IND vs NZ: ಪಾಂಡ್ಯರಿಂದ ಸಿಗುತ್ತಾ ಈ ಆಟಗಾರನಿಗೆ ಅವಕಾಶ: ಒಂದೇ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ ಈ ಕ್ರಿಕೆಟರ್!

India vs New Zealand T20 Series, Jitesh Sharma Stats: ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 90 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಇದರೊಂದಿಗೆ ಏಕದಿನ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿದೆ. ಇದೀಗ ಟಿ20ಯಲ್ಲಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ನಾಯಕನೂ ಬದಲಾಗಲಿದ್ದಾರೆ.

Written by - Bhavishya Shetty | Last Updated : Jan 25, 2023, 11:16 PM IST
    • ಭಾರತ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ
    • ಇದರೊಂದಿಗೆ ಏಕದಿನ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿದೆ.
    • ಇದೀಗ ಟಿ20ಯಲ್ಲಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ನಾಯಕನೂ ಬದಲಾಗಲಿದ್ದಾರೆ
IND vs NZ: ಪಾಂಡ್ಯರಿಂದ ಸಿಗುತ್ತಾ ಈ ಆಟಗಾರನಿಗೆ ಅವಕಾಶ: ಒಂದೇ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ ಈ ಕ್ರಿಕೆಟರ್!  title=
India Cricket Team

India vs New Zealand T20 Series, Jitesh Sharma Stats: ಭಾರತ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿದೆ. ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತು. ಇದೀಗ ಟೀಂ ಇಂಡಿಯಾ ಈ ಎದುರಾಳಿಯ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಇದರಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ನಿಭಾಯಿಸಲಿದ್ದಾರೆ. ಈ ಹಿಂದೆ ಭಾರತ ಮತ್ತು ಶ್ರೀಲಂಕಾ ವಿರುದ್ಧ ಸರಣಿಯನ್ನು ಆಡಲಾಗಿತ್ತು, ಇದರಲ್ಲಿ ಓರ್ವ ಆಟಗಾರನಿಗೆ ಆಯ್ಕೆಗಾರರು ಅವಕಾಶ ನೀಡಿದ್ದರೂ ಸಹ ಪ್ಲೇಯಿಂಗ್-11 ರಲ್ಲಿ ಸ್ಥಾನ ಪಡೆಯದೆ ಮರಳಿದ್ದರು. ಈಗ ಆ ಕ್ರಿಕೆಟಿಗನಿಗೆ ಹಾರ್ದಿಕ್ ಅವಕಾಶ ನೀಡುತ್ತಾರೋ ಅಥವಾ ಅವಕಾಶಕ್ಕಾಗಿ ಕಾಯುತ್ತಾರೋ ಕಾದು ನೋಡಬೇಕಿದೆ.

ಇದನ್ನೂ ಓದಿ: Virat Kohli : ನಾನು ನಂಬರ್-1, ನನ್ನ ನಂತರ ವಿರಾಟ್.. ಪಾಕ್ ಕ್ರಿಕೆಟಿಗನ ವಿವಾದಿತ ಹೇಳಿಕೆ!

ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 90 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಇದರೊಂದಿಗೆ ಏಕದಿನ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿದೆ. ಇದೀಗ ಟಿ20ಯಲ್ಲಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ನಾಯಕನೂ ಬದಲಾಗಲಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರೆ, ಸೂರ್ಯಕುಮಾರ್ ಯಾದವ್ ಉಪನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಶಾನ್ ಕಿಶನ್ ಮತ್ತು ಜಿತೇಶ್ ಶರ್ಮಾ ಇಬ್ಬರು ಆಟಗಾರರನ್ನು ವಿಕೆಟ್ ಕೀಪರ್‌ಗಳಾಗಿ ಸೇರಿಸಲಾಗಿದೆ.

ದೇಶಿಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಅವರು ಇತ್ತೀಚೆಗೆ ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಗ್ರೂಪ್-ಡಿ ಪಂದ್ಯದಲ್ಲಿ 130 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದರು. 53 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ 69 ರನ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 10 ರನ್ ಗಳಿಸಿ ಔಟಾದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ತಂಡದ ಅಗ್ರ ಸ್ಕೋರರ್ ಎನಿಸಿಕೊಂಡರು. ಶ್ರೀಲಂಕಾ ವಿರುದ್ಧದ ಟಿ 20 ಸರಣಿಗಾಗಿ ಅವರನ್ನು ತಂಡದಲ್ಲಿ ಸೇರಿಸಲಾಗಿತ್ತು. ಆದರೆ ಪ್ಲೇಯಿಂಗ್-11 ರ ಭಾಗವಾಗಲು ಸಾಧ್ಯವಾಗಲಿಲ್ಲ.

29ರ ಹರೆಯದ ಜಿತೇಶ್ ಶರ್ಮಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತಂಡದಲ್ಲಿ ಸೇರ್ಪಡೆಗೊಂಡಿದ್ದರು. ಕೇರಳದ ಸ್ಟಾರ್ ಸಂಜು ಸ್ಯಾಮ್ಸನ್ ಗಾಯಗೊಂಡ ನಂತರ, ಅವರು ತಂಡಕ್ಕೆ ಆಯ್ಕೆಯಾದರು ಆದರೆ ಹಾರ್ದಿಕ್ ಪಾಂಡ್ಯ ಅವರಿಗೆ ಅವರ ನಾಯಕತ್ವದಲ್ಲಿ ಪ್ಲೇಯಿಂಗ್-11 ರಲ್ಲಿ ಅವಕಾಶ ನೀಡಲಿಲ್ಲ. ನಂತರ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾದಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿಲ್ಲ. ಈಗ ಅವರಿಗೆ ಟಿ20ಯಲ್ಲಿ ಅವಕಾಶ ಸಿಗಲಿದೆ ಆದರೆ ವಿಕೆಟ್‌ಕೀಪರ್ ಆಗಿ ಹಾರ್ದಿಕ್ ಯಾವ ಆಟಗಾರನನ್ನು ನಂಬುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ Suryakumar Yadav: ‘ICC T20I ವರ್ಷದ ಕ್ರಿಕೆಟಿಗ-2022’ ಪ್ರಶಸ್ತಿಗೆ ಭಾಜನರಾದ ಮಿಸ್ಟರ್ 360

ಜಿತೇಶ್ ವೃತ್ತಿ ಜೀವನ ಹೇಗಿದೆ?

ಜಿತೇಶ್ ಶರ್ಮಾ 2013-14ನೇ ಸಾಲಿನಲ್ಲಿ ವಿದರ್ಭದ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. ಅಂದಿನಿಂದ ಅವರು ಈ ತಂಡದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಇದುವರೆಗೆ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 4 ಅರ್ಧ ಶತಕ ಸೇರಿದಂತೆ ಒಟ್ಟು 632 ರನ್ ಗಳಿಸಿದ್ದಾರೆ. ಲಿಸ್ಟ್-ಎಯಲ್ಲಿ ಅವರು 47 ಪಂದ್ಯಗಳಲ್ಲಿ 2 ಶತಕ ಮತ್ತು 7 ಅರ್ಧ ಶತಕಗಳ ಸಹಾಯದಿಂದ ಒಟ್ಟು 1350 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News