Hardik Pandya-Virat Kohli: ಮೈದಾನದಲ್ಲಿಯೇ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿದ್ರಾ ಹಾರ್ದಿಕ್! ಈ ವಿಡಿಯೋ ನೋಡಿದ್ರೆ ಹಾಗೆ ಅನ್ಸುತ್ತೆ

Hardik Pandya-Virat Kohli: ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ದೃಶ್ಯವೊಂದರ ತುಣುಕು ವೈರಲ್ ಆಗಿದೆ. ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ನಡುವೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಾರ್ದಿಕ್ ಅವರನ್ನು ಕಡೆಗಣನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

Written by - Bhavishya Shetty | Last Updated : Mar 19, 2023, 06:42 PM IST
    • ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ
    • ಆಸ್ಟ್ರೇಲಿಯಾ ವಿರುದ್ಧ 50 ಓವರ್‌ಗಳ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದರು.
    • ಪಂದ್ಯದ ವೇಳೆ ಸಂಭಾಷಣೆ ನಡೆಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
Hardik Pandya-Virat Kohli: ಮೈದಾನದಲ್ಲಿಯೇ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿದ್ರಾ ಹಾರ್ದಿಕ್! ಈ ವಿಡಿಯೋ ನೋಡಿದ್ರೆ ಹಾಗೆ ಅನ್ಸುತ್ತೆ  title=
Virat Kohli Hardik Pandya Video

Hardik Pandya ignores Virat Kohli Video: ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ವಿರುದ್ಧ 50 ಓವರ್‌ಗಳ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಅವರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ T20I ಗಳಲ್ಲಿ ಭಾರತದ ನಾಯಕತ್ವವನ್ನು ವಹಿಸಿದ್ದರೂ ಸಹ ಇದು ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪೂರ್ಣ-ಶಕ್ತಿಯ ಭಾರತೀಯ ತಂಡವನ್ನು ಮುನ್ನಡೆಸಿದರು.

ಇದನ್ನೂ ಓದಿ: Ugadi 2023: ಈ ರಾಶಿಯವರ ಬಾಳಲ್ಲಿ ಅದೃಷ್ಟ ಹೊತ್ತು ಬರಲಿದೆ ಯುಗಾದಿ, ಮುಟ್ಟಿದ್ದೆಲ್ಲ ಚಿನ್ನವಾಗುವ ವರ್ಷ

ನಾಯಕ ರೋಹಿತ್ ಶರ್ಮಾ ಕುಟುಂಬದಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಹಾರ್ದಿಕ್ ಪಾಂಡ್ಯಾಗೆ ಭಾರತ ತಂಡದ ನಾಯಕತ್ವದ ಅವಕಾಶ ಒದಗಿ ಬಂದಿತ್ತು. ಪಾಂಡ್ಯ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.  

ಗೆಲುವಿನ ಹೊರತಾಗಿಯೂ ಪಾಂಡ್ಯ, ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ಪಂದ್ಯದ ವೇಳೆ ಸಂಭಾಷಣೆ ನಡೆಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ವಿರಾಟ್ ಮಾತು ಮುಗಿಸುವ ಮುನ್ನವೇ ಪಾಂಡ್ಯ ಥಟ್ಟನೆ ಸಂಭಾಷಣೆಯಿಂದ ನಿರ್ಗಮಿಸಿದ್ದು, ಕೊಹ್ಲಿ ದಿಗ್ಭ್ರಮೆಗೊಂಡಂತೆ ಕಾಣಿಸುತ್ತಿದೆ. ಕ್ಲಿಪ್ ಸಂಪೂರ್ಣತೆಯನ್ನು ಬಹಿರಂಗಪಡಿಸದಿದ್ದರೂ, ಪಾಂಡ್ಯ ಅವರು ಚರ್ಚೆಯಿಂದ ಹಠಾತ್ ನಿರ್ಗಮಿಸಿರುವುದು ಅನೇಕರನ್ನು ಆಶ್ಚರ್ಯಗೊಳಿಸಿದೆ.

ಸರಣಿಯ ಎರಡನೇ ಏಕದಿನ ಪಂದ್ಯವು ಮಾರ್ಚ್ 19 ರಂದು ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಆದರೆ ಬ್ಯಾಟಿಂಗ್ ವೈಫಲ್ಯದಿಂದ ಟೀಂ ಇಂಡಿಯಾ ಆಸೀಸ್ ಎದುರು ಹೀನಾಯ ಸೋಲು ಕಂಡಿದೆ.  

ಇದನ್ನೂ ಓದಿ: Mrunal Thakur: ಬಾಡಿಸೂಟ್ ಧರಿಸಿ ಬೀಚ್ ಬಳಿ ಫೋಸ್‌ ನೀಡಿದ ಮೃಣಾಲ್ ಠಾಕೂರ್

ಆಸ್ಟ್ರೇಲಿಯನ್ ತಂಡದ ವಿರುದ್ಧ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ಪಾಂಡ್ಯ ಅವರ ODI ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಪಂದ್ಯದ ಸಮಯದಲ್ಲಿ ಕೊಹ್ಲಿ ಮತ್ತು ಯಾದವ್ ಅವರೊಂದಿಗಿನ ಸಂಭಾಷಣೆಯಿಂದ ಅವರ ಹಠಾತ್ ನಿರ್ಗಮನವು ಕೆಲವರಲ್ಲಿ ಆಶ್ವರ್ಯ ಉಂಟು ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News