ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ದ 5-0 ಅಂತರದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ಪುರುಷರ ಹಾಕಿ ವಿಶ್ವಕಪ್ 14 ನೆಯ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 5-0 ಗೋಲುಗಳಿಂದ ಜಯಗಳಿಸುವ ಮೂಲಕ ಭಾರತ ತಂಡವು ವಿಶ್ವಕಪ್ ನಲ್ಲಿ ಭರ್ಜರಿ ಆರಂಭ ಕಂಡಿದೆ.

Last Updated : Nov 28, 2018, 09:23 PM IST
ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ದ 5-0 ಅಂತರದಲ್ಲಿ ಭಾರತಕ್ಕೆ ಭರ್ಜರಿ ಗೆಲುವು title=
photo:@TheHockeyIndia

ನವದೆಹಲಿ: ಪುರುಷರ ಹಾಕಿ ವಿಶ್ವಕಪ್ 14 ನೆಯ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 5-0 ಗೋಲುಗಳಿಂದ ಜಯಗಳಿಸುವ ಮೂಲಕ ಭಾರತ ತಂಡವು ವಿಶ್ವಕಪ್ ನಲ್ಲಿ ಭರ್ಜರಿ ಆರಂಭ ಕಂಡಿದೆ.

ಮಂದೀಪ್ ಸಿಂಗ್ ಅವರು ಭಾರತ ತಂಡದ ಪರ ಮೊದಲ ಗೋಲಿನಖಾತೆ ತೆರೆದರು.ತದನಂತರ ಆಕಾಶ್ ದೀಪ ಸಿಂಗ್ ಮತ್ತು ಲಲಿತ್ ಉಪಾಧ್ಯಾಯರು ಕೂಡಾ ಗೋಲು ಗಳಿಸಿದರು.

ಸಿಮ್ರಾಂಜೀತ್ ಸಿಂಗ್ ಎರಡು ಗೋಲು ಗಳಿಸಿಸುವ ಮೂಲಕ ಭಾರತವು ದ.ಆಫ್ರಿಕಾ ವಿರುದ್ದ ಪ್ರಾಬಲ್ಯ ಮೆರೆಯುವಂತೆ ಮಾಡಿದರು. ಮುಂದಿನ ಪಂದ್ಯದಲ್ಲಿ ಭಾರತ ತಂಡವು ವಿಶ್ವದ ನ೦ 3ನೇ ರ್ಯಾಂಕ್ ಹೊಂದಿರುವ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. 

Trending News