ICC CRICKET WORLD CUP 2019 : ಭಾರತಕ್ಕೆ 240 ರನ್ ಗೆಲುವಿನ ಗುರಿ ನೀಡಿದ ನ್ಯೂಜಿಲೆಂಡ್

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು 50 ಓವರ್ ಗಳಲ್ಲಿ 8 ವಿಕೆಟ್  ನಷ್ಟಕ್ಕೆ 239 ರನ್ ಗಳಿಸಿದೆ.

Last Updated : Jul 10, 2019, 03:42 PM IST
ICC CRICKET WORLD CUP 2019 : ಭಾರತಕ್ಕೆ 240 ರನ್ ಗೆಲುವಿನ ಗುರಿ ನೀಡಿದ ನ್ಯೂಜಿಲೆಂಡ್  title=

ನವದೆಹಲಿ: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು 50 ಓವರ್ ಗಳಲ್ಲಿ 8 ವಿಕೆಟ್  ನಷ್ಟಕ್ಕೆ 239 ರನ್ ಗಳಿಸಿದೆ.

ಭಾರತದ ಪರವಾಗಿ ಭುವನೇಶ್ವರ ಕುಮಾರ್ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್  ಬೆನ್ನೆಲುಬು ಮುರಿದರು.ಆರಂಭದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರು ಎರಡು ಮೇಡನ್ ಓವರ್ ಗಳ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಕಾಡಿದರು. ಇದೇ ವೇಳೆ ಆಗತಾನೆ ಒಂದು ರನ್ ಗಳಿಸಿದ್ಧ ನ್ಯೂಜಿಲೆಂಡ್ ತಂಡದ  ಮಾರ್ಟಿನ್ ಗುಪ್ಟಿಲ್, ಬುಮ್ರಾ ಅವರ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾದ ನಂತರ ರಕ್ಷಣಾತ್ಮಾಕ ಆಟಕ್ಕೆ ಮೊರೆಹೋದ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಿಗೆ ಕಾದಿತ್ತು. ರವಿಂದ್ರ ಜಡೇಜಾ ಬೌಲಿಂಗ್ ನಲ್ಲಿ ಹೆನ್ರಿ ನಿಕೊಲಸ್ ಬೌಲ್ಡ್ ಆದರು. 

ಇದಾದ ನಂತರ ಕೆನ್ ವಿಲಯಮ್ಸನ್  ಮತ್ತು ರಾಸ್ ಟೇಲರ್ ಜೊತೆಯಾಗಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ನೆರವಾದರು. ಇಬ್ಬರು ಕ್ರಮವಾಗಿ 67 ಹಾಗೂ 74 ರನ್ ಗಳನ್ನು ಗಳಿಸಿದರು. ಮಂಗಳವಾರದಂದು ನ್ಯೂಜಿಲೆಂಡ್ ತಂಡವು 46.1 ಓವರ್ ಗಳಲ್ಲಿ 211 ರನ್ ಗಳಿಸಿತ್ತು. ಆದರೆ ಮಳೆ ಬಂದ ಕಾರಣ ಪಂದ್ಯವನ್ನು ಬುಧುವಾರಕ್ಕೆ ಮೀಸಲಿಡಲಾಗಿತ್ತು. ಇಂದು ಮತ್ತೆ ಪ್ರಾರಂಭವಾದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 28 ರನ್ ಸೇರಿಸುವ ಮೂಲಕ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದೆ.

Trending News