Team India : ಟಿ20 ವಿಶ್ವಕಪ್ 2022 ರಲ್ಲಿ, ಭಾರತ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ಟೀಂ ಇಂಡಿಯಾಗೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದೀಗ ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಈ ಸ್ಟಾರ್ ಆಟಗಾರನನ್ನು 2024 ರ ವಿಶ್ವಕಪ್‌ಗೆ ಟಿ20 ತಂಡದ ಕ್ಯಾಪ್ಟನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಹಾಗಿದ್ರೆ ಆ ಆಟಗಾರ ಯಾರು? ಇಲ್ಲಿದೆ ನೋಡಿ...
ಶ್ರೀಕಾಂತ್ ಈ ಹೇಳಿದ್ದು ಯಾರಿಗೆ?
ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೃಷ್ಣಮಾಚಾರಿ ಶ್ರೀಕಾಂತ್, 'ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, 2024 ರ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯನನ್ನು ನಾಯಕನಾಗಿರಬೇಕು ಎಂದು ಹೇಳುತ್ತಿದ್ದೆ. ನಾನೇ ನೇರವಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ, 'ಇಂದಿನಿಂದಲೇ ತಂಡವನ್ನು ಪುನರ್ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಬೇಕು. ವಾರದೊಳಗೆ ಆರಂಭವಾಗಲಿರುವ ನ್ಯೂಜಿಲೆಂಡ್ ಸರಣಿಯಿಂದಲೇ ಈ ಕೆಲಸ ಆರಂಭವಾಗಬೇಕು ಎಂದು ಹೇಳಿದರು.
ಇದನ್ನೂ ಓದಿ : ಐಪಿಎಲ್ಗೆ ಗುಡ್ ಬೈ ಹೇಳಿದ ಈ ಸ್ಟಾರ್ ಆಟಗಾರ!
'ವಿಶ್ವಕಪ್ ಗಾಗಿ ತಯಾರಿ ಇವತ್ತೇ ಶುರು ಮಾಡ್ಬೇಕು'
ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮ ಮಾತನಾಡಿದ ಶ್ರೀಕಾಂತ್, 'ಇವತ್ತೇ ಶುರು ಮಾಡ್ಬೇಕು. ವಿಶ್ವಕಪ್ ತಯಾರಿಗಾಗಿ, ನೀವು ಕೆಲ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಎರಡು ವರ್ಷಗಳ ಮುಂಚಿತವಾಗಿ ತಯಾರಿಯನ್ನು ಪ್ರಾರಂಭಿಸಬೇಕು. ಆದ್ದರಿಂದ ನೀವು ಏನನ್ನು ಮಾಡಲು ಬಯಸುತ್ತೀರಿ, ಅದು ಕೆಲವು ರೀತಿಯ ಪ್ರಯೋಗ ಅಥವಾ ಏನಾದರೂ ಆಗಿರಲಿ, ಅದನ್ನು ಒಂದು ವರ್ಷದೊಳಗೆ ಮಾಡಿ. 2023 ರ ವೇಳೆಗೆ ತಂಡವನ್ನು ಸಿದ್ಧಪಡಿಸಿ, ಈ ತಂಡವು ವಿಶ್ವಕಪ್‌ನಲ್ಲಿ ಆಡುವುದನ್ನು ಖಚಿತಪಡಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಆಲ್‌ರೌಂಡರ್‌ಗಾಗಿ ಹುಡುಕಾಟ ನಡೆಸಬೇಕಿದೆ!
ಆಫ್. ಮುಂದುವರಿದು ಮಾತನಾಡಿದ ಶ್ರೀಕಾಂತ್, 'ನಿಮಗೆ ಹೆಚ್ಚು ವೇಗದ ಬೌಲಿಂಗ್ ಆಲ್ ರೌಂಡರ್ ಗಳು ಬೇಕು. ನೀವು 1983 ರ ವಿಶ್ವಕಪ್, 2011 ರ ವಿಶ್ವಕಪ್ ಮತ್ತು 2007 ರ ಟಿ20 ವಿಶ್ವಕಪ್ ಅನ್ನು ನೋಡಿದರೆ. ನಾವು ಇವುಗಳನ್ನು ಹೇಗೆ ಗೆದ್ದಿದ್ದೇವೆ, ಏಕೆಂದರೆ ನಾವು ಹೆಚ್ಚು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳನ್ನು ಹೊಂದಿದ್ದೇವು ಮತ್ತು ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡುವ ಕೆಲವು ಆಟಗಾರರು ಇದ್ದರು. ಅವರಂತೆ ಇನ್ನೂ ಅನೇಕ ಆಟಗಾರರು ಇದ್ದರು ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ
ಶುಕ್ರವಾರದಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ಸರಣಿಯಲ್ಲಿ ಭಾರತ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಹಲವು ಏಕದಿನ ಪಂದ್ಯಗಳನ್ನು ಆಡಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಕಡಿಮೆ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : T20 World Cup ಕೈತಪ್ಪಲು ರೋಹಿತ್ ಹಠವೇ ಮುಖ್ಯ ಕಾರಣ! ಈ ಆಟಗಾರರಿಗೆ ಅವಕಾಶ ನೀಡದ್ದೇ ತಪ್ಪಾಯ್ತು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.