ICC ODI Ranking: ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!  title=

Smriti Mandanna: ಐಸಿಸಿ ಮಹಿಳಾ ಏಕದಿನ (ICC ODI Ranking) ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿ ಮಂಗಳವಾರ, ಜೂನ್ 18ರಂದು ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸ್ಮೃತಿ ಮಂಧಾನ  ಐದನೇ ಸ್ಥಾನದಿಂದ ಮೂರನೇ ಸ್ತಾನಕ್ಕೆ ಬಡ್ತಿ ಪಡೆದಿದ್ದಾರೆ.

ಇತ್ತೀಚೆಗಷ್ಟೇ ಸ್ಮೃತಿ ಮಂಧಾನ(Smriti Mandanna) 7000 ರನ್‌ ಕಲೆಹಾಕಿದ ಎರಡನೇ ಮಹಿಳಾ ಕ್ರಿಕೆಟರ್‌ ಆಗಿ ದಾಖಲೆ ಸೃಷ್ಟಿಸಿದ್ದರು. 

ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 715 ರೇಟಿಂಗ್ ಪಡೆದಿರುವ ಸ್ಮೃತಿ ಮಂಧಾನ ಇಂಗ್ಲೆಂಡ್‌ನ ನತಾಲಿ ಸ್ಕಿವರ್-ಬ್ರಂಟ್ (Nat Sciver-Brunt) ಹಾಗೂ ಶ್ರೀಲಂಕಾದ ಚಾಮರಿ ಅಥಾಪತ್ತು (chamari athapaththu) ಅವರ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: T 20 Worldcup 2024: 'ಮ್ಯಾಚ್ ಫಿಕ್ಸಿಂಗ್' ಆರೋಪ..? ಸ್ಟಾರ್‌ ತಂಡಕ್ಕೆ ಎದುರಾಯ್ತು ದೊಡ್ಡ ಕಂಟಕ..!

ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ಸ್ಮೃತಿ ಮಂಧಾನ ಆರ್‌ಸಿಬಿ (RCB) ತಂಡದಲ್ಲಿ ನಾಯಕಿಯಾಗಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಡ್ಡಿದ್ದರು. ಈ ಗೆಲುವಿನ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ 117 ರನ್‌ ಕಲೆಹಾಕುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದರು.

ದಕ್ಷಿಣ ಆಫ್ರಿಕಾದ ವಿರುದ್ಧ ಶತಕ ಸಿಡಿಸುವ ಮೂಲಕ, ಎಲ್ಲಾ ವಿಭಾಗದ ಕ್ರಿಕೆಟ್‌ನಲ್ಲಿ 7000 ರನ್‌ ಕಲೆಹಾಕಿದ್ದರು. ಈ ಮೂಲಕ ಈಸಾಧನೆ ಮಾಡಿದ ಎರಡನೇ ಭಾರತ ಮಹಿಳಾ ಆಟಗಾರ್ತಿ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News